ಗುಜರಾತ್ : ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಬಿಜೆಪಿ
ಅಹಮದಾಬಾದ್, ನವೆಂಬರ್ 27: ಆಡಳಿತಾರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಆರನೇ ಹಾಗೂ ಅಂತಿಮ ಪಟ್ಟಿಯನ್ನು ಸೋಮವಾರದಂದು ಬಿಡುಗಡೆ ಮಾಡಿದೆ. ಕೊನೆ ಪಟ್ಟಿಯಲ್ಲಿ 34 ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ.
ಮೊದಲ ಪಟ್ಟಿಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಡಿಸಿಎಂ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿದಂತೆ ಪ್ರಮುಖರಿದ್ದ 70 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿತ್ತು.

ನಂತರ 36 ಮಂದಿ ಅಭ್ಯರ್ಥಿಗಳಿರುವ ಎರಡನೇ ಪಟ್ಟಿ ಪ್ರಕಟವಾಗಿತ್ತು. 28 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನಾಲ್ಕನೇ ಪಟ್ಟಿಯಲ್ಲಿ ಓರ್ವ ಅಭ್ಯರ್ಥಿ ಹಾಗೂ ಐದನೇ ಪಟ್ಟಿಯಲ್ಲಿ 13 ಮಂದಿಯನ್ನು ಹೆಸರಿಸಲಾಗಿದೆ.
ಸತತ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿ.ಜೆ.ಪಿ. ಈ ಬಾರಿ ಹಾಲಿ 121 ಶಾಸಕರಲ್ಲಿ 35 ಮಂದಿಗೆ ಟಿಕೆಟ್ ನಿರಾಕರಿಸಿದೆ.
ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ 93 ಕ್ಷೇತ್ರಗಳಿಗೆ ಡಿಸೆಂಬರ್ 14ರಂದು ನಡೆಯಲಿದೆ. 182 ವಿಧಾನಸಭಾ ಕ್ಷೇತ್ರಗಳ ಗುಜರಾತ್ ವಿಧಾಸಭೆಗೆ ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications