ಹೊಸ ಸಿಮ್ ಕಾರ್ಡ್ ಖರೀದಿದಾರರೇ ಎಚ್ಚರ! ಸರ್ಕಾರದಿಂದ ಹೊಸ ನಿಯಮ ಜಾರಿ; ಬಿಳಲಿದೆ 10 ಲಕ್ಷ ದಂಡ!?
ದೆಹಲಿ, ಸೆಪ್ಟೆಂಬರ್ 02: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಹೊಸ ಸಿಮ್ ಕಾರ್ಡ್ ಖರೀದಿದಾರರು ಎಚ್ಚರಿಕೆವಹಿಸಬೇಕಾಗಿದೆ. ಯಾಕೆಂದರೆ, ಈಗ ಸರ್ಕಾರ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಹೊರಡಿಸಿದೆ.
ಹೌದು, ಹಲವು ಜನರು ನಕಲಿ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಮೂಲಕ ಅಪರಾಧಗಳನ್ನು ಸಹ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳುವ ಮೂಲಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಅಡಿಯಲ್ಲಿ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಬಹುದು. 10 ಲಕ್ಷ ದಂಡ ವಿಧಿಸಬಹುದಾದ ಪರಿಸ್ಥಿತಿ ಏನಾಗಬಹುದು ಎಂಬುದನ್ನ ನಾವು ನಿಮಗೆ ತಿಳಿಸುತ್ತೇವೆ.

ಹೊಸ ನಿಯಮಗಳ ಪ್ರಕಾರ, ನೋಂದಾಯಿಸದ ಮಾರಾಟಗಾರರ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಟೆಲಿಕಾಂ ಕಂಪನಿಗಳಿಗೆ ರೂ 10 ಲಕ್ಷ ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ದೂರಸಂಪರ್ಕ ಇಲಾಖೆ ಗುರುವಾರ ಸುತ್ತೋಲೆಯಲ್ಲಿ ಈ ಮಾಹಿತಿ ನೀಡಿದೆ. ಸಿಮ್ ಕಾರ್ಡ್‌ಗಳ ಮೋಸದ ಮಾರಾಟವನ್ನು ತಡೆಯಲು ಮಾಡಲಾದ ಹೊಸ ನಿಯಮಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ. ಟೆಲಿಕಾಂ ಕಂಪನಿಗಳು ಸೆಪ್ಟೆಂಬರ್ 30 ರ ಮೊದಲು ತಮ್ಮ ಎಲ್ಲಾ ಮಾರಾಟ ಕೇಂದ್ರಗಳನ್ನು (ಪಿಒಎಸ್) ನೋಂದಾಯಿಸಿಕೊಳ್ಳಬೇಕಾಗಿದೆ.
ನಕಲಿ ಸಿಮ್ ಕಾರ್ಡ್ ಮೂಲಕ ಅಪರಾಧ ಎಸಗಲು ಜನರಿಗೆ ಅವಕಾಶ ಸಿಗುತ್ತದೆ. ಇದನ್ನು ತಡೆಯಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಸುತ್ತೋಲೆಯ ಪ್ರಕಾರ, ಪರವಾನಗಿದಾರರು ಸೆಪ್ಟೆಂಬರ್ 30 ರ ನಂತರ ಯಾವುದೇ ಹೊಸ ಪಿಒಎಸ್ ನೋಂದಣಿ ಇಲ್ಲದೆ ಗ್ರಾಹಕರ ನೋಂದಣಿಗೆ ಅವಕಾಶ ನೀಡಿದರೆ, ಸಂಬಂಧಪಟ್ಟ ಪರವಾನಗಿ ಸೇವಾ ಪ್ರದೇಶವು ಪ್ರತಿ ಪರವಾನಗಿದಾರರಿಗೆ ಪ್ರತಿ ಪಿಒಎಸ್‌ಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸುತ್ತದೆ. ನೋಂದಣಿಯಾಗದ ಮಾರಾಟ ಕೇಂದ್ರಗಳ ಮೂಲಕ ಸಕ್ರಿಯಗೊಳಿಸಲಾದ ಎಲ್ಲಾ ಮೊಬೈಲ್ ಸಂಪರ್ಕಗಳನ್ನು ಸಹ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಮರು ಪರಿಶೀಲಿಸಲಾಗುತ್ತದೆ.
ಇನ್ನು ಅಸ್ತಿತ್ವದಲ್ಲಿರುವ ಎಲ್ಲಾ ಸಿಮ್ ಮಾರಾಟ ಕೇಂದ್ರಗಳು ದಾಖಲೆಗಳನ್ನು ಸಲ್ಲಿಸಬೇಕು ಮತ್ತು ಸೆಪ್ಟೆಂಬರ್ ಅಂತ್ಯದ ಮೊದಲು ನೋಂದಾಯಿಸಿಕೊಳ್ಳಬೇಕು. ರೀಚಾರ್ಜ್ / ಬಿಲ್ಲಿಂಗ್ ಚಟುವಟಿಕೆಗಳಿಗೆ ಮಾತ್ರ ನೇಮಕಗೊಂಡ PoS ನ ನೋಂದಣಿ ಅಗತ್ಯವಿರುವುದಿಲ್ಲ. ನೋಂದಣಿಗಾಗಿ ಚಿಲ್ಲರೆ ವ್ಯಾಪಾರಿಯು ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, PAN, ಸರಕು ಮತ್ತು ಸೇವಾ ತೆರಿಗೆ (GST) ನೋಂದಣಿ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ.











Click it and Unblock the Notifications