Go First Airlines: ಆರ್ಥಿಕ ಬಿಕಟ್ಟಿಗೆ ಸಿಲುಕಿದ ಗೋ ಫಸ್ಟ್ ಸಂಸ್ಥೆಯ ವಿಮಾನ ಹಾರಾಟ ಮೇ 9ರವರೆಗೆ ರದ್ದು
ನವದೆಹಲಿ, ಮೇ 04: ಕಾರ್ಯಾಚರಣೆ, ಆರ್ಥಿಕ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ಮೇ 5 ರವೆರೆಗೆ ರದ್ದಾಗಿದ್ದ ಗೋ ಫಸ್ಟ್ ಏರ್ಲೈನ್ಸ್ ವಿಮಾನಗಳ ಹಾರಾಟ ಇದೀಗ ಮೇ 9 ರವರೆಗೂ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ ವಿಮಾನ ಹಾರಾಟ ರದ್ದಾಗಿದ್ದು, ಪ್ರಯಾಣಿಕರಿಗೆ ಟಿಕೆಟ್ ಹಣ ಹಿಂತಿರುಗಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.
Due to operational reasons, Go First flights until 9th May 2023 are cancelled: Go First pic.twitter.com/8AXbgyeY2o
— ANI (@ANI) May 4, 2023
ಗೋ ಫಸ್ಟ್ ಏರ್ಲೈನ್ಸ್ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಮೇ 9 ರವರೆಗೆ ನಿಗದಿಪಡಿಸಲಾದ ಗೋ ಫಸ್ಟ್ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ಭಾರತೀಯ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ಮೊದಲು ಮೇ 5ರವರೆಗೆ ಮಾತ್ರ ಹಾರಾಟ ರದ್ದು ಎಂದು ಸಂಸ್ಥೆ ಹೇಳಿತ್ತು.

ಗೋ ಫಸ್ಟ್ ಸುಮಾರು 9000 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರಣದಿಂದಲೇ ಸಂಸ್ಥೆ ಆರ್ಥಿಕವಾಗಿ ದಿವಾಳಿ ಯಾದ ಗೋ ಫಸ್ಟ್ ಕಂಪನಿ ದಿವಾಳಿತನ ಅರ್ಜಿ ಪ್ರಕ್ರಿಯೆ ಪೂರೈಕೆಯ ಸಮಯಕ್ಕಾಗಿಯೇ ಮೇ 5 ರವರೆಗೆ ವಿಮಾನಯಾನ ಸೇವೆ ರದ್ದು ಮಾಡುವುದಾಗಿ ಹೇಳಿತೇ ಎಂದನಿಸುತ್ತಿದೆ. ಇದನ್ನು ಒಪ್ಪದ ಸಂಸ್ಥೆ ಕಾರ್ಯಾಚರಣೆ ಕಾರಣ ನೀಡಿದೆ. ಆದರೆ ಮೇ 9ರಂದು ಸಹ ಈ ಸಂಸ್ಥೆಗಳ ವಿಮಾನಗಳು ಹಾರಾಟ ನಡೆಸುವುದು ಅನುಮಾನ ಎಂದು ಕೆಲವು ವರದಿಯಾಗಿದೆ.
ದಿವಾಳಿತನ ಸಂಬಂಧ ಅರ್ಜಿ ಸಲ್ಲಿಕೆ
ಬ್ಯಾಂಕ್ ಆಫ್ ಬರೋಡಾ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಆಕ್ಸಿಸ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗೋಫಸ್ಟ್ ಸಂಸ್ಥೆ ಸಾಕಷ್ಟು ಸಾಲಮಾಡಿಕೊಂಡಿದೆ. ಇದೆಲ್ಲದರಿಂದಲೇ ಸಂಸ್ಥೆ ಆರ್ಥಿಕವಾಗಿ ದಿವಾಳಿ ಹಂತಕ್ಕೆ ಬಮದು ತಲುಪಿದೆ. ಈಗಾಗಲೇ ವಿಮಾನ ಹಾರಾಟ ತಾತ್ಕಾಲಿಕವಾಗಿ ರದ್ದುಗೊಳಿಸಿರುವ ಗೋ ಫಸ್ಟ್ ಏರ್ಲೈನ್ಸ್ ರಾಷ್ಟ್ರ ರಾಜಧಾನಿಯಲ್ಲಿ ಸಂಸ್ಥೆಯು ದೆಹಲಿಯ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪ್ರಕ್ರಿಯೆಗಳಿಗೆ ಅರ್ಜಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ವಿಮಾನದ ಹಾರಾಟದ ಆಧಾರದಲ್ಲಿ ತೈಲ ಕಂಪನಿಗಳಿಗೆ ಹಣ ಪಾವತಿಸುತ್ತಿತ್ತು. ಅದಕ್ಕಾಗಿ ಸಾಕಷ್ಟು ಹಣ ಸಾಲ ಮಾಡಿತ್ತು ಎನ್ನಲಾಗಿದೆ. ಎಂಜಿನ್ ಸಮಸ್ಯೆಯ ಕಾರಣದಿಂದ ವಿಮಾನಗಳ ಹಾರಾಟ ನಿಂತು ಹೋಗಿದ್ದರಿಂದ ಈಗ ಕಂಪನಿಗೆ ಹಣಕಾಸು ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಈಗಾಗಲೇ ಖರೀದಿಸಿದ ತೈಲ ಕಂಪನಿಗಳಿಗೆ ಹಣ ಪಾವತಿಗೆ ಸಂಸ್ಥೆಯಿಂದ ಸಾಧ್ಯವಾಗುತ್ತಿಲ್ಲ. ಇದೆಲ್ಲ ಅಂಶಗಳಿಂದ ಗೋ ಫಸ್ಟ್ ಸಂಸ್ಥೆ ತೀವ್ರ ನಷ್ಟ ಅನುಭವಿಸುತ್ತಿರುವುದು ಬಹಿರಂಗವಾಗಿದೆ.

17 ವರ್ಷದಲ್ಲಿ 9000 ಸಾವಿರ ಕೋಟಿ ರೂ.ಸಾಲ
ಗೋ ಫಸ್ಟ್ ಕಂಪನಿ ಆರಂಭವಾಗಿ 2023ಕ್ಕೆ ಸುಮಾರು 17ವರ್ಷ ಆಗಿದೆ. ಅಲ್ಲಿಂದ ಈವರೆಗೆ ಒಂಬತ್ತು ಸಾವಿರ ಕೊಟಿ ರೂಪಾಯಿ ಅದು ಸಾಲ ಮಾಡಿದ.ಎ ಎಂಜಿನ್ ಸಮಸ್ಯೆಯ ಪರಿಣಾಮ 2022ರಲ್ಲಿ ಮಾರುಕಟ್ಟೆಯಲ್ಲಿ ಶೇಕಡಾ 8ರಷ್ಟು ಪಾಲು ಹೊಂದಿದ್ದ ಸಂಸ್ಥೆ ಪ್ರಸಕ್ತ ವರ್ಷದ ಪಾಲು ಶೇ. 6ರ ಆಸುಪಾಸಿಗೆ ಕುಸಿದಿದೆ.
ಹೀಗಿದ್ದರೂ ಕಂಪನಿ ಮೇಲೆತ್ತಲು ಒಂದಷ್ಟು ಹೂಡಿಕೆದಾರರು ಹೂಡಿಕೆ ಮಾಡಿದ್ದರು. ಆದರೆ ಈ ಹಿಂದಿನ ಎರಡು ಮೂರು ವರ್ಷದಲ್ಲಿ ಮತ್ತೆ ವಿಮಾನ ಹಾರಾಟ ರದ್ದಾಗಿ ನಷ್ಟ ಅನುಭವಿಸಿದ್ದರಿಂದ ಹೂಡಿಕೆದಾರರು ಕಂಪನಿಗಳ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು.












Click it and Unblock the Notifications