Viral Video: ಪ್ರೇಯಸಿಗೆ ಫೋನ್ ಮಾಡಿದರೆ ಕಾಲ್ ಬ್ಯೂಸಿ: ಹತಾಶೆಯಿಂದ ಇಡೀ ಹಳ್ಳಿಯ ಕರೆಂಟ್ ಲೈನ್ ಕತ್ತರಿಸಿದ ಪ್ರೇಮಿ

Viral Video News: ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾದ ಮೇಲೆ ಪ್ರತಿಯೊಂದು ಸಂಗತಿಗಳು ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು ಕೆಲವೊಮ್ಮೆ ಖಾಸಗಿ ವಿಷಯಗಳು ಮೊಬೈಲ್ ಮೂಲಕ ಸರಾಗವಾಗಿ ಸಾರ್ವಜನಿಕಗೊಂಡು ಬಿಡುತ್ತವೆ. ಇಂತಹ ಅನೇಕ ಸಂಗತಿಗಳ ಪೈಕಿ ಪ್ರೇಮಿಗಳ ವಿಷಯ ಕೊಂಚ ಹೆಚ್ಚು ಸದ್ದು ಮಾಡುತ್ತದೆ. ಹಚ್ಚೆಚ್ಚು ಜನರು ಈ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಪ್ರೇಮಿಯೊಬ್ಬ ಹತಾಶೆಯಿಂದ ಇಡೀ ಗ್ರಾಮದ ವಿದ್ಯುತ್ ವೈಯರ್ ಕಟ್ ಮಾಡಿದ ಘಟನೆ ಜರುಗಿದೆ.

ಹೌದು, ತನ್ನ ಪ್ರೇಯಸಿಗೆ ಎಷ್ಟೋ ಕರೆ ಮಾಡಿದರು ರಿಸೀವ್ ಮಾಡುತ್ತಿಲ್ಲ. ನಿರಂತರ ಕಾಲ್ ಬ್ಯೂಸಿ ಬಂದಿದೆ ಎಂದು ಹತಾಶಗೊಂಡಿದ್ದಾರೆ. ಆಕೆಯ ಮೇಲೆ ಕೋಪಗೊಂಡು, ಆಕೆ ಇರುವ ಗ್ರಾಮದ ವಿದ್ಯುತ್ ಕಂಬ ಹತ್ತಿ ಮುಖ್ಯ ವಾಯರ್ ಗಳನ್ನು ದೊಡ್ಡ ಕಟರ್‌ನಿಂದ ಕಟ್ ಮಾಡುವ ವಿಡಿಯೋ ಇದಾಗಿದೆ. ವಾಯರ್ ಕಟ್‌ ಮಾಡುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.

Girlfriend Didn t Answer Calls Lover Cuts Entire Village Power Line Video Viral

ವಿಡಿಯೋದಲ್ಲಿ ಏನಿದೆ?

ಪ್ರೀತಿಯಲ್ಲಿ ಬಿದ್ದ ಯುವಕ, ಯುವತಿಯರು ಖುಷಿಯಲ್ಲಿ ಹಾಗೇ ಕೋಪದಲ್ಲಿ, ಹತಾಶೆಯಲ್ಲಿದ್ದಾಗ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ. ಪ್ರೇಯಸಿ ಫೋನ್ ಗೆ ಯಾವಾಗ ಕಾಲ್ ಮಾಡಿದರೂ ಬ್ಯೂಸಿ ಬಂದಿದೆ ಎಂದು ಅವಳಿದ್ದ ಇಡೀ ಗ್ರಾಮದ ವಿದ್ಯುತ್ ಸರಬರಾಜಿನ ವೈಯರ್ ಅನ್ನು ಪ್ರೇಮಿ ಕಟ್ ಮಾಡಿದ್ದಾನೆ ಎಂಬ ಮಾಹಿತಿ ಗೊತ್ತಾಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ, ತಮಾಷೆಯಾಗಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಸ್ಕಿಲ್ ಚೆನ್ನಾಗಿದೆ. ಅದನ್ನು ಈತ ಇಲ್ಲಿ ಬಳಸಿಕೊಂಡಿದ್ದಾನೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಪಾಗಲ್ ಪ್ರೇಮಿ ಎಂದರೆ, ಇನ್ನೊಬ್ಬರು ಇವರಿಬ್ಬರ ಜಗಳದಲ್ಲಿ ಇಡೀ ಗ್ರಾಮವೇ ಕತ್ತಲಲ್ಲಿ ಕಳೆಯಬೇಕಾಯಿತು ಎಂದು ಕಾಮೆಂಟ್ ಹಾಕಿದ್ದಾರೆ.

ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ

ಈ ಕುರಿತ ವಿಡಿಯೋ ಅನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಟಿವಿ1ಕಂಡಿಯಾಲೈವ್ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಐದು ದಿನಗಳ ಹಿಂದ ಈ ವಿಡಿಯೋ ಹಂಚಿಕೊಂಡಿದ್ದು, ಬರೋಬ್ಬರಿ 4000ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. 2.80 ಲಕ್ಷ ಲೈಕ್ಸ್‌ಗಳು ಬಂದಿವೆ. ಸುಮಾರು 17 ಮಿಲಿಯನ್ ವೀಕ್ಷಣೆ ಪಡೆದಿದೆ. 'ಗರ್ಲ್ ಫ್ರೆಂಡ್ ಕಾಲ್ ಬ್ಯೂಸಿ ಬಂದಿದ್ದಕ್ಕೆ ಗ್ರಾಮದ ಕರೆಂಟ್ ಕಟ್' ಎಂಬ ಆಂಗ್ಲ ಶಿರ್ಷಿಕೆಯಡಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+