Get Updates
Get notified of breaking news, exclusive insights, and must-see stories!

Gautam Adani: ಗೀತಾ ಪ್ರೆಸ್‌ ಜೊತೆ ಕೈ ಜೋಡಿಸಿದ ಅದಾನಿ ಗ್ರೂಪ್; ಕುಂಭಮೇಳದಲ್ಲಿ ಒಂದು ಕೋಟಿ 'ಆರತಿ ಸಂಗ್ರಹ' ಪ್ರತಿ ವಿತರಣೆ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭ ಮೇಳ ಇಡೀ ಜಗತ್ತಿನ ಗಮನವನ್ನು ಸೆಳೆಯುತ್ತಿದೆ. ಹಿಂದೂ ಧರ್ಮಧ ನಂಬಿಕೆ, ಆಚರಣೆಗಳನ್ನು ಅಧ್ಯಯನ ಮಾಡುವವರಿಗೆ, ಆಚರಣೆ ಮಾಡುವವರಿಗೆ, ಹಿಂದೂ ಧರ್ಮಧ ಬಗ್ಗೆ ತಿಳಿದುಕೊಳ್ಳುವವರಿಗೆ ಇದಕ್ಕಿಂತ ಉತ್ತಮ ಅವಕಾಶ ಸಿಗಲಾರದು. ದೇಶದ ಮೂಲೆ ಮೂಲೆಯಿಂದ ಸಾಧು ಸಂತರು, ಭಕ್ತರು ಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು ಭಕ್ತಿ ಭಾವದಿಂದ ಧಾರ್ಮಿಕ ಕಾರ್ಯದಲ್ಲಿ ತೊಡಗಿದ್ದಾರೆ. ಹಿಂದೂ ಧರ್ಮದ ದೊಡ್ಡ ಕಾರ್ಯಕ್ರಮಕ್ಕೆ ಅದಾನಿ ಗ್ರೂಪ್ ಕೈಜೋಡಿಸಿರುವುದು ಮತ್ತೊಂದು ವಿಶೇಷ.

ಇಸ್ಕಾನ್ ಜೊತೆ ಅದಾನಿ ಫೌಂಡೇಶನ್‌ ಕೈಜೋಡಿಸಿದ್ದು ಮಹಾ ಕುಂಭ ಮೇಳದಲ್ಲಿ ಮಹಾ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಈಗ ಹಿಂದೂ ಧರ್ಮದ ಪವಿತ್ರ ಗ್ರಂಥಗಳನ್ನು ಪ್ರಕಟಿಸುತ್ತಾ, ಜನರಲ್ಲಿ ಧಾರ್ಮಿಕತೆಯ ಬಗ್ಗೆ ಜ್ಞಾನ ಹಂಚುತ್ತಿರುವ ಗೀತಾ ಪ್ರೆಸ್‌ ಜೊತೆ ಅದಾನಿ ಗ್ರೂಪ್ ಕೈ ಜೋಡಿಸಿದ್ದು, ಮತ್ತೊಂದು ಮಹತ್ಕಾರ್ಯ ಮಾಡುತ್ತಿದೆ.

gautam adani reviving sanatan values gita press at maha kumbh 2025

1923 ರಲ್ಲಿ ಗೋರಖ್‌ಪುರದಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ಬಹಳ ಶತಮಾನಗಳ ಕಾಲ ಹಿಂದೂ ಸಾಹಿತ್ಯದ ಮೂಲಾಧಾರವಾಗಿದೆ. ಹಿಂದೂ ಧರ್ಮದ ಪವಿತ್ರ ಗ್ರಂಥಗಳು, ಧರ್ಮಗ್ರಂಥಗಳು, ಭಕ್ತಿ ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಆದರೆ ಗೀತಾ ಪ್ರೆಸ್‌ ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಧರ್ಮಗ್ರಂಥಗಳ ಮುದ್ರಣ, ಹಂಚಿಕೆಗೆ ಸಮಸ್ಯೆಯಾಗಿತ್ತು, ಇದು ಉದ್ಯಮಿ ಗೌತಮ್ ಅದಾನಿ ಅವರ ಗಮನಕ್ಕೆ ಬಂದಿದ್ದು, ಗೀತಾ ಪ್ರೆಸ್‌ಗೆ ಪುನರುಜ್ಜೀವನ ಕೊಡಲು ಮುಂದಾಗಿದ್ದಾರೆ.

ಒಂದು ಕೋಟಿ ಪುಸ್ತಕಗಳ ವಿತರಣೆ

ಗೀತಾ ಪ್ರೆಸ್‌ ಜೊತೆಗೆ ಅದಾನಿ ಗ್ರೂಪ್‌ ಕೈಜೋಡಿಸಿರುವುದು ಮರುಜೀವ ಸಿಕ್ಕಂತಾಗಿದೆ. ಗೌತಮ್ ಅದಾನಿ ನೇತೃತ್ವದಲ್ಲಿ ಅದಾನಿ ಗ್ರೂಪ್ ಗೀತಾ ಪ್ರೆಸ್‌ಗೆ ಬೆಂಬಲ ನೀಡಿದ್ದು, ಮಹಾ ಕುಂಭ ಮೇಳದ ಸಮಯದಲ್ಲಿ ಭಕ್ತಿ ಗೀತೆಗಳ ಸಂಕಲನವಾದ 'ಆರತಿ ಸಂಗ್ರಹ' ಪುಸ್ತಕದ ಒಂದು ಕೋಟಿ ಪ್ರತಿಗಳನ್ನು ಉಚಿತವಾಗಿ ವಿತರಿಸುತ್ತಿದೆ. ಹಿಂದೂ ಧರ್ಮಕ್ಕೆ ಸೇವೆ ಸಲ್ಲಿಸಲು ಇದೊಂದು ದೇವರು ಕೊಟ್ಟ ಅವಕಾಶ ಎಂದು ಅದಾನಿ ಹೇಳಿದ್ದಾರೆ. ಮಂಗಳವಾರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅದಾನಿ, ತಾವು ಕೂಡ ಹಲವು ಪ್ರತಿಗಳನ್ನು ಹಂಚುವ ಮೂಲಕ ಸಾರ್ಥಕತೆ ಪಡೆದುಕೊಂಡರು.

ಪ್ರತಿದಿನ ಒಂದು ಲಕ್ಷ ಜನರಿಗೆ ಪ್ರಸಾದ

ಅದಾನಿ ಫೌಂಡೇಶನ್ ಇಸ್ಕಾನ್ ಜೊತೆ ಕೈಜೋಡಿಸಿದ್ದು ಮಹಾಪ್ರಸಾದ ಸೇವೆಯ ಮೂಲಕ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತಣೆ ಮಾಡುತ್ತಿದೆ. ಅದಾನಿ ಫೌಂಡೇಶನ್ ಮತ್ತು ಇಸ್ಕಾನ್‌ನ ಈ ಮಹತ್ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈಗ ಗೀತಾ ಪ್ರೆಸ್‌ ಪುನರುಜ್ಜೀವನಕ್ಕೆ ಬೆಂಬಲ ಕೊಡುವ ಮೂಲಕ ಅದಾನಿ ಗ್ರೂಪ್‌ ಕಾರ್ಪೊರೇಟ್‌ಗಳ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಮಾದರಿಯಾಗಿದೆ. ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಈ ಸಹಯೋಗ ಕೇವಲ ನಂಬಿಕೆ ಆಚರಣೆ ಮಾತ್ರವಲ್ಲ ಭಾರತೀಯ ಸಂಸ್ಕೃತಿಯ ಪಾಲನೆಯ ಪ್ರತೀಕವಾಗಿದೆ.

ತೃಪ್ತಿ ತಂದಿದೆ ಎಂದ ಗೌತಮ್ ಅದಾನಿ

ಗೀತಾ ಪ್ರೆಸ್‌ ಜೊತೆಗಿನ ಪಾಲುದಾರಿಕೆ ಬಗ್ಗೆ ಟ್ವೀಟ್ ಮಾಡಿರುವ ಗೌತಮ್ ಅದಾನಿ ಈ ಯಜ್ಞದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾ ಕುಂಭ ಮೇಳವು ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಮಹಾನ್ ಯಜ್ಞವಾಗಿದ್ದು, ಈ ಮಹಾಯಜ್ಞದಲ್ಲಿ, ಗೌರವಾನ್ವಿತ ಸಂಸ್ಥೆ ಗೀತಾ ಪ್ರೆಸ್‌ನ ಸಹಕಾರದೊಂದಿಗೆ, ಕುಂಭಮೇಳಕ್ಕೆ ಬಂದಿರುವ ಭಕ್ತರಿಗೆ 'ಆರತಿ ಸಂಗ್ರಹ'ದ ಒಂದು ಕೋಟಿ ಪ್ರತಿಗಳನ್ನು ಉಚಿತವಾಗಿ ನೀಡುತ್ತಿರುವುದು ತೃಪ್ತಿ ತಂದಿದೆ ಎಂದಿದ್ದಾರೆ.

"ಸನಾತನ ಸಾಹಿತ್ಯದ ಮೂಲಕ ಶತಮಾನಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಗೀತಾ ಪ್ರೆಸ್‌ನ ಅಧಿಕಾರಿಗಳನ್ನು ಭೇಟಿಯಾಗಿರುವುದರಿಂದ ನನಗೆ ಸ್ಪೂರ್ತಿ ಸಿಕ್ಕಿದ್ದು, ಗೀತಾ ಪ್ರೆಸ್‌ನ ಅತ್ಯುತ್ತಮ ಸೇವಾ ಕಾರ್ಯಕ್ಕಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸೌಭಾಗ್ಯ ಸಿಕ್ಕಿದೆ. ನಿಸ್ವಾರ್ಥ ಸೇವೆ ಮತ್ತು ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜವಾಬ್ದಾರಿಯ ಪ್ರಜ್ಞೆಯು ದೇಶಭಕ್ತಿಯ ಒಂದು ರೂಪವಾಗಿದ್ದು, ಅದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಸೇವೆಯೇ ಸಾಧನೆ, ಸೇವೆಯೇ ಪ್ರಾರ್ಥನೆ ಮತ್ತು ಸೇವೆಯೇ ದೇವರು" ಎಂದು ಟ್ವೀಟ್ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+