Amritpal Singh: ಕಾರಿನಿಂದ ಬೈಕ್‌ವರೆಗೆ ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಮಾಡಿದ ಬಿಗ್ ಪ್ಲ್ಯಾನ್
ಕಾರಿನಿಂದ ಬೈಕ್‌ವರೆಗೆ ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಮಾಡಿದ ಬಿಗ್ ಪ್ಲ್ಯಾನ್ ದೃಶ್ಯಗಳು ಭದ್ರತಾ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.
ಚಂಡಿಗಢ ಮಾರ್ಚ್ 21: ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಪೊಲೀಸರಿಂದ ತಪ್ಪಿಸಿಕೊಂಡ ವಿಡಿಯೋ ವೈರಲ್ ಆಗಿದೆ. ಪಂಜಾಬ್‌ನಾದ್ಯಂತ ನಾಲ್ಕು ದಿನಗಳ ಕಾಲ ಸಾವಿರಾರು ಪೊಲೀಸರನ್ನು ತಪ್ಪಿಸಲು ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ವಿವಿಧ ಪ್ಲ್ಯಾನ್ ಮಾಡಿರುವುದು ಭದ್ರತಾ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಪಂಜಾಬ್ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಕಾರು ಮತ್ತು ಬೈಕ್‌ಗಳಲ್ಲಿ ಬಳಸಿರುವುದನ್ನು ಕಾಣಬಹುದು. ಅಮೃತಪಾಲ್ ಸಿಂಗ್ ಶನಿವಾರ ಬೆಳಿಗ್ಗೆ 11.27 ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್‌ನ ಕ್ಲಿಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಮಾರುತಿ ಬ್ರೆಜ್ಜಾದ ಮುಂಭಾಗದ ಸೀಟಿನಲ್ಲಿರುವುದನ್ನು ಕಂಡುಬಂದಿದೆ.

ಇದಕ್ಕೂ ಮೊದಲು, ಅಮೃತಪಾಲ್ ಸಿಂಗ್ ಅವರು ಮರ್ಸಿಡಿಸ್ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಅವರು ಶಾಕೋಟ್‌ನ ರಸ್ತೆಯೊಂದರಲ್ಲಿ ಬಿಸಾಡಿದ್ದಾರೆ. ಕೆಲವು ಗಂಟೆಗಳ ನಂತರ, ಅವರು ಮಾರುತಿ ಬ್ರೆಜ್ಜಾದಲ್ಲಿ ಪ್ರಯಾಣಿಸಿದರು ಎಂದು ಮೂಲಗಳು ಹೇಳುತ್ತವೆ. ಮಾತ್ರವಲ್ಲದೆ ಅವರು ಕಾರಿನಲ್ಲಿ ತಮ್ಮ ಬಟ್ಟೆಗಳನ್ನು ಬದಲಾಯಿಸಿದರು. ವಿಡಿಯೋದಲ್ಲಿ ಒಂದೇ ದಿನ ಅವರು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಉಡುಗೆಯಲ್ಲಿ ಕಂಡು ಬಂದಿದ್ದಾರೆ. ಅವರ ಸಾಮಾನ್ಯ ನಿಲುವಂಗಿಗಳ ಬದಲಿಗೆ ಶರ್ಟ್‌ನಲ್ಲಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರಿನಿಂದ ಬೈಕ್‌ವರೆಗೆ- ಅಮೃತಪಾಲ್ ಸಿಂಗ್ ಬಿಗ್ ಪ್ಲ್ಯಾನ್
ಅವನು ತನ್ನ ಧಾರ್ಮಿಕ ಬಟ್ಟೆಗಳನ್ನು ಶರ್ಟ್ ಮತ್ತು ಪ್ಯಾಂಟ್‌ಗೆ ಬದಲಾಯಿಸಿಕೊಂಡಿದ್ದಾರೆ. ಜೊತೆಗೆ ನೀಲಿ ಬಣ್ಣದಿಂದ ಗುಲಾಬಿ ಪೇಟ ಧರಿಸಿದ್ದಾನೆ. ಮತ್ತೊಂದು ಕ್ಲಿಪ್‌ನಲ್ಲಿ ಅವರು ಕಾರನ್ನು ಬಿಟ್ಟು ಎರಡು ಬೈಕ್‌ಗಳಲ್ಲಿ ಮೂವರು ಸಹಾಯಕರೊಂದಿಗೆ ಹೊರಹೋಗುವುದನ್ನು ಕಾಣಬಹುದು. ಅವರು ಗುರುದ್ವಾರದಲ್ಲಿ ಅಡಗಿಕೊಂಡು, ಮತ್ತೆ ಬಟ್ಟೆ ಬದಲಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಅಮೃತಪಾಲ್ ಸಿಂಗ್ ಅವರ ಬಹು ನೋಟದ ಫೋಟೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಅವರು ತಮ್ಮ ನೋಟವನ್ನು ಬದಲಾಯಿಸಿರಬಹುದು ಎಂದು ಶಂಕಿಸಿದ್ದಾರೆ ಮತ್ತು ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಜನರು ಅವನನ್ನು ಗುರುತಿಸಲು ಸಹಾಯ ಮಾಡಬಹುದು ಎಂದು ಆಶಿಸುತ್ತಿದ್ದಾರೆ.
ಅಮೃತಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಮಾಡಿದ ಬಿಗ್ ಪ್ಲ್ಯಾನ್
ಈಗಾಗಲೇ ಅಮೃತಪಾಲ್ ಸಿಂಗ್ ಓಡಿಹೋಗಲು ಸಹಾಯ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ. ಅಮೃತಪಾಲ್ ಸಿಂಗ್ ಅವರ ಚಿಕ್ಕಪ್ಪ ಸೇರಿದಂತೆ 120 ಕ್ಕೂ ಹೆಚ್ಚು ಜನರನ್ನು ಶನಿವಾರದಿಂದ ಬಂಧಿಸಲಾಗಿದೆ. ಅವರ ಸಂಘಟನೆಯ "ವಾರಿಸ್ ಪಂಜಾಬ್ ದೇ" ನ ಹಲವಾರು ಸದಸ್ಯರನ್ನು ಕಟ್ಟುನಿಟ್ಟಾದ ರಾಷ್ಟ್ರೀಯ ಭದ್ರತಾ ಕಾಯಿದೆ (NSA) ಅಡಿಯಲ್ಲಿ ಬಂಧಿಸಲಾಗಿದೆ. ಬಳಿಕ ಮೂರು ದಿನಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಅನೇಕ ಭಾಗಗಳಲ್ಲಿ ಇಂಟರ್ನೆಟ್ ಅನ್ನು ಮರುಸ್ಥಾಪಿಸಲಾಗಿದೆ.

ಈ ನಡುವೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪಂಜಾಬ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಮೃತಪಾಲ್ ಸಿಂಗ್ ಪರಾರಿಯಾಗಲು ಹೇಗೆ ಸಾಧ್ಯೆ ಪ್ರಶ್ನಿಸಿದೆ. "ನಿಮ್ಮಲ್ಲಿ 80,000 ಪೊಲೀಸರಿದ್ದಾರೆ. ಅವರು ಏನು ಮಾಡುತ್ತಿದ್ದರು. ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡರು?" ಇದು ಗುಪ್ತಚರ ವೈಫಲ್ಯ ಎಂದು ಪಂಜಾಬ್ ಸರ್ಕಾರವನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ.
ಏನಿದು ಘಟನೆ?
ಸಿಂಗ್ ಅವರ ಸಹಾಯಕ ಲವ್ಪ್ರೀತ್ ತೂಫಾನ್ ಅವರನ್ನು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅಪಹರಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಬಂಧಿಸಿದ್ದರು. ಇದರಿಂದ ಕೋಪಗೊಂಡ ಅಮೃತಪಾಲ್ ಸಿಂಗ್ ಬೆಂಬಲಿಗರು ಪೊಲೀಸ್ ಠಾಣೆಗೆ ನುಗ್ಗಿ ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ದಮ್ಕಿ ಹಾಕಿದ್ದರು. ಸಿಂಗ್ ಅವರ ಸಹಾಯಕ ಲವ್ಪ್ರೀತ್ ತೂಫಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದರು. ಫೆಬ್ರವರಿ 23 ರಂದು ಅವರ ಬೆಂಬಲಿಗರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಮೂರು ವಾರಗಳ ನಂತರ ಅಮೃತಪಾಲ್ ಸಿಂಗ್ ಅವರ ಮೇಲೆ ಪೋಲೀಸ್ ಕಣ್ಣಿಟ್ಟಿತ್ತು. ಇದರಿಂದ ಅಮೃತಪಾಲ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದರು. ಭಾರೀ ಪೊಲೀಸ್ ಬಿಗಿ ಭದ್ರತೆ ನಡುವೆಯೂ ಅಮೃತಪಾಲ್ ಸಿಂಗ್ ತಪ್ಪಿಸಿಕೊಂಡಿದ್ದಾನೆ.
ಅಮೃತಪಾಲ್ ಸಿಂಗ್ ಅವರು ಕೆಲವು ವರ್ಷಗಳಿಂದ ಪಂಜಾಬ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರ ಮರ್ಸಿಡಿಸ್‌ನ ಸನ್‌ರೂಫ್‌ನಿಂದ ಶಸ್ತ್ರಸಜ್ಜಿತ ಬೆಂಬಲಿಗರಿಂದ ಬೆಂಗಾವಲು ಪಡೆಯುವುದನ್ನು ಆಗಾಗ್ಗೆ ಕಾಣಬಹುದು. ಅವರು 1984 ರಲ್ಲಿ ಆಪರೇಷನ್ ಬ್ಲೂಸ್ಟಾರ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಅನುಯಾಯಿ ಎಂದು ಹೇಳಿಕೊಳ್ಳುತ್ತಾರೆ.












Click it and Unblock the Notifications