ಮಾಜಿ ಸಂಸದನ ಮನೆಯಲ್ಲಿ ಬೆಂಕಿ : ಸೊಸೆ, ಮೊಮ್ಮಕ್ಕಳು ಸಜೀವ ದಹನ

ಹೈದರಾಬಾದ್, ನವೆಂಬರ್ 04 : ತೆಲಂಗಾಣದ ವಾರಂಗಲ್ ಕ್ಷೇತ್ರದ ಮಾಜಿ ಸಂಸದ ಎಸ್.ರಾಜಯ್ಯ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ರಾಜಯ್ಯ ಅವರ ಸೊಸೆ ಮತ್ತು ಮೂವರು ಮೊಮ್ಮಕ್ಕಳು ಸಜೀವವಾಗಿ ದಹನವಾಗಿದ್ದಾರೆ. ವಾರಂಗಲ್ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಯ್ಯ ಅವರು ಬುಧವಾರ ನಾಮಪತ್ರ ಸಲ್ಲಿಸಬೇಕಾಗಿತ್ತು.

ಬುಧವಾರ ಮುಂಜಾನೆ ವಾರಂಗಲ್‌ನ ಹನುಮಕೊಂಡದಲ್ಲಿರುವ ಎಸ್.ರಾಜಯ್ಯ ಅವರ ನಿವಾಸದಲ್ಲಿ ಈ ದುರಂತ ನಡೆದಿದ್ದು, ರಾಜಯ್ಯ ಅವರ ಸೊಸೆ ಸಾರಿಕಾ ಮತ್ತು ಮೊಮ್ಮಕ್ಕಳಾದ ಅಭಿನವ್, ಅಯಾನ್, ಶ್ರೀಯಾನ್ ಸಜೀವವಾಗಿ ದಹನವಾಗಿದ್ದಾರೆ. ವಾರಂಗಲ್ ಪೊಲೀಸ್ ಆಯುಕ್ತ ಸುಧೀರ್ ಬಾಬು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

telangana

2002ರಲ್ಲಿ ಎಸ್.ರಾಜಯ್ಯ ಅವರ ಪುತ್ರ ಅನಿಲ್ ಅವರನ್ನು ಸಾರಿಕಾ ಪ್ರೀತಿಸಿ ವಿವಾಹವಾಗಿದ್ದರು. ಗ್ಯಾಸ್ ಸೋರಿಕೆಯಿಂದಾಗಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪರಿಶೀಲನೆ ಮುಂದುವರೆದಿದೆ.

ಆತ್ಮಹತ್ಯೆ ಶಂಕೆ : ಸಾರಿಕಾ ಅವರು ಮೂವರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸಾರಿಕಾ ಅವರು ಮಾವನ ವಿರುದ್ಧ ಹಿಂದೆ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದರು. ಹಿಂದೆ ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಸಹ ಪ್ರಯತ್ನ ನಡೆಸಿದ್ದರು.

ಇಂದು ನಾಮಪತ್ರ ಸಲ್ಲಿಸಬೇಕಿತ್ತು : ವಾರಂಗಲ್ ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು ಮಾಜಿ ಸಂಸದ ಎಸ್.ರಾಜಯ್ಯ ಅವರು ಬುಧವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕಿತ್ತು. ಇದಕ್ಕೂ ಮೊದಲೇ ಈ ದುರಂತ ಸಂಭವಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+