FIR on CM Atishi: ದೆಹಲಿ ಸಿಎಂ ಅತಿಶಿ ವಿರುದ್ಧ ಎಫ್‌ಐಆರ್ ದಾಖಲು, ಕಾರಣವೇನು?
ನವದೆಹಲಿ, ಜನವರಿ 14: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕ್ರೇಜಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಆ ಹುದ್ದೆಗೇರಿದ ಸಿಎಂ ಆದ ಅತಿಶಿ ಅವರಿಗೆ ಸಂಕಷ್ಟ ಎದುರು ಆಗಿದೆ. ದೆಹಲಿ ಪೊಲೀಸರು ಅತಿಶಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆ 2025 ಹೊತ್ತಿನಲ್ಲಿ ಸಿಎಂ ವಿರುದ್ಧ ಬಿಎನ್‌ಎಸ್ 223 (ಎ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿ ವಿಧಾನಸಭಾ ಚುನಾವಣೆ 2025 ವಿಧಾನಸಭಾ ಸಂದರ್ಭದಲ್ಲಿ ದೆಹಲಿ ರಾಜ್ಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿ ಆಗಿದೆ. ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ವಿರುದ್ಧ ಮಂಗಳವಾರ FIR ದಾಖಲಿಸಲಾಗಿದೆ. ರಾಜಕೀಯ ಉದ್ದೇಶಕ್ಕಾಗಿ ಸರ್ಕಾರಿ ವಾಹನ ಬಳಸುವ ಮೂಲಕ ಅತಿಶಿ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೆಹಲಿ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸಲು, ಮೂರನೇ ಭಾರಿಗೆ ಅಧಿಕಾರ ಹಿಡಿಯಲು ಸಿದ್ಧವಾಗಿರುವ ಆಮ್ ಆದ್ಮಿ ಪಕ್ಷವು ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ತಿಳಿಸಿದೆ. ಆರೋಪ ಒಪ್ಪಿಕೊಳ್ಳಲು ನಿರಾಕರಿಸಿದೆ.
ಈ ವಿಚಾರಕ್ಕೆ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಬೇರೆ ಪಕ್ಷಗಳನಾಯಕರು ಬಹಿರಂಗವಾಗಿ ಹಣ, ಸೀರೆ ಹಂಚುತ್ತಾರೆ. ಮತ ಸೆಳೆಯಲು ಚಿನ್ನದ ಸರ ನೀಡುತ್ತಿದ್ದಾರೆ. ಅಂತವರ ವಿರುದ್ಧ ಯಾವ ಪ್ರಕರಣ ದಾಖಲಾಗಿಲ್ಲ. ಆದರೆ ಮುಖ್ಯಮಂತ್ರಿಗಳ ವಿರುದ್ಧ ತತಕ್ಷಣ ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯರ ಎಂದರು.
ಇಂದಿನ ಕೊಳೆತ ವ್ಯವಸ್ಥೆ ಬದಲಾಯಿಸಬೇಕು. ಈ ಕೊಳೆ ಸ್ವಚ್ಛಗೊಳಿಸಬೇಕು. ನಮ್ಮ ಎಎಪಿ ಇಂತಹ ವ್ಯವಸ್ಥೆ ವಿರುದ್ಧ ಹೋರಾಡುತ್ತದೆ. ಇವೆರಡು ಪಕ್ಷಗಳು ಕೊಳೆತ ಸ್ಥಿತಿಯಲ್ಲಿವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಅವರು ಗುಡುಗಿದರು.
ಇಂದಿನ ಘಟನೆ ರಾಜಕೀಯ ಲಾಭಕ್ಕಾಗಿ ಮಾಡಿದ ಘಟನೆ ಆಗಿದೆ. ಸರ್ಕಾರಿ ಅಧಿಕಾರಿಗಳು, ಸಂಸ್ಥೆಗಳ ದುರಪಯೋಗ ಇದರಲ್ಲಿ ಎದ್ದು ಕಾಣುತ್ತದೆ ಎಂದು ಅವರು ಅರ್ಥೈಸಿದ್ದಾರೆ.
ಅಸಗಿಗೆ ಆಗಿದ್ದೇನು? ನಿಯಮ ಉಲ್ಲಂಘನೆ ಆಯ್ತಾ?
ದೆಹಲಿ ಚುನಾವಣೇ ಘೋಷಣೆ ಆದ ಬಳಿಕ, ಜನವರಿ 7ರಂದು ಲೋಕೋಪಯೋಗಿ ಇಲಾಖೆ ಸರ್ಕಾರಿ ವಾಹನ ಬಳಿಕೆ ಮಾಡಲಾಗಿದೆ. ಚುನಾವಣೆ ಪ್ರಚಾರಕ್ಕಾಗಿ ಬಳಸಿ, ಅದರಲ್ಲಿ ಎಎಪಿಯ ಚುನಾವಣಾ ಕಚೇರಿಗೆ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಈ ಸಂಬಂಧ ದೆಹಲಿಯ ಕಲ್ಕಾಜಿ ನಿವಾಸಿ ಕೆ.ಎಸ್. ದುಗ್ಗಲ್ ಅವರು ಸಿಎಂ ಅತಿಶಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಕಲ್ಕಾಜಿಯ ಶಾಸಕರಾಗಿರುವ ಅತಿಶಿ ಅವರು ಮತ್ತೆ ಚುನಾವಣೆಗೆ ನಿಲ್ಲಲು ಸಿದ್ಧತೆ ನಡೆಸಿದ್ದಾರೆ. ಇದೇ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಂಸದ ರಮೇಶ್ ಬಿಧುರಿ ಅವರು ಕಣಕ್ಕಿಳಿಯಲಿದ್ದಾರೆ. ಶೀಘ್ರವೇ ಅತಿಶಿ ಅವರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.












Click it and Unblock the Notifications