Arvind Kejriwal Excise Policy Case: ಸಿಬಿಐ ಮುಂದೆ ಹಾಜರಾಗಲಿರುವ ಅರವಿಂದ್ ಕೇಜ್ರಿವಾಲ್- ಪ್ರತಿಭಟನೆಗೆ ಪಕ್ಷ ಸಿದ್ಧತೆ
ದೆಹಲಿ ಏಪ್ರಿಲ್ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯ ಮದ್ಯ ನೀತಿಯ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ಮುಂದೆ ಹಾಜರಾಗಲಿದ್ದಾರೆ. ಮದ್ಯ ನೀತಿ ಜಾರಿಗೆ ಸಂಬಂಧಿಸಿದಂತೆ ಸಿಬಿಐ ಇಂದು ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಬಹುದು. ಅರವಿಂದ್ ಕೇಜ್ರಿವಾಲ್ ಜೊತೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಸಿಬಿಐ ಕಚೇರಿಗೆ ತೆರಳಲಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜೊತೆಗೆ ಅವರ ಎಲ್ಲಾ ದೆಹಲಿ ಕ್ಯಾಬಿನೆಟ್ ಸಹೋದ್ಯೋಗಿಗಳು, ಎಲ್ಲಾ ಎಎಪಿ ಸಂಸದರು ಕೂಡ ಸಿಬಿಐ ಕಚೇರಿಗೆ ಹೋಗಲಿದ್ದಾರೆ. ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್ ಕಳುಹಿಸಿತ್ತು. ಇಂದು ಅವರನ್ನು ವಿಚಾರಣೆಗೆ ಕರೆಯಲಾಗಿದೆ.

ಮೂಲಗಳನ್ನು ನಂಬುವುದಾದರೆ, ಇಂದು ಸಿಬಿಐ ಒಂದೆಡೆ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಆಮ್ ಆದ್ಮಿ ಪಕ್ಷ ದೆಹಲಿಯ ಸಿಬಿಐ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದೆ. ಅರವಿಂದ್ ಕೇಜ್ರಿವಾಲ್ ಭ್ರಷ್ಟರಾಗಿದ್ದರೆ ಈ ಜಗತ್ತಿನಲ್ಲಿ ಪ್ರಾಮಾಣಿಕರು ಯಾರೂ ಇಲ್ಲ ಎಂದು ಸಿಎಂ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ನಾನು ಸಿಬಿಐಗೆ ಹೋಗುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್ ಭ್ರಷ್ಟರಾಗಿದ್ದರೆ ಈ ಜಗತ್ತಿನಲ್ಲಿ ಯಾರೂ ಪ್ರಾಮಾಣಿಕರಲ್ಲ. ನನ್ನನ್ನು ಬಂಧಿಸುವಂತೆ ಸಿಬಿಐಗೆ ಬಿಜೆಪಿ ಸೂಚನೆ ನೀಡಿದ್ದರೆ, ಅವರ ಸೂಚನೆಯನ್ನು ಸಿಬಿಐ ಸಂಪೂರ್ಣವಾಗಿ ಅನುಸರಿಸುತ್ತದೆ.
ಎಎಪಿಯ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಬಿಐ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಲ್ಲಿ ಸುಮಾರು ಒಂದು ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ, ಈ ಸಂದರ್ಭದಲ್ಲಿ ಬಿಜೆಪಿ ಇಂದು ರಾಜ್‌ಘಾಟ್‌ನಲ್ಲಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸಲಿದೆ. ಪಕ್ಷದ ನಾಯಕರಾದ ವೀರೇಂದ್ರ ಸಚ್‌ದೇವ, ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ಅನೇಕ ಹಿರಿಯ ನಾಯಕರು ಧರಣಿ ಕುಳಿತುಕೊಳ್ಳಲಿದ್ದಾರೆ.

ದೆಹಲಿ ಮದ್ಯ ಹಗರಣದ ಬಗ್ಗೆ
ಹೊಸ ಮದ್ಯ ನೀತಿಯನ್ನು ದೆಹಲಿಯಲ್ಲಿ 17 ನವೆಂಬರ್ 2021 ರಂದು ಜಾರಿಗೆ ತರಲಾಯಿತು. ಈ ನೀತಿ ಜಾರಿಯಾದ ನಂತರ ದೆಹಲಿ ಸರ್ಕಾರಕ್ಕೆ ಭಾರೀ ಪ್ರಮಾಣದ ಆದಾಯ ನಷ್ಟವಾಗಿದೆ. ಬಳಿಕ ಅಂದಿನ ಮುಖ್ಯ ಕಾರ್ಯದರ್ಶಿ ಎಲ್‌ಜಿಗೆ ವರದಿ ಸಲ್ಲಿಸಿದ್ದರು. ಇದರಲ್ಲಿ ಮನೀಶ್ ಸಿಸೋಡಿಯಾ ಅವರು ಮದ್ಯದ ವ್ಯಾಪಾರಿಗಳಿಗಳೊಂದಿಗೆ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆಎಎಪಿ ಈ ಆರೋಪಗಳನ್ನು ರಾಜಕೀಯ ಸೇಡು ಎಂದು ತಳ್ಳಿಹಾಕಿದೆ.
ಸಿಬಿಐ ಪ್ರಕರಣವು ನವೆಂಬರ್ 2021ರಲ್ಲಿ ಜಾರಿಗೆ ಬಂದ ದೆಹಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದೆ. ಅದರ ಅಡಿಯಲ್ಲಿ, 849 ಮದ್ಯದ ಅಂಗಡಿಗಳ ಪರವಾನಗಿಗಳನ್ನು ಖಾಸಗಿ ಸಂಸ್ಥೆಗಳಿಗೆ ಮುಕ್ತ ಬಿಡ್ಡಿಂಗ್ ಮೂಲಕ ನೀಡಲಾಯಿತು. ಈ ಹಿಂದೆ ನಾಲ್ಕು ಸರ್ಕಾರಿ ನಿಗಮಗಳು 475 ಮದ್ಯದಂಗಡಿಗಳನ್ನು ನಡೆಸುತ್ತಿದ್ದು, ಉಳಿದ 389 ಅಂಗಡಿಗಳು ಖಾಸಗಿಯಾಗಿ ನಡೆಯುತ್ತಿದ್ದವು.
ಇದರಲ್ಲಿ ಅಕ್ರಮ ನಡೆಸಿದೆ ಎಂಬ ಆರೋಪದ ಮೇಲೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಕೇಂದ್ರ ತನಿಖಾ ದಳ ಬಂಧಿಸಿತ್ತು. ಸಿಸೋಡಿಯಾ ಅವರು ಅಕ್ರಮ ಹಣ ವರ್ಗಾವಣೆಯ ಪ್ರತ್ಯೇಕ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರೊಂದಿಗೆ ದೆಹಲಿ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ್ದರು.
ಸಿಬಿಐ ವಿಚಾರಣೆ ಕರೆದಿದ್ದಕ್ಕೆ ಕಾರಣ ಹೇಳಿದ ಸಂಜಯ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧದ ಬಗ್ಗೆ ಕೇಜ್ರಿವಾಲ್ ಅವರು ದೆಹಲಿ ಅಸೆಂಬ್ಲಿಯಲ್ಲಿ ಮಾತನಾಡಿದ್ದರಿಂದ ಸಿಬಿಐ ಅವರನ್ನು ಕರೆಸಿದೆ ಎಂದು ಸಿಂಗ್ ಆರೋಪಿಸಿದ್ದಾರೆ. "ನೀವು [ಮೋದಿ] ಮತ್ತು ನಿಮ್ಮ ಸರ್ಕಾರವು ಅಡಿಯಿಂದ ಮುಡಿವರೆಗೂ ಭ್ರಷ್ಟಾಚಾರದಲ್ಲಿದೆ. ಸಿಬಿಐ ಸಮನ್ಸ್‌ನಿಂದ ಅರವಿಂದ್ ಕೇಜ್ರಿವಾಲ್ ಅವರ ಹೋರಾಟ ನಿಲ್ಲುವುದಿಲ್ಲ" ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದಾರೆ.












Click it and Unblock the Notifications