ವಿಡಿಯೋ: ಚುನಾವಣೆ ಸಮಯದಲ್ಲಿ ಇಡಿ ದಾಳಿ, ಹಣದ ರಾಶಿ ನೋಡಿ
ನವದೆಹಲಿ, ಮೇ 06: ಲೋಕಸಭೆ ಚುನಾವಣೆಯ ಸಮಯದಲ್ಲಿಯೇ ಜಾರಿ ನಿರ್ದೇಶನಾಲಯ ಬಹುದೊಡ್ಡ ದಾಳಿಯೊಂದನ್ನು ನಡೆಸಿದೆ. ಸಚಿವರೊಬ್ಬರ ಆಪ್ತ ಕಾರ್ಯದರ್ಶಿಯ ಸಹಾಯಕನ ಮನೆಯಲ್ಲಿ ರಾಶಿಗಟ್ಟಲೇ ಹಣ ಪತ್ತೆಯಾಗಿದ್ದು, ಎಣಿಕೆ ಕಾರ್ಯವನ್ನು ಮಾಡಲಾಗುತ್ತಿದೆ.
ಜಾರಿ ನಿರ್ದೇಶನಾಲಯ (ಇಡಿ) ಜಾರ್ಖಂಡ್ ರಾಜ್ಯದ ರಾಂಚಿಯ ವಿವಿಧ ಪ್ರದೇಶಗಳ ಮೇಲೆ ದಾಳಿಯನ್ನು ನಡೆಸಿದೆ. ಈ ವೇಳೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಆಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜಯ್ ಲಾಲ್ ಸಹಾಯಕನ ಮನೆಯಲ್ಲಿ ಹಣದ ರಾಶಿ ಪತ್ತೆಯಾಗಿದೆ.

ಸುಮಾರು 20 ಕೋಟಿ ಹಣ ಇರಬಹುದು ಎಂದು ಇಡಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಹಣದ ಎಣಿಕೆ ಕಾರ್ಯವನ್ನು ಅಧಿಕಾರಿಗಳು ಆರಂಭಿಸಿದ್ದು, ಸಂಜೆಯ ವೇಳೆಗೆ ಎಷ್ಟು ಹಣ ಇದೆ ಎಂಬ ಅಧಿಕೃತ ಮಾಹಿತಿ ತಿಳಿಯುವ ನಿರೀಕ್ಷೆ ಇದೆ.
ಮನೆಯಲ್ಲಿನ ಬ್ಯಾಗ್, ಕಮೋಡ್, ಅಲ್‌ಮೇರಾಗಳಲ್ಲಿ ಸಿಕ್ಕ ಹಣವನ್ನು ಎಣಿಕೆ ಮಾಡಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಂದು ಕಡೆ ರಾಶಿ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲೋಕಸಭೆ ಚುನಾವಣೆಯ ಸಮಯದಲ್ಲಿ ಇದು ಅತಿ ದೊಡ್ಡ ದಾಳಿ ಎಂದು ಅಂದಾಜಿಸಲಾಗಿದೆ.
ಹಗರಣದ ತನಿಖೆ ನಡೆಸುತ್ತಿರುವ ಇಡಿ: ಜಾರಿ ನಿರ್ದೇಶನಾಲಯ ಈಗಾಗಲೇ ಜಾರ್ಖಂಡ್ ರಾಜ್ಯದಲ್ಲಿ ವಿರೇಂದ್ರ ಕೆ. ರಾಮ್ ಪ್ರಕರಣದ ತನಿಖೆ ನಡೆಸುತ್ತಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವಿರೇಂದ್ರ ಕೆ. ರಾಮ್ ಅವರನ್ನು ಇಡಿ 2023ರ ಫೆಬ್ರವರಿಯಲ್ಲಿಯೇ ಬಂಧಿಸಿದೆ.
ವಿಡಿಯೋ ವೈರಲ್
#WATCH | The Enforcement Directorate is conducting raids at multiple locations in Ranchi. Huge amount of cash recovered from household help of Sanjiv Lal - PS to Jharkhand Rural Development minister Alamgir Alam, in Virendra Ram case.
— ANI (@ANI) May 6, 2024
ED arrested Virendra K. Ram, the chief… pic.twitter.com/VTpUKBOPE7
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ವಿರೇಂದ್ರ ಕೆ. ರಾಮ್ ಬಂಧಿಸಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲವು ಯೋಜನೆ ಜಾರಿಗೊಳಿಸುವಾಗ ಅಕ್ರಮಗಳನ್ನು ಮಾಡಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬುದು ಆರೋಪ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಡಿ ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿಯನ್ನು ಮಾಡಿದೆ.
ಇಡಿ ವಿರೇಂದ್ರ ಕೆ. ರಾಮ್ ಬಂಧಿಸಿದಾಗ ಸುಮಾರು 100 ಕೋಟಿ ಅಕ್ರಮ ಆಸ್ತಿ ಸಂಗ್ರಹ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿತ್ತು. ಅವರ ಮನೆಯಲ್ಲಿ ವಶಕ್ಕೆ ಪಡೆದ ಪೆನ್ ಡ್ರೈವ್‌ನಲ್ಲಿನ ಮಾಹಿತಿಗಳನ್ನು ಆಧರಿಸಿ ಇಡಿ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.
2023ರಲ್ಲಿ ವಿರೇಂದ್ರ ಕೆ. ರಾಮ್ ಬಂಧಿಸಿದ ಕೆಲವೇ ದಿನಗಳಲ್ಲಿ ಇಡಿ ರಾಂಚಿ, ಜೆಮ್‌ಶೆಡ್‌ಪುರ, ಬಿಹಾರ, ದೆಹಲಿ ಸೇರಿದಂತೆ ಕೆಲವು ಪ್ರದೇಶಗಳ ಮೇಲೆ ದಾಳಿ ಮಾಡಿತ್ತು. ಆಗಲೂ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಈಗ ನಡೆದಿರುವ ದಾಳಿಯಲ್ಲಿ 20 ರಿಂದ 30 ಕೋಟಿ ಹಣವಿರಬಹುದು ಎಂದು ಅಂದಾಜಿಸಲಾಗಿದೆ.
ವಿರೇಂದ್ರ ಕೆ. ರಾಮ್ ಬಗ್ಗೆ ದೂರು ಬಂದ ಬಳಿಕ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಲಾಗಿತ್ತು. ಆಗ ಹಣ ಪತ್ತೆಯಾಗಿತ್ತು. ಬಳಿಕ ವಿರೇಂದ್ರ ಕೆ. ರಾಮ್ ವಿಚಾರಣೆಗೆ ಕರೆದಿದ್ದ ಇಡಿ, ವಿಚಾರಣೆ ಬಳಿಕ ಅವರನ್ನು ಬಂಧಿಸಿತ್ತು. ಬಳಿಕ ಅವರಿಗೆ ಸೇರಿದ ಹಲವು ಪ್ರದೇಶಗಳಲ್ಲಿ ಮತ್ತೆ ದಾಳಿಯನ್ನು ನಡೆಸಿತ್ತು.
ವಿರೇಂದ್ರ ಕೆ. ರಾಮ್ ಬಂಧಿಸಿದ ಬಳಿಕ 30 ಪ್ರದೇಶಗಳ ಮೇಲೆ ಇಡಿ ದಾಳಿ ನಡೆಸಿತ್ತು. ಆಗ 30 ಲಕ್ಷ ರೂ. ಹಣ, 1.5 ಕೋಟಿ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಹಲವು ವಾಹನಗಳನ್ನು ಖರೀದಿ ಮಾಡಿದ ದಾಖಲೆಗಳು ಸಿಕ್ಕಿದ್ದವು. 2019ರಲ್ಲಿಯೂ ರಾಜ್ಯದ ಎಸಿಬಿ ವಿರೇಂದ್ರ ಕೆ. ರಾಮ್ ಮನೆ ಮೇಲೆ ಅಕ್ರಮ ಆಸ್ತಿಗಳಿಕೆ ಪ್ರಕರಣ ದಾಖಲಿಸಿಕೊಂಡು ದಾಳಿ ಮಾಡಿತ್ತು. ಆಗ 2.82 ಕೋಟಿ ಹಣ ಪತ್ತೆಯಾಗಿತ್ತು.
-
ಮುಂಬೈಗೆ ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ: ಅದಾನಿ ಎನರ್ಜಿಯಿಂದ 1,000 ಮೆಗಾವ್ಯಾಟ್ ಸಾಮರ್ಥ್ಯದ ಪವರ್ ಲಿಂಕ್ ಚಾಲನೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications