ದೆಹಲಿ ಚುನಾವಣೆ: ಬಿಜೆಪಿಗೆ ಮತ ಹಾಕಿದರೆ ಹಾಲಿ ಯೋಜನೆಗಳು ಬಂದ್: ಅರವಿಂದ್ ಕೇಜ್ರಿವಾಲ್

ದೆಹಲಿ, ಜನವರಿ 21: ದೆಹಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ 'ಜನಸಭೆ' ನಡೆಸಿದ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರಿಗೆ, ಯಾವ ಯೋಜನೆಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು, ಎಎಪಿ ಸಾಧನೆಗಳನ್ನು ವಿವರಿಸಿದರು.

ದೆಹಲಿಯಲ್ಲಿ ಜನವರಿ 20 ರಂದು ನಡೆದ ಜನಸಭೆಯಲ್ಲಿ ರಾಜ್ಯದ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ದೆಹಲಿಯಲ್ಲಿ ಎಎಪಿ ಮೂರನೇ ಭಾರಿಗೆ ಅಧಿಕಾರಕ್ಕೆ ಬಂದರೆ ಮುಖ್ಯವಾಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುವುದು. ಯುವಕರಿಗೆ ಈ ಬಾರಿಯ ಎಎಪಿ ಆದ್ಯತೆ ನೀಡಲಿದೆ ಎಂದು ಹೇಳಿದರು.

Don t Put Vote for BJP in Delhi Assembly Election 2025 Arvind Kejriwal Call

ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು ದೊಡ್ಡ ಕೆಲಸ. ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೆಲಸಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಯುವಕರೇ ದೇಶದ ಆಸ್ತಿ ಎಂದ ಅವರು, ಬಿಜೆಪಿಗೆ ನೀವು ಮತ ಹಾಕಿದರೆ ಹಾಲಿ ಯೋಜನೆಗಳು ಬಂದ್ ಆಗುತ್ತವೆ. ದಯವಿಟ್ಟು ಕೇಸರಿ ಪಡೆಗೆ ಆಶೀರ್ವದಿಸಭೇಡಿ ಎಂದು ಜನರಿಗೆ ಮನವಿ ಮಾಡಿದರು.

ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಎಎಪಿ ಕಳೆದ ಹತ್ತು ವರ್ಷಗಳಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಅವರು ವಿವರಿಸಿದರು. ಇಲ್ಲಿನ ಜನರಿಗೆ ಉಚಿತ ವಿದ್ಯುತ್, ನೀರು ಮತ್ತು ಗುಣಮಟ್ಟದ ಆರೋಗ್ಯ ನೀಡಲು ಒತ್ತು ಕೊಡಲಾಗಿದೆ. ಸರ್ಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿ ಇಡಲಾಗಿದೆ ಎಂದರು.

ನೀವು ಒಂದು ವೇಳೆ ಸದರಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಯನ್ನು ಬೆಂಬಲಿಸಿದರೆ, ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ಮೊಹಲ್ಲಾ ಕ್ಲಿನಿಕ್ ಬಂದ್ ಮಾಡುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಿಲ್ಲಿಸುತ್ತಾರೆ. ನೀವು ಬಸ್ ಪ್ರಯಾಣಕ್ಕೆ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಎಎಪಿ ಜಾರಿಗೆ ತಂದ ಉಚಿತ ವಿದ್ಯುತ್, ನೀರು, ಆರೋಗ್ಯ ರಕ್ಷಣೆ ಮತ್ತು ಉತ್ತಮ ಸರ್ಕಾರಿ ಶಿಕ್ಷಣ ಸೌಲಭ್ಯವನ್ನು ಬಿಜೆಪಿ ಅಧಿಕಾರದಲ್ಲಿರುವ ಬಿಹಾರ, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ತಂದಿಲ್ಲ. ಬೇಕಿದ್ದರೆ ಆ ರಾಜ್ಯಗಳಲ್ಲಿರುವ ನಿಮ್ಮ ಸಂಬಂಧಿಕರೆ ಕರೆ ಮಾಡಿ ಮಾಹಿತಿ ಕೇಳುವಂತೆ ಹೇಳಿದರು.

ಪಕ್ಷದ ಪ್ರಣಾಳಿಕೆ ಘೋಷಿಸಿದ್ದೇವೆ. 'ಮಹಿಳಾ ಸಮ್ಮಾನ್ ಯೋಜನೆ' ಅಡಿಯಲ್ಲಿ ಮಹಿಳೆಯರಿಗೆ ಮಾಸಕ 2,100 ರೂ. ಆರ್ಥಿಕ ನೆರವು, 'ಸಂಜೀವನಿ ಯೋಜನೆ' ಅಡಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ಸೇರಿದಂತೆ ಪ್ರಮುಖ ಘೋಷಣೆ ಮಾಡಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಟಿ ಕೆಲಸಗಳು ಮುಂದಿನ ಭಾರಿ ಆಗಲಿವೆ. ಎಎಪಿಗೆ ಮತ ಹಾಕು ವಂತೆ ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+