ನಟಿ ಖುಷ್ಬು ಸುಂದರ್, ರಾಜ್ಯಪಾಲ ಆರ್‌ಎನ್‌ ರವಿ ನಿಂದಿಸಿದ ಡಿಎಂಕೆ ನಾಯಕನ ಉಚ್ಚಾಟನೆ

ಚೆನ್ನೈ, ಜೂನ್‌ 19: ತಮಿಳುನಾಡಿನ ನಟಿ, ಬಿಜೆಪಿ ನಾಯಕಿ ಖುಷ್ಭು ಸುಂದರ್ ಮತ್ತು ರಾಜ್ಯಪಾಲ ಆರ್‌ಎನ್ ರವಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆಡಳಿತಾರೂಢ ಡಿಎಂಕೆ ಪಕ್ಷದ ನಾಯಕರೊಬ್ಬರನ್ನು ಉಚ್ಚಾಟಿಸಿದೆ.

ಡಿಎಂಕೆಯ ನಾಯಕರಾದ ಶಿವಾಜಿ ಕೃಷ್ಣಮೂರ್ತಿ ಎಂಬ ವ್ಯಕ್ತಿ ಜನವರಿಯಲ್ಲಿ ರಾಜ್ಯಪಾಲರ ವಿರುದ್ಧ ಬೆದರಿಕೆ ಹಾಕಿದ್ದ. ಆ ವೇಳೆ ಪಕ್ಷ ಅವರನ್ನು ಅಮಾನತು ಮಾಡಿತ್ತು. ಸಂಜೆ ಅವರನ್ನು ಬಂಧಿಸಲಾಯಿತು.

DMK leader expelled for insulting

ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ತಮ್ಮ ವಿರುದ್ಧ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ವಿಡಿಯೋದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಟ್ಯಾಗ್ ಮಾಡಿರುವ ಖುಷ್ಬು ಅವರು, ನಿಮ್ಮ ಕುಟುಂಬದ ಮಹಿಳೆಯರ ಬಗ್ಗೆ ಇಂತಹ ಹೇಳಿಕೆ ನೀಡಿದರೆ ನೀವು ಒಪ್ಪಿಕೊಳ್ಳುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

ನಿಮಗೆ ತಿಳಿದಿರದ ಸಂಗತಿಯೆಂದರೆ, ಅವರು ನನ್ನನ್ನು ಮಾತ್ರವಲ್ಲ, ನಿಮ್ಮನ್ನು ಮತ್ತು ನಿಮ್ಮ ತಂದೆಯಂತಹ ಮಹಾನ್ ನಾಯಕನನ್ನು ಅವಮಾನಿಸಿದ್ದಾರೆ. ನೀವು ಅವರಿಗೆ ಹೆಚ್ಚು ಅವಕಾಶವನ್ನು ನೀಡಿದರೆ, ಹೆಚ್ಚು ರಾಜಕೀಯ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ನಿಮ್ಮ ಪಕ್ಷವು ಅವಿವೇಕಿ ಗೂಂಡಾಗಳಿಗೆ ಸುರಕ್ಷಿತ ಸ್ವರ್ಗವಾಗುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

DMK leader expelled for insulting

ಈ ಬಗ್ಗೆ ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಮಾತನಾಡಿ, ಡಿಎಂಕೆಯ ಶಿವಾಜಿ ಕೃಷ್ಣಮೂರ್ತಿ ಅವರು ಹೀಗೆ ಮಾತನಾಡುತ್ತಿರುವುದು ಹೊಸದೇನಲ್ಲ, ಅವರು ಈ ಕೃತ್ಯಗಳನ್ನು ಎಸಗುತ್ತಲೇ ಇರುತ್ತಾರೆ. ಡಿಎಂಕೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಜನವರಿಯಲ್ಲಿ ಶಿವಾಜಿ ಕೃಷ್ಣಮೂರ್ತಿ ಅವರು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ರಾಜ್ಯಪಾಲರಾದ ಆರ್‌ಎನ್‌ ರವಿ ಅವರು ತಮ್ಮ ವಿಧಾನಸಭೆ ಭಾಷಣದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಹೇಳಲು ನಿರಾಕರಿಸಿದರೆ ಅವರ ಮೇಲೆ ಹಲ್ಲೆ ಮಾಡುವ ಹಕ್ಕು ನನಗಿಲ್ಲವೇ? ನೀವು (ರಾಜ್ಯಪಾಲರು) ತಮಿಳುನಾಡು ಸರ್ಕಾರ ಮಾಡಿದ ಭಾಷಣವನ್ನು ಓದದಿದ್ದರೆ, ಕಾಶ್ಮೀರಕ್ಕೆ ಹೋಗಿ ನಾವು ಭಯೋತ್ಪಾದಕರನ್ನು ಕಳುಹಿಸುತ್ತೇವೆ ಇದರಿಂದ ಅವರು ನಿಮ್ಮನ್ನು ಗುಂಡಿಕ್ಕಿ ಸಾಯಿಸುತ್ತಾರೆ ಎಂದು ಅವರು ಹೇಳಿದ್ದರು.

ಅದೇ ನಿಂದನೀಯ ವಿಡಿಯೋದಲ್ಲಿ ಅಣ್ಣಾಮಲೈ ಭಾರತೀಯ ಪ್ರಜೆಯೇ ಎಂದು ಪ್ರಶ್ನಿಸಿದ್ದರು. ರಾಜ್ಯಪಾಲರು ಮತ್ತು ಡಿಎಂಕೆ ಸರ್ಕಾರದ ನಡುವಿನ ಜಟಾಪಟಿ ಹೆಚ್ಚಾಗುತ್ತಿದ್ದಂತೆಯೇ ರಾಜ್ಯಪಾಲರ ವಿರುದ್ಧ ಟೀಕೆಗಳು ಹೆಚ್ಚಾಗಿದ್ದವು. ಇತ್ತೀಚೆಗೆ ಬಂಧೀತ ಸಚಿವ ಸೆಂಥಿಲ್ ಬಾಲಾಜಿಯನ್ನು ಖಾತೆಯಿಲ್ಲದೆ ಸಚಿವರನ್ನಾಗಿ ಉಳಿಸಿಕೊಳ್ಳುವ ಮುಖ್ಯಮಂತ್ರಿಯ ಪ್ರಸ್ತಾಪವನ್ನು ರಾಜ್ಯಪಾಲರು ಒಪ್ಪಲಿಲ್ಲ. ಅವರ ಖಾತೆಗಳನ್ನು ಇತರ ಇಬ್ಬರು ಸಚಿವರಿಗೆ ವರ್ಗಾಯಿಸಲು ಮಾತ್ರ ಅನುಮೋದನೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+