ಭಾರತದ ವಿರುದ್ಧ ಖಲಿಸ್ತಾನಿಗಳ ಸಂಚು, ನಿಲ್ಲುತ್ತಿಲ್ಲ ಕಿತ್ತಾಟ & ತಿಕ್ಕಾಟ!
ಖಲಿಸ್ತಾನಿಗಳಿಗೆ ಭಾರತದ ವಿರುದ್ಧ ವಿಷ ಉಗುಳುವುದು ಬಿಟ್ಟು ಬೇರೆ ಏನು ಗೊತ್ತಾಗುತ್ತಿಲ್ಲ ಅಂತಾ ಕಾಣುತ್ತೆ. ಆದ್ರೆ ಭಾರತದ ಎಲ್ಲಾ ಸರ್ಕಾರಗಳು ಪಕ್ಷಾತೀತವಾಗಿ ಖಲಿಸ್ತಾನಿಗಳ ಈ ಸಂಚನ್ನು ವಿಫಲಗೊಳಿಸುತ್ತಾ ಬಂದಿವೆ. ಹೀಗಿದ್ದಾಗಲೇ ಖಲಿಸ್ತಾನಿಗಳ ಪರ ಪಾಶ್ಚಿಮಾತ್ಯರ ಬೆಂಬಲ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಆರೋಪಗಳ ನಡುವೆ ಅಮೆರಿಕದ ನೆಲದಲ್ಲಿ ಮಹತ್ವದ ಘಟನೆ ನಡೆದಿದೆ.
ಹೌದು ಖಾಲಿಸ್ತಾನ್ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸುತ್ತಿರುವ ಅಮೆರಿಕ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು, ಎಂಬ ಆರೋಪವನ್ನ ಅಮೆರಿಕ ಮಾಡಿತ್ತು. ಈಗ ಈ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದೆ. ಭಾರತದ ಪ್ರಜೆ ನಿಖಿಲ್ ಗುಪ್ತ ಎಂಬುವವರ ವಿರುದ್ಧ ಸಂಚು ರೂಪಿಸಿದ ದೋಷಾರೋಪ ಹೊರಿಸಿದೆ ಅಮೆರಿಕ. ನಿಖಿಲ್ ಗುಪ್ತಾ 2023 ರ ಜೂನ್‌ನಲ್ಲಿ ಜೆಕ್ ಗಣರಾಜ್ಯದ ಅಧಿಕಾರಿಗಳಿಂದ ಅರೆಸ್ಟ್ ಆಗಿದ್ದ. ಆದ್ರೆ ಈಗ ಇದೇ ನಿಖಿಲ್ ವಿರುದ್ಧ ಗಂಭೀರ ಆರೋಪ ಹೊರಿಸಲಾಗಿದೆ.

ಅಮೆರಿಕ ಹೇಳುತ್ತಿರುವುದು ಏನು?
ಈ ಕುರಿತು ಹೇಳಿಕೆ ನೀಡಿರುವ, ಅಮೆರಿಕದ ಅಟಾರ್ನಿ ಕಚೇರಿಯ ಫೆಡರಲ್ ಪ್ರಾಸಿಕ್ಯೂಟರ್ ಡಾಮಿಯನ್ ವಿಲಿಯಮ್ಸ್ 'ಈ ಆರೋಪಿ ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ಸ್ಥಾಪನೆ ಪ್ರತಿಪಾದಿಸಿದ್ದ ನ್ಯೂಯಾರ್ಕ್ ನಗರದ ಭಾರತ ಮೂಲದ ವ್ಯಕ್ತಿಯೊಬ್ಬರನ್ನ ಹತ್ಯೆ ಮಾಡಲು ಸಂಚನ್ನ ಕೂಡ ರೂಪಿಸಿದ್ದ' ಅಂತ ಆರೋಪ ಮಾಡ್ಲಾಗಿದೆ. ಈ ಮೂಲಕ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಯತ್ನ ಆರೋಪವನ್ನ ನಿಖಿಲ್ ಗುಪ್ತ ತಲೆಗೆ ಕಟ್ಟಲಾಗುತ್ತಿದೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.
ಅಮೆರಿಕ ಪ್ರಜೆಗಳ ರಕ್ಷಣೆ ಮಾಡುತ್ತೇವೆ!
ಹಾಗೇ ತಮ್ಮ ಹೇಳಿಕೆ ಮುಂದುವರಿಸಿರುವ ಡಾಮಿಯನ್ ವಿಲಿಯಮ್ಸ್, ಅಮೆರಿಕ ನೆಲದಲ್ಲಿ ಅಮೆರಿಕದ ಪ್ರಜೆಗಳನ್ನು ಹತ್ಯೆಗೈಯುವ ಯಾವುದೇ ರೀತಿ ಯತ್ನ ನಾವು ಸಹಿಸಲಾರೆವು ಅಂತಾ ಹೇಳಿದ್ದಾರೆ. ಅಲ್ದೆ ಇಲ್ಲಿರುವ ಅಥವಾ ವಿದೇಶದಲ್ಲಿ ಇರುವ ಅಮೆರಿಕನ್ನರಿಗೆ ಹಾನಿಮಾಡುವ ಯಾರನ್ನೇ ಆದರೂ ಅಡ್ಡಿಪಡಿಸುವ, ತನಿಖೆ ನಡೆಸುವ, ವಿಚಾರಣೆಗೆ ಒಳಪಡಿಸೋದಕ್ಕೆ ಸದಾ ಸಿದ್ಧ ಎಂದಿದ್ದಾರೆ ಡಾಮಿಯನ್ ವಿಲಿಯಮ್ಸ್. ಈ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಭಾರತೀಯ ಅಧಿಕಾರಿ ವಿರುದ್ಧ ಆರೋಪ?
ಇನ್ನು ಅಮೆರಿಕದ ಪ್ರಜೆಯನ್ನ ಹತ್ಯೆಗೈಯಲು ಭಾರತ ಸರ್ಕಾರದ ಅಧಿಕಾರಿಯೊಬ್ಬರು ನಿಖಿಲ್ ಗುಪ್ತಾನ ನಿಯೋಜಿಸಿದ್ದರು ಎಂದು ಅಮೆರಿಕ ಅಟಾರ್ನಿ ಕಚೇರಿ ಪ್ರಕಟಿಸಿದ ದೋಶಾರೋಪಣೆ ಆರೋಪ ಮಾಡಿದೆ. ಇಷ್ಟಾದರೂ ನಿಖಿಲ್ ಗುಪ್ತಾ ಯಾರ ಹತ್ಯೆಗೆ ಯತ್ನಿಸಿದ್ದ? ಎಂಬುದರ ಬಗ್ಗೆ ಸ್ಪಷ್ಟನೆ ನೀಡಲ್ಲ. ಈ ನಡುವೆ ಅದು ಗುರುಪತ್ವಂತ್ ಸಿಂಗ್ ಪನ್ನೂನ್ ಆಗಿರಬೇಕೆಂಬ ಅನುಮಾನ ಮೂಡಿದೆ. ಹತ್ಯೆಯ ಸಂಚನ್ನು ನಿರ್ದೇಶಿಸಿದ ಆರೋಪದ ಹಿನ್ನೆಲೆ ಭಾರತೀಯ ಅಧಿಕಾರಿಯನ್ನು ದೋಷಾರೋಪಣೆ ಪತ್ರದಲ್ಲಿ ಸಿಸಿ-1 ಎಂದು ಹೆಸರಿಸಲಾಗಿದೆ. ಒಟ್ನಲ್ಲಿ ಈ ಮೂಲಕ ಖಲಿಸ್ತಾನಿ ವಿಚಾರದಲ್ಲಿ ಮತ್ತೊಮ್ಮೆ ಕಿಚ್ಚು ಹೊತ್ತಿಕೊಂಡಿದೆ. ಕೆನಡಾ ನಂತರ, ಮತ್ತೊಮ್ಮೆ ಖಲಿಸ್ತಾನಿಗಳ ವಿಚಾರ ಜಾಗತಿಕ ಮಟ್ಟದಲ್ಲಿ ಸುದ್ದಿಗೆ ಬಂದಿದೆ.
ಯಾವಾಗ ನಿಲ್ಲುತ್ತೆ ಖಲಿಸ್ತಾನಿ ಕಿರಿಕ್?
2023ರ ಮೇನಲ್ಲಿ ಸಿಸಿ-1 ಅಧಿಕಾರಿ ಗುಪ್ತಾನ, ಖಾಲಿಸ್ತಾನ್ ಪರವಾಗಿರುವ ಅಮೆರಿಕ ಪ್ರಜೆಯ ಹತ್ಯೆಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆ ನಿಖಿಲ್ ಗುಪ್ತಾ ತನ್ನ ಸಹವರ್ತಿ ಸಂಪರ್ಕಿಸಿದ್ದನು ಎಂದು ಆರೋಪ ಮಾಡಲಾಗಿದೆ. ಒಟ್ನಲ್ಲಿ ಖಲಿಸ್ತಾನಿಗಳು ಭಾರತದ ವಿರುದ್ಧ ಅದೇನೆಲ್ಲಾ ಕಿರಿಕ್ ಮತ್ತು ಕುತಂತ್ರ ಮಾಡಿದರೂ ಅದರು ವರ್ಕೌಟ್ ಆಗುತ್ತಿಲ್ಲ. ಈ ಬೆಳವಣಿಗೆ ಮಧ್ಯೆ ಕೆನಡಾ ರೀತಿಯೇ ಪಾಶ್ಚಿಮಾತ್ಯ ದೇಶಗಳು ಭಾರತದ ವಿರುದ್ಧ, ಬೇಕು ಅಂತಲೇ ಈ ರೀತಿ ವರ್ತಿಸುತ್ತಿರುವ ಆರೋಪ ಕೇಳಿಬಂದಿದೆ. ಇದಕ್ಕೆಲ್ಲಾ ಶೀಘ್ರದಲ್ಲೇ ಸೂಕ್ತ ಉತ್ತರ ಸಿಗುವ ನಿರೀಕ್ಷೆ ಕೂಡ ಇದೆ.












Click it and Unblock the Notifications