ಸೈಬರ್ ಕಳ್ಳರ ಹೊಸ ಪ್ಲಾನ್: ಸಿಬಿಐ ಅಧಿಕಾರಿ ಎಂದು ಹೆದರಿಸಿ ಕೋಟಿ ಕೋಟಿ ಲೂಟಿ; ಗೃಹ ಸಚಿವಾಲಯದಿಂದ ಅಲರ್ಟ್
ದೇಶದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಕೇಂದ್ರ ಸರ್ಕಾರ ಇದೀಗ ಸೈಬರ್ ವಂಚರರ ವಿರುದ್ಧ ಸಮರ ಸಾರಿದೆ. ಫೋನ್ ಕರೆ, ಸಂದೇಶ, ಹ್ಯಾಕ್ ಮೂಲಕ ವಂಚನೆ ಹೆಚ್ಚಾಗುತ್ತಿದೆ. "ಡಿಜಿಟಲ್ ಅರೆಸ್ಟ್" ಎಂದು ಕರೆಯಲ್ಪಡುವ ವಂಚನೆಗಳು ಭಾರತದ ಪ್ರಮುಖ ನಗರಗಳಲ್ಲಿ ಹಿರಿಯ ನಾಗರಿಕರ ಟಾರ್ಗೆಟ್ ಮಾಡಿ ಮಾಡಲಾಗುತ್ತಿದೆ. ಇದರಿಂದ ಕೋಟಿಗಟ್ಟಲೆ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದ್ದು, ಇಂಥಹ ಅಪರಾಧಗಳ ವಿರುದ್ಧ ಗೃಹ ವ್ಯವಹಾರಗಳ ಸಚಿವಾಲಯವು ಭಾರತಾದ್ಯಂತ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ.
ಸೈಬರ್ ತನಿಖಾಧಿಕಾರಿಗಳ ಅಧಿಕಾರಿಗಳ ಪ್ರಕಾರ, ಸೈಬರ್ ವಂಚಕರು ತಾವು ದೆಹಲಿ ಪೊಲೀಸ್, ಸಿಬಿಐ ಎಂದು ಹೇಳುತ್ತಾರೆ. ಇಲ್ಲವೇ TRAI ನಂತಹ ಸಂಸ್ಥೆಗಳನ್ನು ಅನುಕರಿಸಿ ವೀಡಿಯೊ ಕರೆ ಮಾಡಿ ಭಯ ಹುಟ್ಟಿಸುತ್ತಾರೆ. ಅಧಿಕಾರಿಗಳಂತೆ ನಕಲಿ ಸಮವಸ್ತ್ರಗಳು ಧರಿಸಿ ನೈಜ ಅಧಕಾರಿ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಇವರ ಜಾಲಕ್ಕೆ ಒಳಗಾಗುವ ಬಲಿಪಶುಗಳು ಜೀವಮಾನದುದ್ದಕ್ಕೂ ದುಡಿದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಕರ ಜಾಲಕ್ಕೆ ನೀಡುತ್ತಿದ್ದಾರೆ.

ಕೆಲವು ವಂಚಕರು ಬ್ಯಾಂಕ್ ಖಾತೆಗಳ ನಿರ್ವಹಣೆ ಸೋಗಿನಲ್ಲಿ, ಆರ್‌ಬಿಐ ಅಥವಾ ಇತರ ಕಾನೂನುಬದ್ಧ ಸಂಸ್ಥೆಗೆ ಸೇರಿರುವ ಅಧಿಕಾರಿಗಳು ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿ ಹಣ ದೋಚುತ್ತಿದ್ದಾರೆ. ಈ ಡಿಜಿಟಲ್ ಬಂಧನ ಪ್ರಕರಣಗಳನ್ನು ಸಂಘಟಿತ ಹಣಕಾಸು ಅಪರಾಧಗಳೆಂದು ಪರಿಗಣಿಸಲು ನಿರ್ಧರಿಸಲಾಗಿದೆ. ತನಿಖೆಗಳು ಮತ್ತು ಹಣ-ಪತ್ತೆ ಪ್ರಯತ್ನಗಳನ್ನು ಚುರುಕುಗೊಳಿಸಲು ಎಂಎಚ್‌ಎ ರಾಜ್ಯ ಪೊಲೀಸರು ಮತ್ತು ಸೈಬರ್ ಅಪರಾಧ ಘಟಕಗಳಿಗೆ ನಿರ್ದೇಶಿಸಿದೆ. ಸೈಬರ್ ಪೊಲೀಸರು ದೇಶದಲ್ಲಿನ ಸೈಬರ್ ದಾಳಿ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಗ್ವಾಲಿಯರ್‌ನಲ್ಲಿ ವರದಿಯಾಗಿದ್ದ ಪ್ರಕರಣ ನೋಡುವುದಾದರೆ, ಅಲ್ಲಿ 75 ವರ್ಷದ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಬೆದರಿಸಿ ನಕಲಿ ಡಿಜಿಟಲ್ ಬಂಧನದಲ್ಲಿ ಇರಿಸಿ ಹಂತ ಹಂತವಾಗಿ ಸುಮಾರು 1.12 ಕೋಟಿ ರೂಪಾಯಿ ಹಣ ವಂಚಿಸಲಾಗಿತ್ತು. ಆರಂಭದಲ್ಲಿ ವಂಚಕರು ಸಂತ್ರಸ್ತರ ಆಧಾರ್-ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಇನ್ನು ಮುಂದೆ ಸ್ಥಗತಗೊಳ್ಳಲಿದೆ ಎಂದು ಹೇಳಿದ್ದಾರೆ. ಹಣ ವರ್ಗಾವಣೆ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ. ತಾವು ಹಿರಿಯ ಪೊಲೀಸ್ ಮತ್ತು ಸಿಬಿಐ ಅಧಿಕಾರಿಗಳು ಎಂದು ಸುಳ್ಳು ಹೇಳಿದ್ದಾರೆ. ಅಲ್ಲದೇ ಮ್ಯೂಚುವಲ್ ಫಂಡ್ ಹೂಡಿಕೆ ಪರಿಶೀಲನೆ ಹೆಸರಿನಲ್ಲಿ ಹಣ ವರ್ಗಾಯಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ದೆಹಲಿಯಲ್ಲಿ ದೊಡ್ಡ ವಂಚನೆ ಪ್ರಕರಣ ಬೆಳಕಿಗೆ
ದೆಹಲಿ ದಕ್ಷಿಣದಲ್ಲೂ ಇಂಥದ್ದೇ ಬೃಹತ್ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲಿನ ನಿವಾಸಿಗಳಾದ ವೃದ್ಧ ವೈದ್ಯ ದಂಪತಿಯನ್ನು ಯಾಮಾರಿಸಿ ಸುಮಾರು 15 ಕೋಟಿ ರೂ. ಕೂಡಲೇ ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ತಾವು TRAI ಮತ್ತು ಪೊಲೀಸ್ ಅಧಿಕಾರಿಗಳು ಎಂದು ನಂಬಿಸಿದ್ದರು. ನೀವು ಕಪ್ಪು ಹಣ ವಹೀವಾಟಿನಲ್ಲಿ ಸಂಬಂಧ ಹೊಂದಿದ್ದೀರಿ. ಹೀಗಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಪದೇ ಪದೇ ವೀಡಿಯೋ ಕರೆ ಮಾಡಿದ್ದರು. ಕಾನೂನು, ರೂಲ್ಸ್ ಎಂದು ಪ್ರಸ್ತಾಪಿಸಿ ಬೆದರಿಸಿ ಹಣ ಲಪಟಾಯಿಸಿದ್ದರು.
ವಂಚನೆಗೆ ಒಳಗಾಗದಂತೆ ನಾಗರಿಕರು ಏನು ಮಾಡಬೇಕು?
ಸಾರ್ವಜನಿಕರು ತಿಳಿಯಬೇಕಾದ ಅಂಶವೆಂದರೆ ಯಾವ ಕಾನೂನು ಜಾರಿ ಸಂಸ್ಥೆಯು ಫೋನ್ ಕರೆ ಅಥವಾ ವೀಡಿಯೊ ಕರೆ ಮೂಲಕ ನಾಗರಿಕರನ್ನು ವಿಚಾರಣೆ ಮಾಡುವುದಿಲ್ಲ. ತನಿಖಾ ಉದ್ದೇಶಗಳಿಗಾಗಿ ಹಣ ವರ್ಗಾವಣೆ ಕೇಳುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ. ಇನ್ನೂ ಸರ್ಕಾರಿ ಸಂಸ್ಥೆಗಳು WhatsApp ಮೂಲಕ ನಿಮ್ಮನ್ನು ವಿಚಾರಣೆ ಮಾಡುವುದಿಲ್ಲ. ಆರ್‌ಟಿಜಿಎಸ್ ಇಲ್ಲವೇ ಇತರ ಮಾರ್ಗಗಳ ಮೂಲಕ ಹಣಕಾಸಿನ ಪರಿಶೀಲನೆಗೆ ಒತ್ತಾಯ ಮಾಡುವುದಿಲ್ಲ. ಇಂತಹ ಒತ್ತಾಯ, ಕರೆಗಳು ಬಂದಾಗ ಜನರು ಜಾಗೃತರಾಗಿರಬೇಕೆಂದು ತಿಳಿಸಿದರು. ಬ್ಯಾಂಕ್ ಕೆವೈಸಿಗೆ, ಒಟಿಪಿ ಕೇಳುವುದು, ಅದಕ್ಕಾಗಿ ಒತ್ತಾಯಿಸುವುದಿಲ್ಲ ಎಂದು ಸೈನರ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ನಿಮಗೇನಾದರೂ ಅನುಮಾನ ಬಂದಲ್ಲಿ ನಾಗರಿಕರು ಸ್ಥಳೀಯ ಪೊಲೀಸರೊಂದಿಗೆ ಪರಿಶೀಲಿಸಿಕೊಳ್ಳಬೇಕು. ವೈಯಕ್ತಿಕ ಅಥವಾ ಬ್ಯಾಂಕಿಂಗ್ ವಿವರ, ಇತರ ವೈಯಕ್ತಿ ಮಾಹಿತಿ ಹಂಚಿಕೊಳ್ಳಬಾರದು. ಅನುಮಾನ ಬಂದಲ್ಲಿ ಕೂಡಲೇ www.cybercrime.gov.in ನಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ "ಮತ್ತು ಶಂಕಿತರನ್ನು ವರದಿ ಮಾಡಿ" ವಿಭಾಗಕ್ಕೆ ವರದಿ ಮಾಡಿಕೊಳ್ಳಬೇಕು. ಇಂತಹ ವಂಚಕರ ಜಾಲ ತಡೆಗೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕ್ಷೇತ್ರ, ದೂರಸಂಪರ್ಕ ಸಂಸ್ಥೆಗಳು ಮತ್ತು ಸೈಬರ್ ಅಪರಾಧ ಘಟಕಗಳ ಜೊತೆ ಪರಿಣಾಮಕಾರಿ ಸಮನ್ವಯ ಹೊಂದಿದೆ. ವಂಚನೆ ಹಾವಳಿಗೆ ಕಡಿವಾಣ ಹಾಕಲು ನಿರಂತರ ಕಾರ್ಯಾಚರಣೆ ಮಾಡುತ್ತಿದ್ದು, ಅದನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications