ಗುಪ್ತಾಂಗವನ್ನೇ ಶಿವದೇವರಿಗೆ ಅರ್ಪಿಸಿದ ಆಧುನಿಕ ಬೇಡರ ಕಣ್ಣಪ್ಪ!

ಒರಿಸ್ಸಾದಲ್ಲಿ ಗುಪ್ತಾಂಗವನ್ನೇ ಕತ್ತರಿಸಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬ ಈಶ್ವರನಿಗೆ ಹರಕೆ ಸಲ್ಲಿಸಿದ್ದಾನೆ.

ಭುವನೇಶ್ವರ, ಮಾ 6: ಅಂದು ಬೇಡರ ಕಣ್ಣಪ್ಪ ಶಿವನಿಗಾಗಿ ಕಣ್ಣನ್ನೇ ಕಿತ್ತುಕೊಟ್ಟ, ಇಲ್ಲೊಬ್ಬ ಶಿವನಿಗಾಗಿ ತನ್ನ ಗುಪ್ತಾಂಗವನ್ನೇ ಕಚಕ್ ಅನಿಸಿಬಿಟ್ಟ.. ಎಲ್ಲಾ ಶಿವನ ಇಚ್ಚೆ..

ಇವನು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವನೋ, ಅಥವಾ ಈತನದ್ದು ದೇವಾರಾಧನೆಯ ಪರಾಕಾಷ್ಠೆಯೋ ಒಟ್ಟಿನಲ್ಲಿ ಗುಪ್ತಾಂಗವನ್ನು ದೇವರಿಗೆ ಅರ್ಪಿಸಿ, ಮೂರ್ಛೆಗೆ ಹೋದವನು ಇನ್ನೂ ಎದ್ದಿಲ್ಲ ಎನ್ನುವುದು ಮಾತ್ರ ಸತ್ಯ.

ಈ ವಿಶಿಷ್ಟ ಹರಕೆಯನ್ನು ದೇವರಿಗೆ ಅರ್ಪಿಸಿದವನು ಒರಿಸ್ಸಾದ ಗಂಜಾಂ ಜಿಲ್ಲೆಯ ನಾಯಕ್ ಎನ್ನುವ ವ್ಯಕ್ತಿ. ನಲವತ್ತು ವರ್ಷದ ಈ ವ್ಯಕ್ತಿ, ದೇವರಿಗೆ ಗುಪ್ತಾಂಗವನ್ನು ಅರ್ಪಿಸಿ, ರಕ್ತಸಿಕ್ತವಾಗಿ ದೇವಾಲಯದಲ್ಲೇ ಮೂರ್ಛೆ ಹೋಗಿದ್ದ.

Devotee in Odisha state offered different seva to Lord Shiva

ಎರಡು ದಿನಗಳ ಹಿಂದೆ ದೇವಾಲಯದಲ್ಲೇ ಪ್ರಾರ್ಥನೆ ಸಲ್ಲಿಸುತ್ತಿದ್ದ ಈ ವ್ಯಕ್ತಿ, ಅರ್ಚಕರು ದೇವಾಲಯದ ಬಾಗಿಲು ಮುಚ್ಚಿಕೊಂಡು ಹೋದ ಮೇಲೆ, ಈ ಕೆಲಸ ಮಾಡಿಕೊಂಡಿದ್ದಾನೆ.

ಮರುದಿನ ಪೂಜೆಗೆಂದು ದೇವಾಲಯಕ್ಕೆ ಆಗಮಿಸಿದ ಅರ್ಚಕರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ನೋಡಿ ಬೆಚ್ಚಿಬಿದ್ದು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಅಂಬುಲೆನ್ಸ್ ಜೊತೆ ದೇವಾಲಯಕ್ಕೆ ಆಗಮಿಸಿದ ಪೊಲೀಸರು ಮತ್ತು ವೈದ್ಯರು ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಇದುವರೆಗೂ ನಾಯಕ್ ಗೆ ಪ್ರಜ್ಞೆ ಬಂದಿಲ್ಲ.

ಹಲವು ವರ್ಷಗಳಿಂದ ಮೂರ್ಛೆ ರೋಗದ ಕಾಯಿಲೆಯಿಂದ ಬಳಲುತ್ತಿದ್ದ ಈ ವ್ಯಕ್ತಿ, ಮಾನಸಿಕವಾಗಿ ನೊಂದು ಈ ರೀತಿಯ ಹರಕೆ ನೀಡಿ, ಶಿವನ ಅನುಗ್ರಹಕ್ಕೆ ಪಾತ್ರನಾಗಲು ಹೀಗೆ ಮಾಡಿದ್ದರೂ ಮಾಡಿರಬಹುದು ಎನ್ನುವುದು ಸ್ಥಳೀಯರ ಊಹೆ..

ಒಟ್ಟಿನಲ್ಲಿ ಶಿವ ತನ್ನ ಭಕ್ತಗಣವನ್ನು ಹೇಗೆ ಹೇಗೆ ಪರೀಕ್ಷಿಸುತ್ತಾನೋ.. ಹರಹರ ಮಹಾದೇವ್.. (ಮಾಹಿತಿ: ಈಸಂಜೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+