Breaking; ತೆಲಂಗಾಣ ಸಿಎಂ ಪುತ್ರಿಗೆ ಬಿಗ್ ಶಾಕ್ ನೀಡಿದಿ ಸಿಬಿಐ
ತೆಲಂಗಾಣ ಸಿಎಂ ಕೆ. ಚಂದ್ರಶೇಖರರಾವ್ ಪುತ್ರಿ ಕೆ. ಕವಿತಾ ಮಾಜಿ ಆಡಿಟರ್ ಬಂಧನವಾಗಿದೆ. ಸಿಬಿಐ ಈ ಬಂಧನ ಮಾಡಿದೆ.
ನವದೆಹಲಿ, ಫೆಬ್ರವರಿ 08; ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪುತ್ರಿ ಕೆ. ಕವಿತಾ ಮಾಜಿ ಆಡಿಟರ್ ಬಂಧನವಾಗಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಬಂಧನ ಮಾಡಿದೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ. ಕವಿತಾ ಸಹ ಆರೋಪಿ. ಈ ಹಗರಣದ ತನಿಖೆ ಕೈಗೊಂಡಿರುವ ಸಿಬಿಐ ಕೆ. ಕವಿತಾ ಮಾಜಿ ಆಡಿಟರ್ ಬುಚ್ಚಿಬಾಬು ಗೋರಂಟ್ಲಾ ಬಂಧಿಸಿದೆ.

ಹೈದರಾಬಾದ್ ಮೂಲದ ಬುಚ್ಚಿಬಾಬು ಗೋರಂಟ್ಲಾ ಪಾತ್ರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಇದೆ ಎಂದು ಸಿಬಿಐ ಹೇಳಿದ್ದು, ಬಂಧಿಸಿ ವಿಚಾರಣೆ ನಡೆಸುತ್ತಿದೆ. 2021-22ರ ದೆಹಲಿ ಅಬಕಾರಿ ನೀತಿಯ ಅಡಿ, ಅಕ್ರಮವಾಗಿ ಲೈಸೆನ್ಸ್ ಮತ್ತು ಮಾರಾಟದಲ್ಲಿ ಹೆಚ್ಚಿನ ಲಾಭವನ್ನು ದೊರಕಿಸಿ ಕೊಡಲಾಗಿದೆ ಎಂಬ ಆರೋಪವಿದೆ.
ಬುಚ್ಚಿಬಾಬು ಗೋರಂಟ್ಲಾ ಈ ಹಿಂದೆ ಕವಿತಾ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ನ್ಯಾಯಾಲಯದ ಮುಂದೆ ಬುಚ್ಚಿಬಾಬು ಗೋರಂಟ್ಲಾ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ಪಡೆಯುವ ನಿರೀಕ್ಷೆ ಇದೆ.
ವಿಚಾರಣೆಗೆ ಸಹಕಾರ ನೀಡದ ಆರೋಪ; ಸಿಬಿಐ ಮಂಗಳವಾರ ಬುಚ್ಚಿಬಾಬು ಗೋರಂಟ್ಲಾಗೆ ದೆಹಲಿಗೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸೌತ್ ಗ್ರೂಪ್ ಪರವಾಗಿ ಅವರು ಕೆಲಸ ಮಾಡಿದ್ದರು. ವಿಚಾರಣೆ ವೇಳೆ ಸಹಕಾರ ನೀಡಿದ ಆರೋಪದ ಹಿನ್ನಲೆಯಲ್ಲಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ದಹಲಿ ಹೊಸ ಅಬಕಾರಿ ನೀತಿ ರೂಪಿಸುವಲ್ಲಿ ಬುಚ್ಚಿಬಾಬು ಗೋರಂಟ್ಲಾ ಪಾತ್ರವಿದೆ. ಹೈದರಾಬಾದ್ ಮೂಲದ ಹೋಲ್‌ಸೆಲ್ ಮತ್ತು ರಿಟೇಲ್ ಮದ್ಯದ ಉದ್ಯಮಿಗಳಿಗೆ ಸಹಕಾರಿಯಾಗುವಂತೆ ನೀತಿ ರೂಪಿಸಿದ್ದಾರೆ ಎಂಬ ಆರೋಪವಿದೆ.
ಡಿಸೆಂಬರ್ 12ರಂದು ಸಿಬಿಐ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ. ಕವಿತಾ ವಿಚಾರಣೆಯನ್ನು ಹೈದರಾಬಾದ್‌ನಲ್ಲಿ ನಡೆಸಿದ್ದರು. ಸುಮಾರು 7 ಗಂಟೆಗಳ ಕಾಲ ವಿಚಾರಣೆ ನಡೆದಿತ್ತು. ಇಡಿ ಸಹ ಈ ಪ್ರಕರಣದ ವಿಚಾರಣೆ ನಡೆಸಿ, ಕಿಕ್ ಬ್ಯಾಕ್ ಪಡೆದು ಮದ್ಯದ ಉದ್ಯಮಿಗಳಿಗೆ ಸಹಕಾರ ನೀಡಲಾಗಿದೆ ಎಂದು ಆರೋಪ ಮಾಡಿತ್ತು.
ದೆಹಲಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹೊಸ ಅಬಕಾರಿ ನೀತಿಯನ್ನು ಎಎಪಿ ಸರ್ಕಾರ ಕಳೆದ ವರ್ಷ ವಾಪಸ್ ಪಡೆದಿತ್ತು. ಲೆಫ್ಟಿನೆಂಟ್ ಗೌರ್ನರ್ ವಿ. ಕೆ. ಸಕ್ಸೇನಾ ಹೊಸ ನೀತಿ ಬಗ್ಗೆ ಸಿಬಿಐ ತನಿಖೆಗೆ ಆದೇಶ ನೀಡಿದ್ದರು.












Click it and Unblock the Notifications