Get Updates
Get notified of breaking news, exclusive insights, and must-see stories!

RSS ಕೌರವರು ಎಂದು ಟೀಕೆ: ರಾಹುಲ್ ಗಾಂಧಿ ವಿರುದ್ಧ ದಾಖಲಾಯ್ತು ಮಾನನಷ್ಟ ಮೊಕದ್ದಮೆ, ಪ್ರಕರಣವೇನು? ತಿಳಿಯಿರಿ

ನವದೆಹಲಿ, ಮಾರ್ಚ್‌ 31: 'ಮೋದಿ' ಉಪನಾಮ ಕುರಿತು ಟೀಕೆ ವಿಚಾರವಾಗಿ ಇತ್ತೀಚೆಗಷ್ಟೇ ಸೂರತ್ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾಗಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಕಾಂಗ್ರೆಸ್‌ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿಯವರು ಯಾತ್ರೆ ವೇಳೆ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಯಿಂದ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Defamation Case against Rahul Gandhi for calling RSS 21st century Kauravas

ಜನವರಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವೇದಿಕೆ ಕಾರ್ಯಕ್ರಮವೊಂದರಲ್ಲಿ 'ರಾಷ್ಟ್ರೀಯ ಸ್ವಯಂಸೇವಕ ಸಂಘ' (RSS) ಅನ್ನು 21 ನೇ ಶತಮಾನದ ಕೌರವರೊಂದಿಗೆ ರಾಹುಲ್ ಗಾಂಧಿ ಅವರು ಹೋಲಿಕೆ ಮಾಡಿ ಮಾತನಾಡಿದ್ದರು. ಆರ್‌ಎಸ್‌ಎಸ್ ನವರು ಈಗ ಖಾಕಿ ಹಾಫ್ ಪ್ಯಾಂಟ್ ಧರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಶಾಖಾಗಳಲ್ಲಿದ್ದಾರೆ. ಭಾರತದ 2-3 ಬಿಲಿಯನೇರ್‌ಗಳು ಕೌರವರ ಜೊತೆ ನಿಂತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮೇಲಿನ 'ಕೌರವರು' ಎಂಬ ಟೀಕೆಗೆಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಹರಿದ್ವಾರದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. RSS ಸ್ವಯಂಸೇವಕ ಎಂದು ಹೇಳಿಕೊಂಡಿರುವ ಕಮಲ್ ಭಡೋರಿಯಾ ಎಂಬುವವರು ದೂರು ಸಲ್ಲಿಸಿರುವುದಾಗಿ ವಕೀಲ ಅರುಣ್ ಭಡೋರಿಯಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಏಪ್ರಿಲ್ 12ರಂದು ದೂರಿನ ವಿಚಾರಣೆ

ಈ ಪ್ರಕರಣ ಕುರಿತ ದೂರನ್ನು ನ್ಯಾಯಾಲಯವು ಏಪ್ರಿಲ್ 12 ರಂದು ಕೈಗೆತ್ತಿಕೊಳ್ಳಲಿದೆ. ಭಾರತೀಯ ದಂಡ ಸಂಹಿತೆಯ (IPC) 499 ಮತ್ತು 500 ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಎರಡು ನಿಬಂಧನೆಗಳು ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿವೆ ಮತ್ತು ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸೂಚಿಸುತ್ತವೆ ಎಂದು ವಕೀಲರು ತಿಳಿಸಿದ್ದಾರೆ.

Defamation Case against Rahul Gandhi for calling RSS 21st century Kauravas

ಆರ್‌ಎಸ್‌ಎಸ್ 21 ನೇ ಶತಮಾನದಲ್ಲಿ ಖಾಕಿ ಹಾಫ್ ಪ್ಯಾಂಟ್ ಧರಿಸಿದ್ದಾರೆ. ಕೈಯಲ್ಲಿ ಲಾಠಿ ಹಿಡಿದು ಶಾಖಾಗಳಲ್ಲಿದ್ದಾರೆ. ಭಾರತದ 2-3 ಬಿಲಿಯನೇರ್‌ಗಳು ಕೌರವರ ಜೊತೆ ನಿಂತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ಸಂಬಂ ಧ ಕಳೆದ ಜನವರಿ 11 ರಂದು ಕಮಲ್ ಭಡೋರಿಯಾ ಅವರು ರಾಹು್ಲ ಗಾಂಧಿಯವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರೂ ಅವರು ಉತ್ತರಿಸಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರ ಮೇಲೆ ದೂರು ದಾಖಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

ರಾಹುಲ್‌ ಗಾಂಧಿಗೆ ಲಲಿತ್ ಮೋದಿ ಎಚ್ಚರಿಕೆ

ಮೋದಿ ಉಪನಾಮ ಪ್ರಕರಣ ಸಂಬಂದ, ಇದೇ ಮಾರ್ಚ್ 23 ರಂದು ಸೂರತ್‌ನ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಗಾಂಧಿಯನ್ನು ದೋಷಿ ಎಂದು ಘೋಷಿಸಿತ್ತು. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದಾಗಿ ಒಂದು ದಿನದ ನಂತರ ಅವರನ್ನು ಸಂಸತ್ತಿನ ಸದಸ್ಯತ್ವ ಸ್ಥಾನದಿಂದ ಸಚಿವಾಲಯವ ಅನರ್ಹ ಮಾಡಿ ಅಧಿಸೂಚನೆ ಹೊರಡಿಸಿತ್ತು.

ಅಷ್ಟೇ ಅಲ್ಲದೇ ಲಂಡನ್ ನಲ್ಲಿರುವ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ಸಹ ರಾಹುಲ್ ಗಾಂಧಿ ವಿರುದ್ಧ ಕೆಂಡ ಕಾರಿದ್ದಾರೆ. 'ಮೋದಿ' ಉಪನಾಮ ವಿವಾದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿ ಲಲಿತ್ ಮೋದಿಯವರು ರಾಹುಲ್ ಗಾಂಧಿಯವರಿಗೆ ಎಚ್ಚರಿಕೆ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+