ಕಲ್ಲಿದ್ದಲು ಕಳ್ಳಸಾಗಣೆ ಹಗರಣ: ಕೋಲ್ಕತ್ತಾದಲ್ಲಿ ಇಡಿ ದಾಳಿ- ಉದ್ಯಮಿ ನಿವಾಸದಿಂದ ಅಪಾರ ನಗದು ವಶ!
ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದಲ್ಲಿ ಇಡಿ ದಾಳಿ ವೇಳೆ ಉದ್ಯಮಿಯ ನಿವಾಸದಿಂದ ಅಪಾರ ನಗದು ವಶಪಡಿಸಿಕೊಳ್ಳಳಾಗಿದೆ.
ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಉದ್ಯಮಿಯೊಬ್ಬರ ನಿವಾಸದಿಂದ ಜಾರಿ ನಿರ್ದೇಶನಾಲಯ (ಇಡಿ) ಭಾರಿ ಮೊತ್ತದ ನಗದನ್ನು ವಶಪಡಿಸಿಕೊಂಡಿದೆ. ಆರಂಭಿಕ ಮಾಹಿತಿಗಳ ಪ್ರಕಾರ, ಹಗರಣದ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು.

ಕೋಲ್ಕತ್ತಾ ಮೂಲದ ಉದ್ಯಮಿಯ ನಿವಾಸದ ಮೇಲೆ ಬುಧವಾರ ಇಡಿ ದಾಳಿ ನಡೆಸಿದ್ದು, ಸುದೀರ್ಘ ವಿಚಾರಣೆಯ ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯನ್ನು ಮಂಜಿತ್ ಸಿಂಗ್ ಜಿಟ್ಟಾ ಎಂದು ಗುರುತಿಸಲಾಗಿದ್ದು, ಈತ ಕೋಲ್ಕತ್ತಾದ ಖ್ಯಾತ ಉದ್ಯಮಿ ಎಂದು ತಿಳಿದು ಬಂದಿದೆ. ಅವರು ಪಶ್ಚಿಮ ಬಂಗಾಳದ ಹಲವಾರು ಜನಪ್ರಿಯ ಧಾಬಾಗಳೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ.












Click it and Unblock the Notifications