ಛತ್ತೀಸ್ ಗಢ ದುರಂತ, ದಿಗ್ವಿಜಯ್ ಸಿಂಗ್ ದಿಗ್ಭ್ರಮೆ
ಬಿಲಾಸ್ ಪುರ(ಛತ್ತೀಸ್ ಗಢ), ನ.11: ಛತ್ತೀಸ್ ಗಢ ಸರ್ಕಾರ ಆಯೋಜಿಸಿದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಎಂಟು ಜನ ಮಹಿಳೆಯರು ಮೃತಪಟ್ಟಿದ್ದು, 24ಕ್ಕೂ ಅಧಿಕ ಮಂದಿ ಜೀವನ್ಮರಣ ಹೋರಾಟ ನಡೆಸಿದ್ದಾರೆ, ಕೂಡಲೇ ಆರೋಗ್ಯ ಸಚಿವ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದಾರೆ.
ಆರೋಗ್ಯ ಸಚಿವ ಅಮರ್ ಅಗರವಾಲ್ ಅವರ ಸ್ವಕ್ಷೇತ್ರದಲ್ಲೇ ಶನಿವಾರ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತು. ಮೂಲಗಳ ಪ್ರಕಾರ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆಯರು ಸೋಮವಾರದ ವೇಳೆಗೆ ಜ್ವರದಿಂದ ನರಳಲು ಪ್ರಾರಂಭಿಸಿದರು. ಮಂಗಳವಾರ ಬೆಳಗ್ಗೆ 8 ಜನ ಸಾವನ್ನಪ್ಪಿದ್ದಾರೆ. 24ಕ್ಕೂ ಅಧಿಕ ಮಂದಿ ದೇಹಸ್ಥಿತಿ ವಿಷಮವಾಗಿದೆ.

ಆರೋಗ್ಯ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದಿಗ್ವಿಜಯ್ ಸಿಂಗ್ ಟೀಕಿಸಿದ್ದಾರೆ. ಸರ್ಕಾರಿ ನಿಯಮಗಳ ಪ್ರಕಾರ ಸಂತಾನಹರಣ ಚಿಕಿತ್ಸೆಗೆ ಒಳಪಡುವವರಿಗೆ 1,400 ರು ಹಾಗೂ ಮಹಿಳೆಯರನ್ನು ಕರೆ ತರುವವರಿಗೆ 200 ರು ಮೊತ್ತ ಸಿಗಲಿದೆ.
8 people die in a Sterilisation Camp in Chattisgarh. Govt must take a stern action against them. Can't imagine how could this happen ?
— digvijaya singh (@digvijaya_28) November 11, 2014 ಆದರೆ, ದಿಗ್ವಿಜಯ್ ಸಿಂಗ್ ಅವರ ಆರೋಪವನ್ನು ಅಲ್ಲಗೆಳೆದಿರುವ ರಮಣ್ ಸಿಂಗ್ ಅವರ ಬಿಜೆಪಿ ಸರ್ಕಾರ, ಈಗಾಗಲೇ ಘಟನೆ ಬಗ್ಗೆ ಮೂವರು ತಜ್ಞರಿರುವ ಸಮಿತಿ ರಚಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ 2 ಲಕ್ಷ ರು ಪರಿಹಾರ ಧನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರುರೂ ಪರಿಹಾರ ನೀಡಲಾಗುತ್ತಿದೆ ಎಂದು ಘೋಷಿಸಿದೆ.
And that too in Health Minister's Constituency ! He must resign.
— digvijaya singh (@digvijaya_28) November 11, 2014 











Click it and Unblock the Notifications