Budget 2023: ಬಜೆಟ್ ಮಂಡನೆಗೆ ಕೆಂಪು ಬಣ್ಣದ ಸೀರೆಯುಟ್ಟು ಬಂದ ನಿರ್ಮಲಾ ಸೀತಾರಾಮನ್, ಕಾರಣ ಇಲ್ಲಿದೆ
2023 ರ ಕೇಂದ್ರ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಸೀರೆಯನ್ನು ಧರಿಸಿದ್ದು, ಇದಕ್ಕೂ ಇದೆ ಕಾರಣ. ಮುಂದೆ ಓದಿ.
ನವದೆಹಲಿ, ಫೆಬ್ರವರಿ. 01: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಬಾರಿ ಐದನೇ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ಬಾರಿಯು ತಾವ ಬಜೆಟ್ ಮಂಡನೆಗೆ ಬರುವಾಗ ಕೈಮಗ್ಗದ ಸೀರೆಗಳಲ್ಲಿ ಕಂಗೊಳಿಸುವ ಅವರು ಈ ಬಾರಿ ಕೆಂಪು ಬಣ್ಣದ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬಜೆಟ್ ದಿನದಂದು ತಮ್ಮ 5ನೇ ಬಜೆಟ್ ಮಂಡನೆಗೆ ಕಪ್ಪು ಅಂಚಿರುವ, ಚಿನ್ನದ ಬಣ್ಣದ ಎಳೆಗಳಿರುವ ಗಾಢ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುಂದರವಾದ ಸೀರೆಯಲ್ಲಿ ನಕ್ಷತ್ರದಂತಹ ಪುಟ್ಟ ಪುಟ್ಟ ವಿನ್ಯಾಸಗಳು ಇದ್ದು, ಸೀರೆಗೆ ಮತ್ತಷ್ಟು ಮೆರುಗು ನೀಡಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೈಮಗ್ಗ ಸೀರೆಯ ಮೇಲಿನ ಪ್ರೀತಿ ಹೊಸದೇನಲ್ಲ, ಆದರೆ ಬಜೆಟ್ ದಿನದಂದು ಅವರ ಉಡುಗೆಯ ಆಯ್ಕೆಯು ಯಾವಾಗಲೂ ಆಸಕ್ತಿಯ ವಿಷಯವಾಗಿರುತ್ತದೆ. ಈ ದಿನ ಅವರು ಆಯ್ಕೆ ಮಾಡುವ ಬಟ್ಟೆಯ ಬಣ್ಣದಿಂದ ಬಜೆಟ್‌ನ ಒಟ್ಟಾರೆ ಮನಸ್ಥಿತಿಯ ಬಗ್ಗೆ ಯಾವುದಾದರೂ ಸುಳಿವು ಇರಬಹುದೆ ಎಂದು ಹುಡುಕಲಾಗುತ್ತದೆ.

ಸಾಮಾನ್ಯವಾಗಿ, ಹಣಕಾಸು ಸಚಿವರು ಬಜೆಟ್ ದಿನದಂದು ಗಾಢ ಬಣ್ಣದ ಬಟ್ಟೆಗಳಿಗೆ ಒತ್ತು ನೀಡುತ್ತಾರೆ. ಕಳೆದ ವರ್ಷ, ಅವರು ಬಿಳಿಯ ಬಣ್ಣದ ಬಾರ್ಡರ್ ಇದ್ದ ಮೆರೂನ್ ಕೈಮಗ್ಗದ ಸೀರೆಯನ್ನು ಧರಿಸಿದ್ದರು.
2021 ರಲ್ಲಿ, ನಿರ್ಮಲಾ ಸೀತಾರಾಮನ್ ಕೆಂಪು ಮತ್ತು ಬಿಳಿ ಬಣ್ಣದ ರೇಷ್ಮೆ ಪೊಚಂಪಲ್ಲಿ ಸೀರೆ ಧರಿಸಿದ್ದರು. 2020 ರಲ್ಲಿ, ಬಜೆಟ್ ದಿನದ ಉಡುಪು ನೀಲಿ ಬಣ್ಣದ ಅಂಚು ಹೊಂದಿರುವ ಹಳದಿ ರೇಷ್ಮೆ ಸೀರೆಯಾಗಿತ್ತು. ಹಳದಿ ಬಣ್ಣವನ್ನು ಸಮೃದ್ಧಿ ಎಂದು ಹೇಳಲಾಗುತ್ತದೆ.
ನಿರ್ಮಲಾ ಸೀತಾರಾಮನ್ ಅವರ 2019 ರ ಚೊಚ್ಚಲ ಬಜೆಟ್ ಮಂಡನೆಗೆ ಗುಲಾಬಿ ಬಣ್ಣದ ಗೋಲ್ಡನ್ ಬಾರ್ಡರ್ ಇರುವ ಸೀರೆಯನ್ನು ಧರಿಸಿದ್ದರು.

ಬುಧವಾರ ಬಜೆಟ್ 2023 ಮಂಡನೆಗೆ ಮುಂಚಿತವಾಗಿ, ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ. ಬಳಿಕ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಕೇಂದ್ರ ಸಂಪುಟ ಸಭೆಯ ನಂತರ ಸಚಿವರು 2023ರ ಬಜೆಟ್ ಅನ್ನು ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
ಈ ವರ್ಷದ ಬಜೆಟ್ 2024 ರ ಸಂಸತ್ತಿನ ಚುನಾವಣೆಯ ಮೊದಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೊನೆಯ ಪೂರ್ಣ ಬಜೆಟ್ ಆಗಿದ್ದು ಮಹತ್ವ ಪಡೆದುಕೊಂಡಿದೆ.












Click it and Unblock the Notifications