BSNL: ಗ್ರಾಹಕಸ್ನೇಹಿ 336 ದಿನಗಳ ವಿಶೇಷ ಪ್ಲಾನ್: ರಾಷ್ಟ್ರದ ಹೆಮ್ಮೆ ಗೌರವಿಸುತ್ತಾ ರಿಚಾರ್ಜ್ ಮಾಡಿಕೊಳ್ಳಿ...
BSNL Mobile Recharge News: ಭಾರತದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೊಸ ಟವರ್ ನಿರ್ಮಿಸುವ ಮೂಲಕ ಸುವ್ಯವಸ್ಥಿತ ಸೇವೆ ನೀಡಲು ಮುಂದಾಗಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹೊಸ ಹೊಸ ರಿಚಾರ್ಜ್ ಯೋಜನೆ ಪರಿಚಯಿಸುತ್ತಲೇ ಬಂದಿದೆ. ಇದೀಗ ಕೈಗೆಟುಕುವ ಬೆಲೆಗೆ 336 ದಿನಗಳ ಮೊಬೈಲ್ ರಿಚಾರ್ಜ್ ಯೋಜನೆ ನೀಡಿದೆ. ಪ್ಲಾನ್ ಅನ್ನು ನಿಗದಿತ ವೇದಿಕೆಗಳ ಮೂಲಕ ಮಾತ್ರವೇ ಪಡೆಯಬಹುದಾಗಿದೆ. ಜೂನ್ 30ರವರೆಗೆ ಮಾತ್ರ ಈ ಪ್ಲಾನ್ ಖರೀದಿಗೆ ಅವಕಾಶ ನೀಡಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್ ಈ ₹1499 ರೂ. ಕೊಟ್ಟು ಖರೀದಿಸುವ ಪ್ಲಾನ್‌ನ ಹಣದಲ್ಲಿ ಭಾರತೀಯ ಸಶಸ್ತ್ರ ಪಡೆಗಳಿಗೆ ಶೇಕಡಾ 5ರಷ್ಟು ಕೊಡುಗೆಯಾಗಿ ನೀಡಲಿದೆ. 2.5ರಷ್ಟು ಹಣದಲ್ಲಿ ನಿಮಗೆ ರಿಚಾರ್ಜ್ ರೂಪದಲ್ಲಿ ಮರಳಿಸಲು ಮುಂದಾಗಿದೆ. ಅಂದರೆ ನೀವು ಸಶಸ್ತ್ರ ಪಡೆಗಳ ಸೇವೆ ಸ್ಮರಿಸುತ್ತಾ ಅವರಿಗಾಗಿ ಈ ರಿಚಾರ್ಜ್ ಪ್ಲಾನ್ ಮಾಡಿಕೊಳ್ಳುವಂತೆ ತಿಳಿಸಿದೆ. ಇದಕ್ಕಾಗಿ ಜೂನ್ 30ರವರೆಗೆ ಅವಕಾಶ ನೀಡಿದೆ.

BSNL ರಿಚಾರ್ಜ್ ಪ್ಲಾನ್ ಅನ್ನು ಗ್ರಾಹಕರು ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ (https://bsnl.co.in/mobile/recharge) ಅಥವಾ ಬಿಎಸ್‌ಎನ್‌ಎಲ್ ಆಪ್ https://selfcare.bsnl.co.in/home.xhtml ಮೂಲಕ ನೀವು ಈ ನೂತನ ರಿಚಾರ್ಜ್ ಪ್ಲಾನ್ ಪ್ರಯೋಜನೆ ಪಡೆದುಕೊಳ್ಳಬಹುದೆಂದು ತಿಳಿಸಿದೆ. ಹಾಗಾದ್ರೆ ಈ ರಿಚಾರ್ಜ್ ಪ್ಲಾನ್ ಏನೆಲ್ಲ ವಿಶೇಷತೆ ಹೊಂದಿದೆ. ವ್ಯಾಲಿಟಿಡಿ ವಿವರ ಇಲ್ಲಿದೆ.
ರಿಚಾರ್ಜ್ ಯೋಜನೆಯ ಪ್ರಯೋಜನಗಳು
ನೀವು BSNL 1499 ರೂಪಾಯಿಯ ಪ್ಲಾನ್ ಖರೀದಿಸಿದರೆ ನಿಮಗೆ 336 ದಿನಗಳ ಅವಧಿಗೆ ಅಂದರೆ ಹನ್ನೊಂದು ತಿಂಗಳ ವ್ಯಾಲಿಡಿಟಿಯ ಯೋಜನೆ ಇದಾಗಿದೆ. ಇದರಲ್ಲಿ ನೀವು ಅನಿಯಮಿತ ಕರೆಗಳ ಸೌಲಭ್ಯ ಪಡೆಯುತ್ತಿರಿ ಮತ್ತು 24 ಜಿಬಿ 4 ಜಿ ಇಂಟರ್‌ನೆಟ್ ಡೇಟಾ ನಿಮ್ಮದಾಗುತ್ತದೆ. ಈ ಯೋಜನೆ ಪಡೆಯಲು ಗಡುವು ಇದೆ. ಜೂನ್ 30ರಂದು ಕೊನೆ ದಿನವಿದ್ದು, ಅಷ್ಟರೊಳಗಾಗಿ ಈ ನೀವು ಈ ಕೈಗೆಟುಕುವ ಯೋಜನೆ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ.
ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ
ಬಿಎಸ್‌ಎನ್‌ಎಲ್ ಸಂಸ್ಥೆ 5 ಟವರ್‌ಗಳಿಗೆ ಅಪ್ಡೇಟ್ ಆಗಲು ಹೆಚ್ಚುವರಿಯಾಗಿ ದೇಶದಲ್ಲಿ ಒಂದು ಲಕ್ಷ ಟವರ್ ನಿರ್ಮಾಣಕ್ಕೆ ಅನುಮೋದನೆ ಪಡೆಯಲಿದೆ. ಆದರೆ ಹಾಲಿ ಇರುವ 4 ಜಿ ನೆಟ್‌ವರ್ಕ್ ಸಮಸ್ಯೆ ಸಾಕಷ್ಟು ಕಡೆಗಳಲ್ಲಿ ಎದುರಾಗುತ್ತಿದೆ. ಕರೆ ಮಾಡಿದಾಗ ಸಮಸ್ಯೆ, ತಡವಾಗಿ ಕಾಲ್ ಕನೆಕ್ಟ್ ಆಗುವುದು ಹಾಗೂ ಇತರ ಸಮಸ್ಯೆಗಳನ್ನು ಗ್ರಾಹಕರು ಎದರಿಸುತ್ತಿದ್ದಾರೆ. ಗ್ರಾಹಕ ಸ್ನೇಹಿ ರಿಚಾರ್ಜ್ ಯೋಜನೆ ಘೋಷಿಸುತ್ತಿರುವ ಬಿಎಸ್‌ಎನ್‌ಎಲ್ ಶೀಘ್ರವೇ ಎಲ್ಲ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದೆ.












Click it and Unblock the Notifications