Viral Video: ಮಕ್ಕಳ ಮೇಲೆ ಬೀದಿ ನಾಯಿ ದಾಳಿ: ಜೆರ್ಮನ್ ಶೆಪರ್ಡ್ ನಾಯಿ ಮಾಡಿದ್ದೇನು?
ನಿಯತ್ತಿಗೆ ಇನ್ನೊಂದು ಹೆಸರೇ ನಾಯಿಗಳು ಎಂದರೆ ತಪ್ಪಾಗಲಾರದು. ಬಹುತೇಕ ಮಂದಿಗೆ ಇಷ್ಟದ ಸಾಕು ಪ್ರಾಣಿಗಳಲ್ಲಿ ನಾಯಿಗೆ ಮೊದಲ ಸ್ಥಾನ ಸಿಗುತ್ತದೆ. ಇಂತಹ ನಾಯಿಗಳು ಸೂಕ್ಷ್ಮ ಭಾವನೆ ಹೊಂದಿರುತ್ತವೆ. ಸಾಕಿದ ಮಾಲೀಕನಿಗ ತೊಂದರೆ ಆದರೆ ಜೀವ ಪಣಕ್ಕಿಟ್ಟು ಹೋರಾಡುತ್ತವೆ. ಇಂಥದ್ದೆ ಒಂದು ಘಟನೆ ಉತ್ತರಾಖಂಡನ ರಿಷಿಕೇಶದಲ್ಲಿ ನಡೆದಿದೆ. ಮನೆಯ ಮಕ್ಕಳನ್ನು ಕಾಪಾಡಿದ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಗುಂಪಿನತ್ತ ದಾಳಿಗೆ ಬೀದಿ ನಾಯಿ ಮುಂದಾಗುತ್ತದೆ. ಈ ವೇಳೆ ಅಲ್ಲೇ ಕೌಂಪೌಂಡ್ ಪಕ್ಕ ಇದ್ದ ಧೈರ್ಯಶಾಲಿ ಜರ್ಮನ್ ಶೆಫರ್ಡ್ ಸಾಕು ನಾಯಿ ಕೂಡಲೇ ಜಿಗಿದು ಮಕ್ಕಳ ರಕ್ಷಣೆಗೆ ಧಾವಿಸುತ್ತದೆ. ವಸತಿ ಪ್ರದೇಶಗಳಲ್ಲಿನ ಸಿಸಿ ಟಿವಿ ವಿಡಿಯೋ ಇದಾಗಿದೆ. ನಾಯಿಯು ಬಾಲ್ಕನಿಯಲ್ಲಿ ಶಾಂತವಾಗಿ ಕುಳಿತಿದ್ದು, ಹಾಗೂ ಕೆಳಗೆ ಬಿದಿಯಲ್ಲಿ ಮಕ್ಕಳು ಆಟವಾಡುವ ದೃಶ್ಯ ಹಾಗೂ ಮಕ್ಕಳ ಗುಂಪು ಓಡಿಹೋಗುವ ದೃಶ್ಯಗಳೆಲ್ಲವು ವಿಡಿಯೋದಲ್ಲಿ ಕಾಣಿಸುತ್ತವೆ.

ಬೀದಿ ನಾಯಿ ಮಕ್ಕಳ ಮೇಲೆ ದಾಳಿಗೆ ಓಡಿ ಬರುತ್ತಿದ್ದಂತೆ ಕೌಂಪೌಂಡ್ ಜಿಗಿದು ಮಕ್ಕಳನ್ನು ರಕ್ಷಿಸಲು ಸೂಪರ್ ಹೀರೋನಂತೆ ಜೆರ್ಮನ್ ಶೆಪರ್ಡ್ ನಾಯಿ ಹಾರಿದ್ದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಕ್ಸ್‌ನಲ್ಲಿ @gharkekalesh ಅವರು ಹಂಚಿಕೊಂಡಿದ್ದಾರೆ. ಅದು ವೈರಲ್ ಆಗಿದೆ.
ನಾಯಿಯ ಈ ವೈರಲ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆದ್ದಿದೆ. ಅನೇಕ ಮಂದಿ ನಾಯಿಯ ತ್ವರಿತ ಸಾಹಸ ವರ್ತನೆಯನ್ನು ಮೆಚ್ಚಿದ್ದಾರೆ. ಪ್ರೀತಿಯಿಂದ ನಾಯಿಯನ್ನು "ಡಾಗೇಶ್ ಭಾಯ್" ಎಂದು ಕರೆದಿದ್ದಾರೆ. ಡಾಗೇಶ್ ನೀವು ಚೆನ್ನಾಗಿ ಮಕ್ಕಳನ್ನು ರಕ್ಷಿಸಿದ್ಧೀರಿ. ಚೆನ್ನಾಗಿ ಮಾಡಿದ್ದೀರಿ ಡಾಗೇಶ್ ಭಾಯ್ ಎಂದು ಬರೆದಿದ್ದಾರೆ. ಕಾಂಪೌಂಡ್ ಜಿಗಿದಿದ್ದು ನೋಡಿದರೆ ತರಬೇತಿ ಪಡೆದ ನಾಯಿಯಂತೆ ಕಾಣುತ್ತದೆ. ಅದು ವೃದ್ಧ ನಾಯಿಯಾಗಿದ್ದರೆ ನೋವುಂಟಾಗುತ್ತಿತ್ತು. ಅದೇನೆ ಇರಲಿ ಅದರ ನಡವಳಿಕೆ ಉತ್ತಮವಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
In Rishikesh, A dog jumped like a superhero to save children from another dog.
— Ghar Ke Kalesh (@gharkekalesh) August 9, 2025
pic.twitter.com/IwN1FUZgrN
ನಾನು ನಾಯಿಗಳನ್ನು ಪ್ರೀತಿಸುತ್ತೇನೆ, ಆದರೆ ಇಲ್ಲಿ ಪ್ರಾಮಾಣಿಕವಾಗಿರಲಿ. ನಾಯಿ ಹಾರಿದ್ದು ಮಕ್ಕಳನ್ನು ಉಳಿಸಲು ಅಲ್ಲ, ಬದಲಾಗಿ ಇನ್ನೊಂದು ನಾಯಿಯನ್ನು ಓಡಿಸಲು ಎಂದು ಕೆಲವರು ಹೇಳಿದ್ದಾರೆ. ಈ ಮೂಲಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಯಿ ಉದ್ದೇಶಪೂರ್ವಕವಾಗಿ ಮಕ್ಕಳನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ದೆಹಲಿ ನಾಯಿಗಳ ಸ್ಥಳಾಂತರ: ಮಿಶ್ರ ಪ್ರತಿಕ್ರಿಯೆ
ಭಾರತದಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ದಾಳಿಯ ಹೆಚ್ಚಳವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಕಠಿಣ ಕ್ರಮಕ್ಕೆ ಮುಂದಾಗಿದೆ. ಒಂದು ವಾರದೊಳಗೆ ದೆಹಲಿ ಬೀದಿ ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ಮಾಡುವುದು ಮತ್ತು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಿದೆ. ಇದು ಹೇಗೆ ಮಾಡಬೇಕು ಎಂಬುದನ್ನು ಅಧಿಕಾರಿಗಳ ವಿವೇಚನೆಗೆ ಇಟ್ಟಿದೆ. ಈ ಮೂಲಕ ಮಕ್ಕಳ ಮೇಲಿನ ದಾಳಿ, ಶಿಶುಗಳು ಮತ್ತು ಚಿಕ್ಕ ಮಕ್ಕಳನ್ನು ರೇಬೀಸ್‌ನಿಂದ ರಕ್ಷಿಸುವ ಕ್ರಮವೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಆದೇಶ ಹೊರಬಿದ್ದ ಬಳಿಕ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಾಯಿಗಳ ಸ್ಥಳಾಂತರ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಕೆಲವರು ಸಾರ್ವಜನಿಕರ, ಮಕ್ಕಳ ರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸಿದ್ದಾರೆ. ಪ್ರಾಣಿಪ್ರಿಯತು ಈ ಆದೇಶ ಟೀಕಿಸಿದ್ದಾರೆ. ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳಬಹುದೆಂದು ತಿಳಿಸಿದ್ದಾರೆ.












Click it and Unblock the Notifications