ಅಹ್ಮದ್ ಪಟೇಲ್ ಗೆಲುವು ಪ್ರಶ್ನಿಸಿ ನ್ಯಾಯಲಯಕ್ಕೆ ಬಿಜೆಪಿ ದೂರು
ನವದೆಹಲಿ, ಆಗಸ್ಟ್ 10: ಗುಜರಾತ್ ರಾಜಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದನ್ನು ಪ್ರಶ್ನಿಸಿ ಬಿಜೆಪಿ ಕೋರ್ಟ್ ಮೊರೆ ಹೋಗಲಿದೆ. ಮಂಗಳವಾರ ನಡೆದಿದ್ದ ಚುನಾವಣೆಯಲ್ಲಿ ಚುಣಾವಣಾ ಆಯೋಗ ಇಬ್ಬರು ಕಾಂಗ್ರೆಸ್ ಶಾಸಕರ ಮತವನ್ನು ರದ್ದುಗೊಳಿಸಿದ್ದರಿಂದ ಅಹ್ಮದ್ ಪಟೇಲ್ ವಿಜಯಿಯಾಗಿದ್ದರು.
ಚುನಾವಣಾ ಆಯೋಗದ ಕ್ರಮ ಸರಿ ಇಲ್ಲ ಎಂದಿರುವ ಬಿಜೆಪಿ ಇದನ್ನು ಕೋರ್ಟ್ ನಲ್ಲಿ ಪ್ರಶ್ನೆ ಮಾಡುವುದಾಗಿ ಹೇಳಿದೆ. ಆರಂಭದಲ್ಲಿ ಗುಜರಾತ್ ಹೈಕೋರ್ಟ್ ಮೊರೆ ಹೋಗಲು ಪಕ್ಷ ನಿರ್ಧರಿಸಿದೆ. ಇಲ್ಲಿ ವ್ಯತಿರಿಕ್ತವಾದ ತೀರ್ಪು ಬಂದಲ್ಲಿ ಮುಂದೆ ಸುಪ್ರಿಂ ಕೋರ್ಟ್ ಮೊರೆ ಹೋಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಚಿತ್ರಗಳು : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಪ್ರವಾಸ

ಮಂಗಳವಾರ ಗುಜರಾತ್ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ತಲಾ 46 ಮತಗಳನ್ನು ಪಡೆದು ಹಾಗೂ ಕಾಂಗ್ರೆಸ್ ನ ಅಹ್ಮದ್ ಪಟೇಲ್ 44 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. 38 ಮತಗಳನ್ನು ಪಡೆದ ಬಿಜೆಪಿಯ ಬಲ್ವಂತ್ ಸಿನ್ಹಾ ರಜಪೂತ್ ಸೋಲೊಪ್ಪಿಕೊಂಡಿದ್ದರು.
ಒಟ್ಟು 8 ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದರಲ್ಲಿ ಇಬ್ಬರು ಶಾಸಕರುತಮ್ಮ ಮತವನ್ನು ಬಿಜೆಪಿಯವರಿಗೆ ತೋರಿಸುವ ಮೂಲಕ ತಮ್ಮ ಆಯ್ಕೆಯನ್ನು ಬಹರಂಗಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೊಗಿತ್ತು. ಕೊನೆಗೆ ಈ ಚುನಾವಣಾ ಆಯೋಗ ಈ ಎರಡು ಮತಗಳನ್ನು ರದ್ದುಗೊಳಿಸಿದ್ದರಿಂದ ಅಹ್ಮದ್ ಪಟೇಲ್ ಜಯಶಾಲಿಯಾಗಿದ್ದರು.












Click it and Unblock the Notifications