ಮೋದಿ ಭಕ್ತರಿಂದ ಮೀನು, ಲಡ್ಡು, ಮಾವು ಹಂಚಿಕೆ
ಬೆಂಗಳೂರು, ಮೇ.26: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಕಾರ್ಯಕರ್ತರು ಸಿಹಿ ತಿಂಡಿಗಳನ್ನು ತಯಾರಿಸಿದ್ದಾರೆ. ಮೋದಿ ಅವರ ಪೂರ್ವಿಕರ ಊರಿನಲ್ಲಿ ಹಬ್ಬದ ವಾತಾವರಣ ಕಂಡು ಬಂದಿದೆ.
ಮೋದಿ ಅವರ ಊರು ವಾದ್ನಗರದಲ್ಲಿ ಮಣ್ಣಿನ ಮಗ ಮೋದಿ ಪ್ರಧಾನಿಯಾಗುವ ಸಂಭ್ರಮವನ್ನು ಎಲ್ಲರೂ ಆಚರಿಸುತ್ತಿದ್ದಾರೆ. ಸುಮಾರು 10 ಸಾವಿರ ಜನರಿಗೆ ಊಟೋಪಚಾರಗಳು ನಡೆದಿವೆ. ಮೋತಿಚೂರ್ ಲಡ್ಡು, ಮೋದಿ ಪೇಡಾ, ಮೊದಿ ಫಾಫ್ಡಾ, ಸಮೋಸಾ, ಮೋದಿ ಜಿಲೇಬಿ ಊಟದ ಮೆನುವಿನಲ್ಲಿದೆ. ಸುಮಾರು 125 ಕೆಜಿ ತೂಗುವ ಲಡ್ಡುವನ್ನು ಭಗವಾನ್ ಶಿವನಿಗೆ ಹಂಚಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತಿದೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಮುಖಂಡರು ದೇಶದ ಅನೇಕ ಕಡೆ ಇದೇ ರೀತಿ ವ್ಯವಸ್ಥೆ ಮಾಡಿದ್ದಾರೆ. ವಾರಣಾಸಿಯ ದಶಾಶ್ವಮೇಧ ಘಾಟ್ ನಲ್ಲಿ ಗಂಗಾಪೂಜೆ, ವಿಶೇಷ ಅರ್ಚನೆ ನಡೆಯುತ್ತಿದೆ. ದೇಶದ ಹಲವೆಡೆ ಮೋದಿ ಪ್ರಧಾನಿ ಸಮಾರಂಭ ಹಬ್ಬದ ವಾತಾವರಣ ಸೃಷ್ಟಿಸಿದೆ.

ಮಂಡ್ಯದಲ್ಲಿ ಬಿಜೆಪಿಯಿಂದ ಲಡ್ಡು ಹಂಚಿಕೆ
ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವ ಸಮಯದಲ್ಲಿ ಸಾರ್ವಜನಿಕರಿಗೆ ಹಂಚಲು ಬಿಜೆಪಿ ಮುಖಂಡರು 20 ಸಾವಿರ ಲಡ್ಡು ಸಿದ್ಧಪಡಿಸಿದ್ದಾರೆ. ಸಂಜೆ 5 ಗಂಟೆಗೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಪಟ್ಟಣದ ಮುಖ್ಯಬೀದಿಗಳಲ್ಲಿ ಸಾಗಿ, ಬಡಾವಣೆಗಳಲ್ಲಿ ಲಡ್ಡು ವಿತರಿಸಲಾಗುವುದು ಎಂದು ಉಮಾಶಂಕರ್, ಶ್ರೀಧರ್ ತಿಳಿಸಿದ್ದಾರೆ.
ಮಂಡ್ಯದ ಜೈನರ ಬೀದಿಯಲ್ಲಿರುವ ಹೋಟೆಲ್ ಶಂಕರ ವಿಲಾಸದಲ್ಲಿ ಸಾರ್ವಜನಿಕರಿಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.30ರವರೆಗೆ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಉಚಿತವಾಗಿ ಕೇಸರಿಬಾತ್ ಹಂಚಲಾಗುತ್ತಿದೆ. ಮಂಡ್ಯ ನಗರದ 17 ದೇವಾಲಯಗಳಲ್ಲಿ ವಿಶೇಷ ಪೂಜೆ ಸಹ ಏರ್ಪಡಿಸಲಾಗಿದೆ.

ಕಲಿಮುಲ್ಲಾ ಮಾವಿನ ರಾಜ ನಮೋ ಆಮ್
ಮಾವು ಬೆಳೆಗಾರ ಹಾಜಿ ಕಲಿಮುಲ್ಲಾ ಎಂಬಾತ ಮಾವಿನ ಹಣ್ಣಿಗೆ ನಮೋ ಆಮ್ ಎಂದು ಹೆಸರಿಟ್ಟು ಸುದ್ದಿ ಮಾಡಿದ್ದಾರೆ. ಕಲಿಮುಲ್ಲಾ ಮಾವಿನ ರಾಜ ಎಂದೇ ಇಲ್ಲಿ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಹಲವು ಗಣ್ಯ ವ್ಯಕ್ತಿಗಳಿಗೆ ಹೊಂದುವ ವಿಶಿಷ್ಟ ಹೈಬ್ರಿಡ್ ಮ್ಯಾಂಗೋ ತಳಿ ಸಂಶೋಧಿಸಿದ್ದ ಕಲಿಮುಲ್ಲಾ ನರೇಂದ್ರ ಮೋದಿಯ ಜನಪ್ರಿಯತೆಗೆ ತಕ್ಕಂತೆ ಒಂದು ಮಾವಿನ ತಳಿಯನ್ನ ಸಂಶೋಧಿಸಿ, ಅದಕ್ಕೆ ಮೋದಿಯ ಹೆಸರೇ ಇಟ್ಟಿಧ್ದಾರೆ.

ಚೆನ್ನೈನಲ್ಲಿ ನಮೋ ಫಿಶ್ ಸ್ಟಾಲ್
ಮೇ.26ರಂದು ನಮೋ ಟೀಸ್ಟಾಲ್ ನಂತೆ ನಮೋ ಮೀನು ಅಂಗಡಿಗಳನ್ನು ತೆರೆಯಲಾಗಿದ್ದು, ಒಂದು ಕೆಜಿ ಮೀನನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂದು ಎಸ್ ಸತೀಶ್ ಕುಮಾರ್ ಹೇಳಿದ್ದಾರೆ. ಶಂಕರ ಹಾಗೂ ಕೋಲಾ ಜಾತಿ ಮೀನುಗಳನ್ನು ನೀಡಲಾಗುತ್ತಿದೆ. ಸುಮಾರು 200 ಜನರಿಗೆ ಸಿಗಲಿದೆ ಎಂಬ ಸುದ್ದಿಯಿದೆ.

ವಾರಣಾಸಿಯಲ್ಲಿ ಗಂಗಾಪೂಜೆ
ಮೋದಿ ಊರಿನಲ್ಲಿ ಇಂದಿನ ಮೆನು: ಮೋತಿಚೂರ್ ಲಡ್ಡು, ಮೋದಿ ಪೇಡಾ, ಮೊದಿ ಫಾಫ್ಡಾ, ಸಮೋಸಾ, ಮೋದಿ ಜಿಲೇಬಿ ಊಟದ ಮೆನುವಿನಲ್ಲಿದೆ. ಸುಮಾರು 125 ಕೆಜಿ ತೂಗುವ ಲಡ್ಡುವನ್ನು ಭಗವಾನ್ ಶಿವನಿಗೆ ಹಂಚಿ ಪ್ರಸಾದ ರೂಪದಲ್ಲಿ ಜನರಿಗೆ ನೀಡಲಾಗುತ್ತಿದೆ.












Click it and Unblock the Notifications