Bihar Election: ಬಿಹಾರ ವಿಧಾನಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ? ಹಿಂಗಾದ್ರೆ ಮುಂದೆ ಹೆಂಗೆ?
ಇಡೀ ದೇಶ ಬಿಹಾರ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಾ ಕುಳಿತಿದೆ. ಬಿಹಾರದಲ್ಲಿ ಇಂದು ಅಂತಿಮ ಹಂತದಲ್ಲಿ ಮತದಾನ ನಡೆಯುತ್ತಿದ್ದು ಇನ್ನೇನು ಫಲಿತಾಂಶವು ಹೊರ ಬೀಳಲಿದೆ. ಹೀಗಾಗಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಒಕ್ಕೂಟಗಳ ಮಧ್ಯೆ ಭಾರಿ ದೊಡ್ಡ ಚರ್ಚೆ ಶುರು ಆಗಿದೆ. ಅದರಲ್ಲೂ ಹೇಗಾದರೂ ಮಾಡಿ ಈ ಬಾರಿ ಅಧಿಕಾರ ಹಿಡಿದೇ ತೀರಬೇಕು ಎಂದು ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಇಂಡಿಯಾ ಒಕ್ಕೂಟ ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಬಿಹಾರ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಈಗಾಗಲೇ 1ನೇ ಹಂತದಲ್ಲಿ ಮತದಾನ ಮುಗಿಸಿದ್ದ ಬಿಹಾರ ಮತದಾರರು, ಇದೀಗ 122 ಸ್ಥಾನಗಳಿಗೆ 2ನೇ ಹಂತದಲ್ಲಿ ವೋಟಿಂಗ್ ಮಾಡುತ್ತಿದ್ದಾರೆ. ಈ ಮೂಲಕ ಇದೀಗ ಬಿಹಾರ ವಿಧಾನಸಭೆ ಚುನಾವಣೆ ಅಂತ್ಯ ಆಗಲಿದೆ. 74 ವರ್ಷದ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಸತತವಾಗಿ ಅಧಿಕಾರವನ್ನು ನಡೆಸಿಕೊಂಡು ಬಂದಿದ್ದಾರೆ. ಹೀಗಿದ್ದಾಗ ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರ ಸಿಎಂ ಆಗುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ. ಇಂತಹ ಸಮಯದಲ್ಲೇ ಹೊಸದೊಂದು ಚರ್ಚೆ ಶುರುವಾಗಿದ್ದು, ಭಾರಿ ಕುತೂಹಲ ಮನೆಮಾಡಿದೆ.

ಬಿಹಾರದಲ್ಲಿ ಅತಂತ್ರ ಪರಿಸ್ಥಿತಿ?
ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗಲು ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಬಿಹಾರದಲ್ಲಿ ಕಟ್ಟೆಚ್ಚರ ವಹಿಸಿ ಮತದಾನ ನಡೆಸಲಾಗುತ್ತಿದೆ. ಇಂತಹ ಸಮಯದಲ್ಲೇ ಚರ್ಚೆಯೊಂದು ಶುರುವಾಗಿದ್ದು, 2025ರ ಫಲಿತಾಂಶ ಅತಂತ್ರವಾಗುತ್ತಾ? ಈ ಮೂಲಕ ಬಿಹಾರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಲಿದೆಯಾ? ಎಂಬ ಮಾತುಕತೆ ಜೋರಾಗಿದೆ. ಇಷ್ಟೆಲ್ಲದರ ನಡುವೆ ಇಂದು ಚುನಾವಣೋತ್ತರ ಫಲಿತಾಂಶ ಕೂಡ ಹೊರಬೀಳಲಿದೆ.
ಅಭ್ಯರ್ಥಿಗಳ ಭವಿಷ್ಯ ನಿರ್ಧಾರ...
ಒಟ್ನಲ್ಲಿ ಕಳೆದ 3-4 ತಿಂಗಳಿಂದ ಚುನಾವಣಾ ಪ್ರಚಾರ, ಆರೋಪ & ಪ್ರತ್ಯಾರೋಪ, ಮತದಾರರನ್ನ ಸೆಳೆಯುವ ತಂತ್ರಗಳೇ ಬಿಹಾರದಲ್ಲಿ ಸೌಂಡ್ ಮಾಡಿದ್ದವು. ಇಂದು ಅದಕ್ಕೆಲ್ಲಾ ತೆರೆ ಬೀಳಲಿದ್ದು, ಸಂಜೆ ನಂತರ ಬಿಹಾರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಹೊರ ಬೀಳಲಿದೆ. ಆದರೆ ಈಗಿರುವ ಏಕೈಕ ಪ್ರಶ್ನೆ, ಬಹುಮತದ ಸರ್ಕಾರ ಅಧಿಕಾರಕ್ಕೆ ಬರುತ್ತಾ? ಅಥವಾ ಬಿಹಾರ ವಿಧಾನಸಭೆ ಅತಂತ್ರ ಆಗುತ್ತಾ? ಎಂಬ ಚರ್ಚೆಯು ನಡೆಯುತ್ತಿದೆ. ಇದಕ್ಕೆಲ್ಲಾ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದ್ದು, ಇಂದು ಬಿಹಾರದ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಒಳಗೆ ಭದ್ರವಾಗಲಿದೆ.












Click it and Unblock the Notifications