ಪಶ್ಚಿಮ ಬಂಗಾಳ: ರಾಹುಲ್ ಗಾಂಧಿ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ
ಕಾಂಗ್ರೆಸ್ ಆಯೋಜಿಸಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯ್ಲಲಿ ಭದ್ರತಾ ಲೋಪ ನಡೆದಿದೆ. ಅಪರಿಚಿತ ದುಷ್ಕರ್ಮಿಗಳು ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಸದ ರಾಹುಲ್ ಗಾಂಧಿ ಅವರ ಕಾರಿನ ಗಾಜು ಒಡೆದಿರುವ ವಿಡಿಯೋ ವೈರಲ್ ಆಗಿದೆ. ಪಕ್ಷದ ನಾಯಕರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರಿನಿಂದ ಹೊರಬರುತ್ತಿದ್ದು, ವಾಹನದ ಹಿಂಬದಿಯ ಗಾಜು ಒಡೆದಿರುವುದು ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬುಧವಾರ ಬಿಹಾರದಿಂದ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ. ಯಾತ್ರೆಯ ಮೊದಲ ಹಂತವು ಸೋಮವಾರ ಪಶ್ಚಿಮ ಬಂಗಾಳದಲ್ಲಿ ಮುಕ್ತಾಯವಾಗಿತ್ತು. ಬುಧವಾರ ಬೆಳಗ್ಗೆ 11.15 ರ ಸುಮಾರಿಗೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದೇಬಿಪುರ, ರಟುವಾ ಮೂಲಕ ಯಾತ್ರೆಯು ಪಶ್ಚಿಮ ಬಂಗಾಳವನ್ನು ಮತ್ತೆ ಪ್ರವೇಶಿಸಿದೆ.
xमहंगाई, बेरोज़गारी और निजीकरण से परेशान बिहार के लोग आने वाली पीढ़ी के भविष्य के लिए चिंतित हैं।
— Bharat Jodo Nyay Yatra (@bharatjodo) January 31, 2024
नाउम्मीद जनता के अंदर भारत जोड़ो न्याय यात्रा ने उम्मीद की किरण जगाई है।#BharatJodoNyayYatra pic.twitter.com/dxhWEelkYk
ಧ್ವಜ ಹಸ್ತಾಂತರದ ನಂತರ, ಭಾರತ್ ಜೋಡೋ ನ್ಯಾಯ್ ಯಾತ್ರೆಯು ರತುವಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಸುಜಾಪುರದ ಕಡೆಗೆ ಸಾಗಲಿದೆ. ಅಲ್ಲಿ ರಾತ್ರಿ ವಿರಾಮಕ್ಕೂ ಮುನ್ನ ರಾಹುಲ್ ಗಾಂಧಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಯಾತ್ರೆಯು ಮರುದಿನ ಫೆಬ್ರವರಿ 1 ರಂದು ಮುರ್ಷಿದಾಬಾದ್‌ಗೆ ಪ್ರವೇಶಿಸಲಿದೆ.

ಯಾತ್ರೆಯು ಇದುವರೆಗೆ ಪಶ್ಚಿಮ ಬಂಗಾಳದ ಆರು ಜಿಲ್ಲೆಗಳಲ್ಲಿ 523 ಕಿ.ಮೀ ಕ್ರಮಿಸಿದೆ. ಇಲ್ಲಿಯವರೆಗೆ ಡಾರ್ಜಿಲಿಂಗ್, ಜಲ್ಪೈಗುರಿ, ಅಲಿಪುರ್ದೌರ್ ಮತ್ತು ಉತ್ತರ ದಿನಾಜ್‌ಪುರವನ್ನು ಕ್ರಮಿಸಿದೆ, ಮಾಲ್ಡಾ ಮತ್ತು ಮುರ್ಷಿದಾಬಾದ್‌ಗಳನ್ನು ಎರಡನೇ ಹಂತಕ್ಕೆ ನಿಗದಿಪಡಿಸಲಾಗಿದೆ.












Click it and Unblock the Notifications