2020ನೇ ಸಾಲಿನ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ
ಬೆಂಗಳೂರು, ಜನವರಿ 01: ಹೊಸ ವರ್ಷದ ಆರಂಭದಲ್ಲಿ ಸರ್ಕಾರಿ ರಜಾದಿನಗಳ ಪಟ್ಟಿಗಳ ಜೊತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ.
ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನವಿರಲಿದೆ. ಇದಲ್ಲದೆ, ಯಾವೆಲ್ಲ ದಿನಗಳಲ್ಲಿ ರಜಾ ಸಿಗಬಹುದು ಎಂಬುದನ್ನು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಕಟವಾಗಿರುವ ಪಟ್ಟಿಯಲ್ಲಿ ಕಾಣಬಹುದು.
ಇದಲ್ಲದೆ, ಕೇಂದ್ರ ಸರ್ಕಾರಿ ನೌಕರಿಗೆ 2020ರಲ್ಲಿ ಸಿಗಲಿರುವ ರಜಾ ದಿನಗಳ ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಸಾರ್ವತ್ರಿಕ ರಜಾ ದಿನ, ನಿರ್ಬಂಧಿತ ರಜಾ ದಿನಗಳನ್ನು ಇದರಲ್ಲಿ ನೀಡಲಾಗಿದೆ. ಕೆಲವು ರಜಾ ದಿನಗಳು ಕೆಲವು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿದೆ.

2020ನೇ ಸಾಲಿನ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ:
* ಜನವರಿ 01, 2020(ಬುಧವಾರ) ಹೊಸ ವರ್ಷದ ದಿನ
* ಜನವರಿ 02 (ಗುರುವಾರ) ಮನ್ನಂ ಜಯಂತಿ(ಕೇರಳ)/ ಗುರು ಗೋವಿಂದ್ ಸಿಂಗ್ ಜಯಂತಿ (ಹಲವು ರಾಜ್ಯ)
* ಜನವರಿ 11(ಶನಿವಾರ), ಮಿಷನರಿ ದಿನ(ಮಿಜೋರಾಂ)
* ಜನವರಿ 15 (ಬುಧವಾರ), ಮಕರ ಸಂಕ್ರಾಂತಿ (ದಕ್ಷಿಣ ರಾಜ್ಯಗಳಲ್ಲಿ)
* ಜನವರಿ 26 (ಭಾನುವಾರ) ಗಣರಾಜ್ಯ ದಿನಾಚರಣೆ.
* ಜನವರಿ 30 (ಗುರುವಾರ) ವಸಂತ ಪಂಚಮಿ
* ಫೆಬ್ರವರಿ 21 (ಶುಕ್ರವಾರ) ಮಹಾ ಶಿವರಾತ್ರಿ
* ಮಾರ್ಚ್ 10 (ಮಂಗಳವಾರ) ಹೋಳಿ
* ಮಾರ್ಚ್ 25 (ಬುಧವಾರ) ಯುಗಾದಿ
* ಏಪ್ರಿಲ್ 02 (ಗುರುವಾರ) ರಾಮ ನವಮಿ
* ಏಪ್ರಿಲ್ 6 (ಸೋಮವಾರ) ಮಹಾವೀರ ಜಯಂತಿ
* ಏಪ್ರಿಲ್ 10 (ಶುಕ್ರವಾರ) ಗುಡ್ ಫ್ರೈಡೇ
* ಏಪ್ರಿಲ್ 14 (ಮಂಗಳವಾರ) ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ
* ಮೇ 1(ಶುಕ್ರವಾರ) ಮೇ ದಿನ
* ಮೇ 7 (ಗುರುವಾರ) ಬುದ್ಧ ಪೂರ್ಣಿಮಾ
* ಜುಲೈ 31 (ಶುಕ್ರವಾರ) ಬಕ್ರೀದ್/ ಈದ್ ಅಲ್ ಅದಾ
* ಆಗಸ್ಟ್ 03 (ಸೋಮವಾರ) ರಕ್ಷಾ ಬಂಧನ್
* ಆಗಸ್ಟ್ 11 (ಮಂಗಳವಾರ) ಜನ್ಮಾಷ್ಟಮಿ
* ಆಗಸ್ಟ್ 30(ಭಾನುವಾರ) ಮೊಹರಂ.
* ಅಕ್ಟೋಬರ್ 02 (ಶುಕ್ರವಾರ) ಗಾಂಧಿ ಜಯಂತಿ
* ಅಕ್ಟೋಬರ್ 26 (ಸೋಮವಾರ) ವಿಜಯ ದಶಮಿ
* ಅಕ್ಟೋಬರ್ 30 (ಶುಕ್ರವಾರ) ಈದ್ ಇ ಮಿಲಾದ್
* ನವೆಂಬರ್ 14 (ಶನಿವಾರ) ದೀಪಾವಳಿ
* ನವೆಂಬರ್ 16 (ಸೋಮವಾರ) ಭಾಯ್ ಧೂಜ್
* ನವೆಂಬರ್ 30 (ಸೋಮವಾರ) ಗುರು ನಾನಕ್ ಜಯಂತಿ
* ಡಿಸೆಂಬರ್ 25 (ಶುಕ್ರವಾರ) ಕ್ರಿಸ್ಮಸ್
ಇದಲ್ಲದೆ, ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆರ್ ಬಿಐ ಪ್ರಕಟಿಸಿದೆ.












Click it and Unblock the Notifications