ವಿಡಿಯೋ; ಭೀಕರ ದುರಂತದ ಬಳಿಕ ಬಾಲಸೋರ್‌ನಲ್ಲಿ ಹಳಿ ದುರಸ್ತಿ

ನವದೆಹಲಿ, ಜೂನ್ 04: ಒಡಿಶಾ ರಾಜ್ಯದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತದಲ್ಲಿ 288 ಜನರು ಮೃತಪಟ್ಟಿದ್ದಾರೆ, 747 ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಮುಕ್ತಾಯಗೊಂಡಿದ್ದು, ಈಗ ಅವಶೇಷಗಳನ್ನು ತೆರವುಗೊಳಿಸಿ ರೈಲ್ವೆ ಹಳಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

ಶುಕ್ರವಾರ ಸಂಜೆ ಮೂರು ರೈಲುಗಳ ಹಳಿ ತಪ್ಪಿ ನಡೆದ ಭೀಕರ ಅಪಘಾತಕ್ಕೆ ಜನರು ಕಂಬನಿ ಮಿಡಿದಿದ್ದಾರೆ. ಈ ಅಪಘಾತದ ಬಳಿಕ ಸುಮಾರು 78 ರೈಲುಗಳ ಸಂಚಾರ ರದ್ದುಗೊಳಿಸಲಾಗಿತ್ತು. ಬೋಗಿಯಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

balasore-train-accident

ಮೂರು ರೈಲುಗಳ ಬೋಗಿ, ಇಂಜಿನ್ ಅನ್ನು ಹಳಿ ಮೇಲಿಂದ ತೆರವುಗೊಳಿಸಿ ರೈಲುಗಳ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸುವ ಕಾರ್ಯ ಭಾನುವಾರ ಬೆಳಗ್ಗೆ ಆರಂಭವಾಗಿದೆ. ಹಲವಾರು ಜೆಸಿಬಿ, ಕ್ರೇನ್‌ಗಳನ್ನು ಈ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. 20ಕ್ಕೂ ಅಧಿಕ ಬೋಗಿ, ಮೂರು ಇಂಜಿನ್ ಅನ್ನು ಹಳಿ ಮೇಲಿಂದ ತೆರವುಗೊಳಿಸಬೇಕಿದೆ.

ಎಕ್ಸ್‌ಪ್ರೆಸ್ ರೈಲುಗಳ ಅಪಘಾತದ ರಭಸಕ್ಕೆ ಬೋಗಿಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಒಂದರ ಮೇಲೆ ಒಂದು ಬಿದ್ದಿರುವ ಬೋಗಿಯನ್ನು ತೆರವುಗೊಳಿಸಿ, ಇಂಜಿನ್ ಕಾರ್ಯಕ್ಷಮತೆ ಪರಿಶೀಲಿಸಿ, ಅವುಗಳನ್ನು ಹಳಿಗಳ ಮೇಲಿಂದ ತೆರವುಗೊಳಿಸಬೇಕಿದೆ. ಬಳಿಕ ರೈಲ್ವೆ ಅಧಿಕಾರಿಗಳು ಹಳಿಗಳ ದುರಸ್ತಿ ಕಾರ್ಯ ಕೈಗೊಳ್ಳಲಿದ್ದಾರೆ.

train-accident-dead-boday

ವಿಡಿಯೋ ನೋಡಿ; ಬಾಲಸೋರ್‌ನಲ್ಲಿ ರೈಲು ಅಪಘಾತ ನಡೆದ ಸ್ಥಳದಲ್ಲಿ ದುರಸ್ತಿ ಕಾರ್ಯ ಕೈಗೊಂಡಿರುವ ವಿಡಿಯೋವನ್ನು ಎಎನ್‌ಐ ಟ್ವೀಟ್ ಮಾಡಿದೆ. ಜೆಸಿಬಿ ಮೂಲಕ ಅವಶೇಷ ತೆರವು ಮಾಡುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಅವಶೇಷಗಳನ್ನು ಸಂಪೂರ್ಣ ತೆರವು ಮಾಡಿದ ಬಳಿಕ ಹಳಿಗಳ ಸ್ಥಿತಿ ಹೇಗಿದೆ? ಎಂಬ ಮಾಹಿತಿ ಸಿಗಲಿದೆ.

ಭಾನುವಾರ ಸಂಜೆಯ ತನಕ ಅವಶೇಷಗಳ ತೆರವು ಕಾರ್ಯ ನಡೆಯಲಿದೆ. ಬಳಿಕ ಹಳಿಗಳನ್ನು ದುರಸ್ತಿ ಮಾಡಿ ಸೋಮವಾರ ಸಂಜೆ ಅಥವ ಮಂಗಳವಾರ ಮಾರ್ಗವನ್ನು ರೈಲುಗಳ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ.

ಗುರುತು ಪತ್ತೆಗೆ ಪ್ರಯತ್ನ; ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತದಲ್ಲಿ 288 ಜನರು ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟವರ ಗುರುತು ಪತ್ತೆ ಭಾರೀ ಸವಾಲಾಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಗಾಯಾಳುಗಳ ಸಹಾಯದಿಂದ ಮೃತದೇಹದ ಗುರುತು ಪತ್ತೆ ಮಾಡಬೇಕಿದೆ.

ಕಾಯ್ದಿರಿಸಿದ ಬೋಗಿಗಳಲ್ಲಿ ಇದ್ದ ಪ್ರಯಾಣಿಕರ ಫೋನ್ ನಂಬರ್ ಮತ್ತು ವಿಳಾಸ ಮತ್ತೆ ಹಚ್ಚುವುದು ಸುಲಭ. ಆದರೆ ಕಾಯ್ದಿರಿಸದ ಬೋಗಿಯಲ್ಲಿದ್ದ ಪ್ರಯಾಣಿಕರ ಮೃತದೇಹ ಪತ್ತೆ ಹಚ್ಚುವುದು ಸವಾಲಾಗಿದೆ. ಇವರಲ್ಲಿ ಬಹುತೇಕರು ಕೂಲಿ ಕಾರ್ಮಿಕರು. ಅವರ ಬಗ್ಗೆ ಯಾವುದೇ ದಾಖಲೆಗಳು ರೈಲ್ವೆ ಇಲಾಖೆಯ ಬಳಿ ಇಲ್ಲ.

ಈ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದ ಆಂಧ್ರ ಪ್ರದೇಶದ ರಾಜ್ಯದ 113 ಮಂದಿ ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಅವರನ್ನು ಪತ್ತೆ ಮಾಡಲು ಆಂಧ್ರ ಪ್ರದೇಶ ಸರ್ಕಾರ ಸಹ ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿದೆ. ಆಂಧ್ರ ಪ್ರದೇಶದ 482 ಪ್ರಯಾಣಿಕರ ಪೈಕಿ 267 ಜನರು ಸುರಕ್ಷಿತವಾಗಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಶವಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಇಡಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಜೊತೆಗಿದ್ದವರನ್ನು ಗಮನಿಸಿ ಮಾಹಿತಿ ನೀಡಿದರೆ ಗುರುತು ಪತ್ತೆ ಹಚ್ಚಿ ಶವಗಳನ್ನು ಹಸ್ತಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಘಟನಾ ಸ್ಥಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದ್ದರು. ಪರಿಹಾರ ಕಾರ್ಯದ ಬಗ್ಗೆ ಅಲ್ಲಿಯೇ ತುರ್ತು ಸಭೆ ನಡೆಸಿದ್ದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ವಿವಿಧ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗಮನ ಹರಿಸಿದ್ದು, ಮಾಹಿತಿ ಸಂಗ್ರಹ ಮಾಡುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+