ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು: ಸೋಲೂ ಅಲ್ಲ, ಗೆಲುವೂ ಅಲ್ಲ ಎಂದ ಮೋದಿ

|
Google Oneindia Kannada News

Recommended Video

Ayodhya verdict won’t be anybody’s victory or loss..? | Oneindia Kannada

ನವದೆಹಲಿ, ನವೆಂಬರ್ 09: ಇಂದು ಸುಪ್ರೀಂ ಕೋರ್ಟ್ ನಲ್ಲಿ ಪ್ರಕಟಗೊಳ್ಳಲಿರುವ ಐತಿಹಾಸಿಕ ರಾಮಜನ್ಮಭೂಮಿ, ಅಯೋಧ್ಯೆ ವಿವಾದದ ತೀರ್ಪಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Ayodhya Verdict Live Updates: ಸುಪ್ರೀಂನಿಂದ ಇಂದು ಐತಿಹಾಸಿಕ ತೀರ್ಪುAyodhya Verdict Live Updates: ಸುಪ್ರೀಂನಿಂದ ಇಂದು ಐತಿಹಾಸಿಕ ತೀರ್ಪು

Ayodhya Verdict: PM Narendra Modi for Urges Peace

ಈ ಕುರಿತು ಶುಕ್ರವಾರ ರಾತ್ರಿ ಸಾಲು ಸಾಲು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಹಲವು ದಶಕಗಳಷ್ಟು ಹಳೆಯ ರಾಮಜನ್ಮಭೂಮಿ-ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ಶನಿವಾರ ಪ್ರಕಟಿಸಲಿದೆ. ಇದು ಯಾರ ಗೆಲವೂ ಅಲ್ಲ, ಸೋಲೂ ಅಲ್ಲ. ಆದ್ದರಿಂದ ಎಲ್ಲರೂ ಶಾಂತಿ ಸುವ್ಯಸವ್ಥೆ ಕಾಯ್ದುಕೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಸಂಪ್ರದಾಯ. ಆದ್ದರಿಂದ ಅಯೋಧ್ಯೆ ತೀರ್ಪಿನ ನಂತರವೂ ಅದನ್ನು ಕಾಯ್ದುಕೊಳ್ಳಲು ನಾನು ನನ್ನ ದೇಶ ಬಾಂಧವರಲ್ಲಿ ವಿನಂತಿ ಮಾಡುತ್ತೇನೆ ಎಮದು ಮೋದಿ ಟ್ವೀಟ್ ಮಾಡಿದ್ದಾರೆ.

"ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಯಾರ ಗೆಲುವೂ ಅಲ್ಲ, ಯಾರ ಸೋಲೂ ಅಲ್ಲ. ಆದರೆ ಈ ತೀರ್ಪು ಶಾಂತಿ ಕಾಯ್ದುಕೊಳ್ಳುವ ಭಾರತದ ಮಹಾನ್ ಶಕ್ತಿಯನ್ನು ಮತ್ತಷ್ಟು ಸದೃಢಗೊಳಸಲಿ ಎಂದು ನಾನು ಹಾರೈಸುತ್ತೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

English summary
Ahead Ayodhya Verdict in Supreme Court Today, PM Narendra Modi Urges For Peace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X