ಮಹಾಭಾರತ ಅರಗಿನ ಅರಮನೆಯ ಉತ್ಖನನಕ್ಕೆ ಅಸ್ತು
Recommended Video

ಮೀರತ್, ನವೆಂಬರ್ 02 : ಮಹಾಭಾರತದಲ್ಲಿ ದುಷ್ಟ ಕೌರವರ ಕುತಂತ್ರಕ್ಕೆ ಬಲಿಯಾಗದೆ, ಕ್ಷಣಾರ್ಧದಲ್ಲಿ ಸುಟ್ಟುಹೋಗುವ ಅರಗಿನ ಮನೆ(ಲಾಕ್ಷಾಗೃಹ)ಯಿಂದ ಪಾಂಡವರು ದ್ರೌಪದಿಯ ಸಮೇತ ಹೇಗೆ ಪಾರಾದರು ಎಂಬುದು ರೋಚಕ ಅಧ್ಯಾಯ.
ಲಕ್ಷಗೃಹ ಎಂದೂ ಕರೆಯಲಾಗುವ ಇದೇ ಅರಗಿನ ಮನೆ ಈಗಲೂ ಇದೆ ಎನ್ನುವ ಪ್ರದೇಶವನ್ನು ಉತ್ಖನನ ಮಾಡಲು ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆ ಅನುಮತಿ ನೀಡಿದೆ. ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದರೆನ್ನಲಾದ ಸುರಂಗ ಈಗಲೂ ಇದೆ.

ಬಾಘಪಟ್ ಜಿಲ್ಲೆಯ ಬರ್ನಾವಾ ಎಂಬಲ್ಲಿ ಉತ್ಖನನ ನಡೆಯಲಿದ್ದು, ಈ ಉತ್ಖನನಕ್ಕಾಗಿ ಪುರಾತತ್ವ ತಜ್ಞರು, ಇತಿಹಾಸಕಾರರು ಬಹುದಿನಗಳಿಂದ ಬೇಡಿಕೆ ಇಟ್ಟಿದ್ದರು. ಭಾರತೀಯ ಪುರಾತತ್ತ್ವಶಾಸ್ತ್ರ ಇಲಾಖೆಯ ಅಧಿಕಾರಿಗಳ ಪ್ರಕಾರ ಇದೇ ವರ್ಷ ಡಿಸೆಂಬರ್ ನಲ್ಲಿ ಉತ್ಖನನ ನಡೆಯಲಿದೆ. ಮೂರು ತಿಂಗಳು ಉತ್ಖನನ ನಡೆಯಲಿದೆ.
ಬರ್ನಾವಾ ಎಂಬ ಹೆಸರು ಕೂಡ ವಾರಣಾವತ ಎಂಬ ಹೆಸರಿನ ಅಪಭ್ರಂಶವಾಗಿದೆ. ಮಹಾಭಾರತದ ಸಮಯದಲ್ಲಿ ಪಾಂಡವರು ಕೌರವರಿಂದ 5 ಹಳ್ಳಿಗಳನ್ನು ರಾಜ್ಯಭಾರ ನಡೆಸಲು ಕೇಳಿಕೊಂಡಿದ್ದರು. ಆ ಐದು ಹಳ್ಳಿಗಳಲ್ಲಿ ಒಂದು ಹಳ್ಳಿಯೇ ವಾರಣಾವತ ಅರ್ಥಾತ್ ಬರ್ನಾವಾ.
ನಿವೃತ್ತ ಪುರಾತತ್ತ್ವಶಾಸ್ತ್ರ ಪಂಡಿತ ಕೆಕೆ ಶರ್ಮಾ ಅವರ ಪ್ರಕಾರ, ಮಹಾಭಾರತದಲ್ಲಿ ಅರಗಿನ ಮನೆಯ ಕಥೆ ಭಾರೀ ಮಹತ್ವ ಪಡೆದುಕೊಂಡಿತ್ತು. ಕಿಡಿ ಹಚ್ಚಿದರೆ ಸುಟ್ಟುಹೋಗುವ ಮನೆಯನ್ನು ಕೌರವರು ನಿರ್ಮಿಸಿ, ಪಾಂಡವರನ್ನು ಹತ್ಯೆಗೈಯಲು ಹೊಂಚು ಹಾಕಿದ್ದರು. ಆದರೆ, ಪಾಂಡವರು ಸುರಂಗದ ಮೂಲಕ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದರು.
ಚಂದಯಾನ ಮತ್ತು ಸಿನೌಲಿ ಎಂಬಲ್ಲಿ ಕೂಡ ಉತ್ಖನನ ನಡೆಸಲಾಗಿದ್ದು, ಅಲ್ಲಿಯೂ ಮಹತ್ವದ ವಸ್ತುಗಳು ಸಿಕ್ಕಿವೆ. ಇದೇ ಸಿನೌಲಿ ಪ್ರದೇಶದಲ್ಲಿ ಪಾಂಡವರು ಪಾರಾಗಿದ್ದರೆನ್ನಲಾದ ಸುರಂಗವೂ ಸಿಕ್ಕಿದೆ. ಆದರೆ, ಇಲ್ಲಿಯವರೆಗೆ ಈ ಸುರಂಗದೊಳಗೆ ಹಲವಾರು ತಿರುವುಗಳಿರುವುದರಿಂದ ಆಳವಾಗಿ ಹೋಗಿ ಅಧ್ಯಯನ ಮಾಡಿಲ್ಲ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications