Tirupati: ತಿರುಪತಿ ಚಿತ್ರಮಂದಿರದಲ್ಲಿ ಚಾಕು ಇರಿತ: ಗೆಳೆಯನ ಮೇಲೆ ಹಲ್ಲೆ ಮಾಡಿದವನೊಂದಿಗೆ ಗೆಳತಿ ಎಸ್ಕೇಪ್!
ದೇವಾಲಯಗಳ ನಗರಿ ತಿರುಪತಿಯಲ್ಲಿ ಚಾಕು ಇರಿತದ ಘಟನೆ ನಡೆದಿದ್ದು ಸಂಚಲನ ಮೂಡಿಸಿದೆ. ತಿರುಪತಿ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದವನ ಮೇಲೆ ಚಾಕು ಇರಿದ ಘಟನೆ ಭೀತಿ ಹುಟ್ಟಿಸಿದೆ. ತಿರುಪತಿಯ ಪಿಜಿಆರ್ ಥಿಯೇಟರ್‌ನಲ್ಲಿ ಶನಿವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶಂ ಜಿಲ್ಲೆಯ ಗಿದ್ದಲೂರಿನ ಲೋಕೇಶ್ ಎಂಬ ಯುವಕ ರಂಗಂಪೇಟೆಯ ಕಾಲೇಜಿನಲ್ಲಿ ಓದುತ್ತಿದ್ದ. ಅದೇ ಕಾಲೇಜಿನಲ್ಲಿ ಓದುತ್ತಿರುವ ಯುವತಿಯೊಂದಿಗೆ ಲೋಕೇಶ್ ರಂಬಾತ ಸಿನಿಮಾ ನೋಡಲು ತೆರಳಿದ್ದನು. ಅದೇ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದ ಕಾರ್ತಿಕ್, ಲೋಕೇಶ್ ಮೇಲೆ ಚಾಕುವಿನಿಂದ ಏಕಾಏಕಿ ಹಲ್ಲೆ ಮಾಡಿದ್ದಾನೆ. ಬಳಿಕ ಯುವತಿ ಹಾಗೂ ಕಾರ್ತಿಕ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಭಯಗೊಂಡಿದ್ದಾರೆ.

ಹೌದು.. ಲೋಕೇಶ್ ಎಂಬ ಯುವಕ ಯುವತಿಯೊಂದಿಗೆ ಸಿನಿಮಾ ನೋಡಲು ಹೋಗಿದ್ದ. ಥಿಯೇಟರ್‌ನಲ್ಲಿ ಸಿನಿಮಾ ಆರಂಭವಾಗಿತ್ತು. ಎಲ್ಲರೂ ಸಿನಿಮಾ ನೋಡುತ್ತಿದ್ದರು. ಈ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಕಾರ್ತಿಕ್ ಎಂಬ ಯುವಕ ಏಕಾಏಕಿ ಲೋಕೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಗಾಯಾಳು ಲೋಕೇಶ್ ಅವರನ್ನು ಥಿಯೇಟರ್ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಲೋಕೇಶ್ ಮೇಲೆ ಕಾರ್ತಿಕ್ ಚಾಕುವಿನಿಂದ ಹಲ್ಲೆ ನಡೆಸಿರುವ ಕಾರಣ ನಿಗೂಢವಾಗಿದೆ.
ಇಲ್ಲಿ ಮತ್ತೊಂದು ಟ್ವಿಸ್ಟ್ ಎಂದರೆ ಲೋಕೇಶ್ ಜೊತೆ ಸಿನಿಮಾಕ್ಕೆ ಬಂದ ಯುವತಿ ಕಾರ್ತಿಕ್ ಜೊತೆ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾಳೆ. ಹೀಗಾಗಿ ಲೋಕೇಶ್ ಮೇಲೆ ಹಲ್ಲೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ. ಅಂದರೆ ಆ ಇಬ್ಬರು ಸೇರಿ ಪ್ಲ್ಯಾನ್ ಪ್ರಕಾರ ಲೋಕೇಶ್ ಮೇಲೆ ಹಲ್ಲೆ ನಡೆಸಿದ್ದಾರಾ? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಯಾಕೆಂದರೆ ಯುವತಿಯೇ ಲೋಕೇಶ್ ಸಿನಿಮಾ ಟಿಕೆಟ್ ಬುಕ್ ಮಾಡಿದ್ದಳಂತೆ. ಚಿತ್ರಮಂದಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರ್ತಿಕ್ ಹಾಗೂ ಯುವತಿ ಜತೆಯಾಗಿ ಓಡಿ ಹೋಗಿದ್ದು ಸೆರೆಯಾಗಿದೆ. ಅವರ ಹಿಂದೆಯೇ ಕಾರ್ತಿಕ್ ಚಾಕು ಹಿಡಿದುಕೊಂಡು ಹೋಗುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಇದು ಯೋಜಿತ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರೇಮ ಪ್ರಕರಣವೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಪೊಲೀಸರು ಅಂದುಕೊಂಡಂತೆ ಇದು ಪ್ರೇಮ ಪ್ರಕರಣವೇ ಕಾರಣನಾ? ಅಥವಾ ಬೇರೆ ಯಾವುದೇ ಕಾರಣವಿದೆಯೇ? ಎಂದು ಎಲ್ಲಾ ಕೋನಗಳಿಂದ ತನಿಖೆ ಆರಂಭವಾಗಿದೆ.
ತಿರುಪತಿಯಲ್ಲಿ ಸದ್ಯ ಇದು ಹಾಟ್ ಟಾಪಿಕ್ ಆಗಿದೆ. ಲೋಕೇಶ್ ಮತ್ತು ಕಾರ್ತಿಕ್ ಇಬ್ಬರೂ ಚಂದ್ರಗಿರಿ ರಂಗಂಪೇಟೆಯಲ್ಲಿರುವ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂದಿದೆ.
ಕಾರ್ತಿಕ್ ಹಾಗೂ ಯುವತಿ ಇಬ್ಬರು ಸೇರಿ ಪ್ಲ್ಯಾನ್ ಪ್ರಕಾರ ಲೋಕೇಶ್ ಮೇಲೆ ಹಲ್ಲೆ ಮಾಡಿದ್ದಾರಾ? ಎನ್ನುವ ಶಂಕೆ ದಟ್ಟವಾಗಿದೆ. ಪ್ರೇಮ ಪ್ರಕರಣವೇ ಈ ಘಟನೆಗೆ ಕಾರಣವಾಗಿರಬಹುದು ಎಂಬ ಪ್ರಾಥಮಿಕ ತನಿಖೆಯಿಂದ ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications