ಶಿಕ್ಷಕಿಗೆ ಚಪ್ಪಲಿಯಲ್ಲಿ ಹೊಡೆದ ವಿದ್ಯಾರ್ಥಿನಿ: ವಿಡಿಯೋ ವೈರಲ್
ಫೋನ್ ಕಿತ್ತಕೊಂಡಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಯೊಬ್ಬಳು ಉಪನ್ಯಾಸಕಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ವಿದ್ಯಾರ್ಥಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿದ್ಯಾರ್ಥಿನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಹೌದು ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ಅನ್ನೋ ಕಾಲವೊಂದು ಇತ್ತು. ಆದರೀಗ ಕಾಲ ಬದಲಾಗಿದೆ. ಗುರು ಏನ್ ಮಹಾ ಅನ್ನೋ ಕಾಲವಿದು. ಶಿಕ್ಷಕರ ಹೆಗಲ ಮೇಲೆ ವಿದ್ಯಾರ್ಥಿಗಳು ಕೈ ಹಾಕಿಕೊಂಡು ಹೋಗುವುದು, ಅವರನ್ನು ಕೀಳಾಗಿ ಕಾಣುವುದು, ಅವರನ್ನು ನಿಂದಿಸುವುದು ಇದೆಲ್ಲಾ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಮತ್ತೊಂದು ಅಘಾತಕಾರಿ ಸಂಗತಿ ಅಂದರೆ ವಿದ್ಯಾರ್ಥಿಗಳು ಉಪನ್ಯಾಸಕರ ಮೇಲೆ ಕೈ ಮಾಡುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಇಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು ಕೆಂಗಣ್ಣಿಗೆ ಗುರಿಯಾಗಿದೆ.

ವಿದ್ಯಾರ್ಥಿನಿ ಫೋನ್‌ನಲ್ಲಿ ಮಾತನಾಡುವಾಗಿ ಉಪನ್ಯಾಸಕಿ ಆಕೆಯ ಫೋನ್ ಕಿತ್ತುಕೊಂಡಿದ್ದಾಳೆ. ಆಗ ಕೋಪಗೊಂಡ ವಿದ್ಯಾರ್ಥಿನಿ ಫೋನ್ ನೀಡುವಂತೆ ಒತ್ತಾಯಿಸಿದ್ದಾಳೆ. ಈ ದೃಶ್ಯ ಇತರ ವಿದ್ಯಾರ್ಥಿಗಳ ಫೋನ್‌ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿ ತನ್ನ ಫೋನ್ 12,000 ರೂಪಾಯಿ ಮೌಲ್ಯದ್ದಾಗಿದೆ ಕೊಟ್ಟುಬಿಡಿ ಎಂದು ಉಪನ್ಯಾಸಕಿಯೊಂದಿಗೆ ಜಗಳ ಆಡಿದ್ದಾಳೆ. ಉಪನ್ಯಾಸಕಿ ಫೋನ್ ಕೊಡಲು ನಿರಾಕರಿಸಿದಾಗ ವಿದ್ಯಾರ್ಥಿನಿ ಬಾಯಿಗೆ ಬಂದಂತೆ ನಿಂದಿಸಿದ್ದಾಳೆ.
ವಾಗ್ವಾದ ತೀವ್ರಗೊಳ್ಳುತ್ತೋ ವಿದ್ಯಾರ್ಥಿನಿ ಕಾಲಲ್ಲಿ ಇದ್ದ ಚಪ್ಪಲಿ ಕಳಚಿ ಉಪನ್ಯಾಸಕಿಗೆ ಹೊಡೆದಿದ್ದಾಳೆ. ಈ ದೃಶ್ಯವು ಅಲ್ಲಿದ್ದ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬೆಚ್ಚಿಬೀಳಿಸಿದೆ. ಶಿಕ್ಷಕಿ ಕೂಡ ಆಕೆಯ ಮೇಲೆ ಕೈ ಮಾಡಲು ಮುಂದಾದರು. ಆಗ ಜಗಳ ವಿಕೋಪಕ್ಕೆ ಹೋದಾಗ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ಅವರ ಜಗಳವನ್ನು ಬಿಡಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆ.
Raghu Engineering College Incident
— 74 (@GhostRiderOnX) April 22, 2025
1. కాలేజీ లో ఫోన్ వాడుతుంది అని స్టూడెంట్ దగ్గర, తన అధికారం ని చూపించుకోడానికి, fines వసూలు చెయ్యటానికి నిర్ధాక్షిణ్యం గా ఫోన్ లాక్కున్న college స్టాఫ్.
2. నా ఫోన్ తీసుకోడానికి నువ్వు ఎవరే లం* ముం** అంటూ faculty పైన చెప్పులు తీస్కొని దారుణం… pic.twitter.com/GA9R5j25CL
ಶಿಕ್ಷಕರನ್ನು ದೇವರಿಗೆ ಸಮಾನವೆಂದು ಪರಿಗಣಿಸುವ ನಮ್ಮ ಸಂಸ್ಕೃತಿಯಲ್ಲಿ ಇಂತಹ ಘಟನೆಗಳು ಅತ್ಯಂತ ನೋವನ್ನುಂಟು ಮಾಡಿದೆ. ಬುದ್ಧಿಜೀವಿಗಳು ಶಿಕ್ಷಕರಿಗೆ ತೋರಿಸುವ ಗೌರವ ಎಷ್ಟಿದೆ ಅನ್ನೋದು ಈ ಘಟನೆಯಿಂದ ಗೊತ್ತಾಗುತ್ತದೆ. ವಿದ್ಯಾರ್ಥಿಗಳಲ್ಲಿ ಇತ್ತೀಚೆಗೆ ಮೊಂಡುತನ ಹೆಚ್ಚಾಗುತ್ತಿದೆ. ಅವರು ತಾಳ್ಮೆಯನ್ನು ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಮಾತ್ರವಲ್ಲದೆ, ಉತ್ತಮ ನಡವಳಿಕೆ, ಹಿರಿಯರಿಗೆ ಗೌರವ ನೀಡುವ ಮುಂತಾದ ಮೌಲ್ಯಗಳನ್ನು ಕಲಿಸುವುದು ಮುಖ್ಯವಾಗಿದೆ.
ಈ ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ರೀತಿಯ ನಡವಳಿಕೆಯನ್ನು ಸಹಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ಅವರು ರವಾನಿಸಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶಿಕ್ಷಕರ ಬಗ್ಗೆ ಭಕ್ತಿ ಭಾವನೆ ಮೂಡಿಸಲು ಶಿಕ್ಷಣ ಸಂಸ್ಥೆಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಸಮಾಜದಲ್ಲಿ ವಯಸ್ಕರು ಸಹ ವಿದ್ಯಾರ್ಥಿಗಳಿಗೆ ಮಾದರಿಗಳಾಗಿರಬೇಕಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಘಟನೆಯು ಕೇವಲ ಒಬ್ಬ ಶಿಕ್ಷಕನಿಗೆ ಮಾಡಿದ ಅವಮಾನವಲ್ಲ, ಇದು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ನಮ್ಮ ಸಂಸ್ಕೃತಿಗೆ ಮಾಡಿದ ಅವಮಾನ.












Click it and Unblock the Notifications