Kejriwal vs Amit Shah: ಅಮಿತ್ ಶಾಗೆ ಅರವಿಂದ್ ಕೇಜ್ರಿವಾಲ್ ಕೇಳಿದ್ದೇನು? ಪಾಕಿಸ್ತಾನಿಗಳು ಯಾರು?
ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ ವಾಕ್ ಸಮರ ಮುಂದುವರೆದಿದೆ. ಈಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಅಮಿತ್ ಶಾ ನಡುವಿನ ಮಾತಿನ ಚಕಮಕಿ ಇನ್ನೊಂದು ಹಂತ ತಲುಪಿದೆ.
ಸೋಮವಾರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಪ್ರಚಾರದ ವೇಳೆ ಮಾತನಾಡುತ್ತಾ, ಸಾರ್ವಜನಿಕರನ್ನು ನಿಂದಿಸಿದ್ದರು. ಎಎಪಿ ಬೆಂಬಲಿಗರು ಪಾಕಿಸ್ತಾನಿಗಳು ಎಂದು ಅಮಿತ್ ಶಾ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ. ದೆಹಲಿ, ಗುಜರಾತ್, ಗೋವಾ ಮತ್ತು ಪಂಜಾಬ್‌ನ ಜನರು ಪಾಕಿಸ್ತಾನಿಗಳು ಎಂದು ಹೇಳಿದ್ದಾರೆ. ಈ ವೇಳೆ ಅವರು ಜೂನ್ 4 ರಂದು ಪ್ರತಿಪಕ್ಷಗಳ ಮೈತ್ರಿಕೂಟದ 'ಭಾರತ' ಸರ್ಕಾರ ಬರಲಿದೆ ಎಂದು ಕೇಜ್ರಿವಾಲ್ ಭರವಸೆ ಮೂಡಿಸಿದ್ದಾರೆ.

ಈ ಬಾರಿ ಇಂಡಿಯಾ ಸರ್ಕಾರ
ಲೋಕಸಭಾ ಚುನಾವಣೆಯ ಐದು ಹಂತಗಳ ಚುನಾವಣೆ ಮುಗಿದಿದ್ದು, ಇನ್ನು ಎರಡು ಹಂತದ ಮತದಾನ ಬಾಕಿ ಇದೆ. ಜೂನ್ ಫಲಿತಾಂಶ ಹೊರ ಬರಲಿದೆ. ಅಂದು ಇಂಡಿಯಾ ಮೈತ್ರಿ ಕೂಟ ಅಧಿಕಾರಕ್ಕೆ ಏರಲಿದೆ. ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಗದ್ದುಗೆಯಿಂದ ಕೆಳಗೆ ಇಳಿಯಲಿದೆ. ಹಲವು ಸಮೀಕ್ಷೆಗಳಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಜಯ ಸಿಗಲಿದೆ ಎಂದು ತಿಳಿಸಿವೆ. ಮೈತ್ರಿ ಕೂಟ 18ನೇ ಲೋಕಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಪಂಚಾಯತ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳಲ್ಲಿ ಯುಪಿ, ಅಸ್ಸಾಂ, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸಿಕ್ಕಿದೆ. ಹೀಗಿರುವಾಗ ದೇಶದ ಜನರೆಲ್ಲ ಪಾಕಿಸ್ತಾನಿಗಳೇ? ಎಂದು ಪ್ರಶ್ನಿಸಿದ್ದಾರೆ.

ಬರೀ ಅಮಿತ್ ಶಾ ಅವರನ್ನು ಅಷ್ಟೇ ಕೇಜ್ರಿವಾಲ್ ಟಾರ್ಗೆಟ್ ಮಾಡಲಿಲ್ಲ. ಬದಲಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ನಿಜವಾದ ಶತ್ರುಗಳು ನಿಮ್ಮ ಪಕ್ಷದಲ್ಲಿ ಕುಳಿತಿದ್ದಾರೆ ಎಂದು ನಾನು ಹೇಳುತ್ತೇನೆ. ನೀವು ನನ್ನನ್ನು ನಿಂದಿಸಿದರೆ ಏನಾಗುತ್ತದೆ? ನಿಮ್ಮನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಪ್ಲಾನ್ ಮಾಡಿದ್ದಾರೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.
ಅಮಿತ್ ಶಾ ಬಗ್ಗೆ ಹೇಳಿದ್ದೇನು?
ಗೃಹ ಸಚಿವ ಅಮಿತ್ ಶಾ ದೆಹಲಿಗೆ ಬಂದಿದ್ದರು. ಈ ವೇಳೆ ಅಮಿತ್ ಶಾ ಸಾರ್ವಜನಿಕರನ್ನು ನಿಂದಿಸಿದರು. ಎಎಪಿ ಬೆಂಬಲಿಗರು ಪಾಕಿಸ್ತಾನಿಗಳು ಎಂದು ಅಮಿತ್ ಶಾ ಹೇಳಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ದೆಹಲಿಯ ಜನರು ಶೇಕಡಾ 56 ರಷ್ಟು ನಮ್ಮ ಪಕ್ಷಕ್ಕೆ ಮತ ನೀಡಿದ್ದಾರೆ. ದೆಹಲಿಯ ಜನರು ಪಾಕಿಸ್ತಾನಿಗಳೇ? ಪಂಜಾಬ್‌ನಲ್ಲಿ 92 ಸ್ಥಾನಗಳನ್ನು ನೀಡಿದ್ದಾರೆ. ಪಂಜಾಬಿನ ಜನರು ಪಾಕಿಸ್ತಾನಿಗಳೇ? ಗುಜರಾತಿನ ಜನ ನಮಗೆ 14 ಪರ್ಸೆಂಟ್ ಮತ ಹಾಕಿದ್ದಾರೆ, ಹಾಗಾದರೆ ಇಲ್ಲಿನ ಜನರೂ ಪಾಕಿಸ್ತಾನಿಗಳೇ? ಗೋವಾದವರು ಪ್ರೀತಿ ಕೊಟ್ಟರೆ ಇಲ್ಲಿನವರು ಪಾಕಿಸ್ತಾನಿಗಳೇ? ಎಂದು ಅಮಿತ್ ಶಾಗೆ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications