Ahmedabad Plane Crash: ಕಳೆದ ವಾರವೇ ದುರಂತದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದ ಖ್ಯಾತ ಜ್ಯೋತಿಷಿ
ಗುಜರಾತ್ನ ಅಹಮ್ಮದಾಬಾದ್ನಲ್ಲಿ ನಿನ್ನೆ(ಜೂನ್ 12) ಸಂಭವಿಸಿರುವ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 241 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಮೇಘನಿ ನಗರ ಪ್ರದೇಶದಲ್ಲಿ ಪ್ರಯಾಣಿಕರು, ಸಿಬ್ಬಂದಿ ಸೇರಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದ್ದು, ಪ್ರಯಾಣ ಮಾಡುತ್ತಿದ್ದ 242 ಜನರಲ್ಲಿ 241 ಪ್ರಯಾಣಿಕರು ಮೃತಪಟ್ಟಿದ್ದು, ರಮೇಶ್ ವಿಶ್ವಾಸ್ ಎಂಬ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾರೆ.
242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಂಡಿದ್ದು, ಇದರ ಜೊತೆಗೆ ವಿಮಾನ ಅಪ್ಪಳಿಸಿರುವ ಕಟ್ಟಡದಲ್ಲಿ ಇದ್ದ ಜನರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಹಾಗೂ 52 ಬ್ರಿಟಿಷ್ ಪ್ರಜೆಗಳು ಸೇರಿದಂತ ಹಲವರು ಕೂಡ ಪ್ರಯಾಣಿಸುತ್ತಿದ್ದರು. ತಾಂತ್ರಿಕ ದೋಷದ ಕಾರಣಕ್ಕೆ ಟೇಕ್ ಆಫ್ ಆದ 15 ಕಿ ಮೀಟರ್ ದೂರದಲ್ಲಿ 600 ರಿಂದ 700 ಅಡಿ ಎತ್ತರದಲ್ಲಿ ಹಾರಿರುವಾಗ ವಿಮಾನ ಪತನವಾಗಿದೆ. ಇನ್ನೂ ಈ ಘಟನೆ ಬಗ್ಗೆ ಕಾರಣ ಇದುವರೆಗೆ ತಿಳಿದುಬಂದಿಲ್ಲ. ಆದರೆ ಇದರ ನಡುವೆಯೇ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ಕಳೆದ ವಾರವೇ ಭವಿಷ್ಯ ನುಡಿದಿರುವುದು ಇದೀಗ ಎಚ್ಚರಿಕೆ ಕಾರಣವಾಗಿದೆ.

Tata will make Rafale fuselage in Hyderabad. This is just aviation expansion, ISRO will surprise the world in Space and satellite engineering, space tourism in coming two years. Predicted this last year via Nakshatra transit. I am still holding high the prediction of Plane crash… https://t.co/WjX39R7E47
— Astro Sharmistha (@AstroSharmistha) June 5, 2025
ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು ಕಳೆದ ವಾರವೇ ಈ ದುರ್ಘನೆ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಆದರೆ, ಆಗ ಈ ಸುದ್ದಿ ಅಷ್ಟು ಬೆಳಕಿಗೆ ಬಾರದಿದ್ದ ಅವರ ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಅದರಲ್ಲಿ ಶರ್ಮಿಷ್ಠಾ ಅವರು, ವಿಮಾನ ಅಪಘಾತ ಮತ್ತು ವಾಯುಯಾನ ವಲಯದಲ್ಲಿ ಸಂಭವನೀಯ ವಿನಾಶ ಎಂದು ಕಳೆದ ವಾರವೇ ಎಚ್ಚರಿಸಿದ್ದರು. ಕಳೆದ ತಿಂಗಳು ಅವರು ಗ್ರಹಗತಿಗಳನ್ನು ನೋಡಿ ಭಾರಿ ವಿಮಾನ ಅಪಘಾತದ ಮುನ್ಸೂಚನೆ ಇರುವುದಾಗಿ ತಿಳಿಸಿದ್ದರು.
ಕಳೆದ ವಾರ ಇನ್ನೊಂದು ಟ್ವೀಟ್ ಮಾಡಿದ್ದ ಅವರು, ಗುರು, ಮೃಗಶಿರ ಮತ್ತು ಆರ್ದ್ರ ನಕ್ಷತ್ರದಲ್ಲಿದ್ದಾಗ, ವಾಯುಯಾನದಲ್ಲಿ ಅಭಿವೃದ್ಧಿ ಇರುತ್ತದೆ ಆದರೆ ಸುರಕ್ಷತೆ ಮತ್ತು ಸ್ಥಿರತೆಯ ಕೊರತೆ ಇರುತ್ತದೆ. ಭೀಕರ ಅಪಘಾತ ಸಂಭವಿಸುವ ಸಾಧ್ಯತೆಯ ಬಗ್ಗೆ ನನ್ನ ಕಳೆದ ತಿಂಗಳ ಮಾತಿಗೆ ಈಗಲೂ ಬದ್ಧಳಾಗಿದ್ದೇನೆ ಎಂದು ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ಅವರು, ವಿಮಾನ ಅಪಘಾತಗಳು ಭಾರಿ ಸದ್ದು ಮಾಡುತ್ತವೆ, ಇದು ಹೆಡ್ಲೈನ್ ಆಗುತ್ತದೆ ಎಂದು ಶರ್ಮಿಷ್ಠಾ ಹೇಳಿದ್ದರು. ಇದೀಗ ದುರಂತದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಅವರು, ಇಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ನಾವು ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ದುರದೃಷ್ಟಕರ. ಗುರು ಗ್ರಹವು ಇನ್ನೂ ಆರ್ದ್ರಾ ಪ್ರವೇಶಿಸಿಲ್ಲ, ಮತ್ತು ಭಾರತದ ಮಂಗಳ ಮಹಾದಶಾ ಇನ್ನೂ ಪ್ರಾರಂಭವಾಗಿಲ್ಲ - ಆದರೆ ಈಗಾಗಲೇ ಬಹಳಷ್ಟು ಪ್ರಾರಂಭವಾಗಿದೆ.ಇನ್ನೂ ಹೆಚ್ಚಿನವು ಇದೆ ಎಂದು ತಿಳಿಸಿದ್ದಾರೆ.
ಈ ವಿಮಾನವು ಅಹಮ್ಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಅಪಘಾತದ ಕಾರಣವನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. AI-171 ನಂಬರ್ ನ ಬೋಯಿಂಗ್ -787-8 ಮಾದರಿಯ ವಿಮಾನ 1.10ಕ್ಕೆ ಟೇಕ್ ಆಫ್ ಆಗಬೇಕಿದ್ದ ವಿಮಾನ 1.38ಕ್ಕೆ ತಡವಾಗಿ ಟೇಕ್ ಆಫ್ ಆಗಿದೆ ಎಂದು ವರದಿಗಳು ತಿಳಿಸಿವೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿತ್ತು, ಅಲ್ಲದೇ ಹಲವು ಸಾವು-ನೋವುಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications