Maha Kumbh Mela 2025: ಮಹಾ ಕುಂಭ ಮೇಳದಲ್ಲಿ ಪ್ರಸಾದ ವಿತರಣೆಗೆ ಕೈಜೋಡಿಸಿದ ಅದಾನಿ ಗ್ರೂಪ್ ಮತ್ತು ಇಸ್ಕಾನ್‌

ಜನವರಿ 12ರಿಂದ ಆರಂಭವಾಗಲಿರುವ ಮಹಾ ಕುಂಭ ಮೇಳಕ್ಕೆ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಈಗಾಗಲೇ ಲಕ್ಷಾಂತರ ಭಕ್ತರು ಪ್ರಯಾಗ್‌ ರಾಜ್‌ನಲ್ಲಿ ಸೇರುತ್ತಿದ್ದಾರೆ. ಸರ್ಕಾರ ಕೂಡ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ, ಹಲವು ಸಂಘ ಸಂಸ್ಥೆಗಳು ಕೂಡ ಈ ಧಾರ್ಮಿಕ ಕಾರ್ಯಕ್ಕಾಗಿ ಕೈಜೋಡಿಸುತ್ತಿವೆ. ಕುಂಭ ಮೇಳದಲ್ಲಿ ಮಹತ್ಕಾರ್ಯವೊಂದಕ್ಕೆ ಅದಾನಿ ಗ್ರೂಪ್ ಮತ್ತು ಇಸ್ಕಾನ್ ಕೈಜೋಡಿಸಿದ್ದು 50 ಲಕ್ಷ ಮಂದಿಗೆ ಮಹಾಪ್ರಸಾದ ಒದಗಿಸಲು ಸಜ್ಜಾಗಿದೆ.

ಪ್ರಯಾಗ್‌ ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಮಹಪ್ರಸಾದ ವಿತರಣೆ ಮಾಡಲು ಅದಾನಿ ಗ್ರೂಪ್ ಮತ್ತು ಇಸ್ಕಾನ್ ನಿರ್ಧರಿಸಿವೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಮಹಾ ಕುಂಭಮೇಳದ ಪ್ರತಿದಿನ ಮಹಪ್ರಸಾದ ಸೇವೆಯನ್ನು ಒದಗಿಸಲು ನಿರ್ಧರಿಸಲಾಗಿದೆ. 44 ದಿನಗಳು ಕೂಡ ಅಂಬಾನಿ ಗ್ರೂಪ್ ಮತ್ತು ಇಸ್ಕಾನ್ ಸಹಯೋಗದಲ್ಲಿ ಮಹಾಪ್ರಸಾದ ವಿತರಣೆ ಮಾಡಲಾಗುತ್ತದೆ.

Adani group iskcon mahaprasad seva maha kumbh 2025

ಈ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದಕ್ಕೆ ಗೌತಮ್ ಅದಾನಿ ಇಸ್ಕಾನ್‌ಗೆ ಧನ್ಯವಾದ ತಿಳಿಸಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಗುರುವಾರ ಇಸ್ಕಾನ್ ಆಡಳಿತ ಮಂಡಳಿ ಆಯೋಗದ ಅಧ್ಯಕ್ಷ ಗುರು ಪ್ರಸಾದ್ ಸ್ವಾಮಿ ಅವರನ್ನು ಭೇಟಿ ಮಾಡಿ ಧನ್ಯವಾದ ಹೇಳಿದರು.

ನನ್ನ ಅದೃಷ್ಟ ಎಂದ ಅದಾನಿ

ಮಹಪ್ರಸಾದ ಸೇವೆ ನೀಡಲು ಇಸ್ಕಾನ್ ಕೈಜೋಡಿಸಿದ್ದರ ಕುರಿತು ಮಾತನಾಡಿದ ಗೌತಮ್ ಅದಾನಿ, "ಮಹಾ ಕುಂಭ ಮೇಳ ಪವಿತ್ರವಾದ ಸೇವಾ ಸ್ಥಳವಾಗಿದ್ದು, ಅಲ್ಲಿ ಎಲ್ಲಾ ಭಕ್ತರೂ ಸೇವೆ ಸಲ್ಲಿಸಲು ಇಚ್ಚಿಸುತ್ತಾರೆ. ಇಸ್ಕಾನ್ ಸಹಯೋಗದೊಂದಿಗೆ ಮಹಾ ಕುಂಭದಲ್ಲಿ ಭಕ್ತರಿಗಾಗಿ ಮಹಾಪ್ರಸಾದ ಸೇವೆಯನ್ನು ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ" ಎಂದು ಹೇಳಿದರು.

"ತಾಯಿ ಅನ್ನಪೂರ್ಣೆಯ ಆಶಿರ್ವಾದದಿಂದ, ಲಕ್ಷಾಂತರ ಭಕ್ತರಿಗೆ ಉಚಿತ ಆಹಾರವನ್ನು ವಿತರಿಸಲಾಗುವುದು. ಇಂದು ನನಗೆ ಇಸ್ಕಾನ್‌ನ ಗುರು ಪ್ರಸಾದ್ ಸ್ವಾಮೀಜಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಸೇವೆಯ ಸಮರ್ಪಣೆ ಶಕ್ತಿಯನ್ನು ನಾನು ಅನುಭವಿಸಿದೆ. ಸೇವೆಯು ಧ್ಯಾನ, ಸೇವೆಯು ಪ್ರಾರ್ಥನೆ, ಸೇವೆಯೇ ದೇವರು." ಎಂದು ಹೇಳಿದರು.

ಅದಾನಿ ಗ್ರೂಪ್‌ನ ಮಹತ್ಕಾರ್ಯಕ್ಕೆ ಇಸ್ಕಾನ್‌ನ ಪ್ರಚಾರಕರಲ್ಲಿ ಒಬ್ಬರಾದ ಗುರು ಪ್ರಸಾದ್ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅದಾನಿ ಗ್ರೂಪ್ ಯಾವಾಗಲೂ ಕಾರ್ಪೊರೇಟ್ ಜವಾಬ್ದಾರಿ ಜೊತೆಗೆ ಸಾಮಾಜಿಕ ಸೇವೆಯಲ್ಲೂ ಮಹತ್ವದ ಕಾರ್ಯಗಳನ್ನು ಮಾಡುತ್ತಿದೆ. ಸಹಾಯ ಮಾಡಲು ಗೌತಮ್ ಅದಾನಿ ಎಂದಿಗೂ ಯಾರಿಗೂ ಕಾಯುವುದಿಲ್ಲ, ಅವರ ಕೊಡುಗೆಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಅವರ ಸಮಾಜಸೇವೆ ಮತ್ತು ಮಾನವೀಯತೆ ನಮಗೆ ಅವರ ಜೊತೆ ಕೈಜೋಡಿಸಲು ಸ್ಪೂರ್ತಿ ನೀಡಿದೆ" ಎಂದು ಹೇಳಿದ್ದಾರೆ.

50 ಲಕ್ಷ ಭಕ್ತರಿಗೆ ಮಹಾಪ್ರಸಾದ

ಮಹಾ ಕುಂಭ ಮೇಳದಲ್ಲಿ 50 ಲಕ್ಷ ಭಕ್ತರಿಗೆ ಮಹಾ ಪ್ರಸಾದ ವಿತರಣೆ ಮಾಡಲಾಗುತ್ತದೆ. ಕುಂಭ ಮೇಳದ ಒಳಗೆ ಮತ್ತು ಹೊರಗಿನ ಎರಡು ಅಡುಗೆ ಮನೆಗಳಲ್ಲಿ ಊಟವನ್ನು ತಯಾರು ಮಾಡಲಾಗುತ್ತದೆ. ಮತ್ತು ಮೇಳದ 40 ಸ್ಥಳಗಳಲ್ಲಿ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ 2,500 ಸ್ವಯಂ ಸೇವಕರು ಭಾಗಿಯಾಗಲಿದ್ದಾರೆ.

ವಿಕಲಚೇತನರು, ವೃದ್ಧರು ಮತ್ತು ಚಿಕ್ಕಮಕ್ಕಳಿರುವ ತಾಯಂದಿರಿಗಾಗಿ ಬಂಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇದೇ ಸಂದರ್ಭದಲ್ಲಿ ಭಗವದ್‌ಗೀತೆ ಸಾರದ ಐದು ಲಕ್ಷ ಪ್ರತಿಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+