Get Updates
Get notified of breaking news, exclusive insights, and must-see stories!

Adani Group: ಷೇರು ಪ್ರಕ್ರಿಯೆ ಮುಗಿಯುತ್ತಿದ್ದಂತೆ AWL ಪಾಲುದಾರಿಕೆಯಿಂದ ಅದಾನಿ ಗ್ರೂಪ್ ಎಕ್ಸಿಟ್

Adani Group: ಅದಾನಿ ಒಡೆತನದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಮಹತ್ವದ ನಿರ್ಧಾರ ಕೈಗೊಂಡಿದೆ. ಕಂಪನಿಯು ಅಗ್ರಿ ಬ್ಯುಸಿನೆಸ್ ಲಿಮಿಟೆಡ್ (AWL) ನಿಂದ ಸಂಪೂರ್ಣವಾಗಿ ಹೊರ ಬರುವುದಾಗಿ ಘೋಷಿಸಿದೆ. ಈ ಪಾಲುದಾರಿಕೆಗೆ ಸಂಬಂಧಿಸಿದ ತನ್ನ ಎಲ್ಲ ಷೇರುಗಳನ್ನು ದೀರ್ಘಕಾಲದ ಜಂಟಿ ಉದ್ಯಮ ಪಾಲುದಾರ ಸಂಸ್ಥೆಯಾದ ಸಿಂಗಾಪುರದ ವಿಲ್ಮರ್ ಇಂಟರ್‌ನ್ಯಾಷನಲ್‌ಗೆ ವರ್ಗಾವಣೆ ಮಾಡಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೃಷಿ-ವ್ಯವಹಾರ ಕಂಪನಿಗಳಲ್ಲಿ ಮಾಲೀಕತ್ವದ ಪುನರ್‌ರಚನೆ ಮೇಲೆ ಇದರ ಉತ್ತಮ ಪ್ರಭಾವ ಬೀರುತ್ತದೆ.

ಅದಾನಿ ಎಂಟರ್‌ಪ್ರೈಸಸ್ ಇದೇ ವರ್ಷ ಜುಲೈ 17 ರಂದು ಅಧಾನಿ ಗ್ರೂಪ್ ತನ್ನ ನಿರ್ಧಾರವನ್ನು ಷೇರು ವಿನಿಮಯ ಕೇಂದ್ರಗಳಿಗೆ ಬಹಿರಂಗಪಡಿಸಿತು. ಅಂಗಸಂಸ್ಥೆ ಅದಾನಿ ಕಮಾಡಿಟೀಸ್ (ACL), ವಿಲ್ಮರ್ ಇಂಟರ್‌ನ್ಯಾಷನಲ್‌ನ ಸಂಪೂರ್ಣ ಸ್ವಾಮ್ಯದ ಅಂಗವಾದ ಲೆನ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಷೇರು ಖರೀದಿ ಒಪ್ಪಂದ ಮುಂದುವರಿಸುವ ಬಗ್ಗೆ ಖಚಿತಪಡಿಸಿತು. ಅದರ ಅಡಿಯಲ್ಲಿ AWL ಪಾವತಿಸಿದ ಇಕ್ವಿಟಿ ಷೇರು ಬಂಡವಾಳದ ಶೇಕಡಾ 20 ವರೆಗೆ ACL ನಿಂದ ಪ್ರತಿ ಷೇರಿಗೆ ₹275 ಬೆಲೆ ನೀಡಿ ಪಡೆದುಕೊಂಡಿದೆ. ಈ ಪೈಕಿ ಕನಿಷ್ಠ 11 ರಷ್ಟು ಪಾಲನ್ನು ಅಂದರೆ ಸರಿಸುಮಾರು 14.3 ಕೋಟಿ ಷೇರುಗಳನ್ನು ಮಾರಾಟ ಮಾಡಲಿದೆ ಎಂದು ಕಂಪನಿ ಮೂಲಗಳು ಮಾಹಿತಿ ನೀಡಿವೆ.

Adani Group Fully Exits AWL Wilmar Becomes Majority Owner

ಈ ಬೆಳವಣಿಗೆಯು ಜನವರಿ 2025 ರಲ್ಲಿ ನಡೆಸಲಾದ ಹಿಂದಿನ ಮಾರಾಟದ ಪ್ರಸ್ತಾಪವನ್ನು ಅನುಸರಿಸುತ್ತದೆ, ಅಲ್ಲಿ ACL

ಸೇಬಿಯ (SEBI) ನಿಷ್ಠ ಸಾರ್ವಜನಿಕ ಷೇರುದಾರರ (MPS) ಅಗತ್ಯತೆ ಪೂರೈಕೆಗಾಗಿ ACL ಕಂಪನಿಯು AWL ನಲ್ಲಿರುವ ತನ್ನ ಪಾಲನ್ನು 276.51 ರೂಪಾಯಿಯಂತೆ ಶೇಕಡಾ 13.5ರಷ್ಟು ಆಫ್‌ಲೋಡ್ ಮಾಡಿತು. ಆ ಮಾರಾಟದ ನಂತರ, ಎಸಿಎಲ್ ಷೇರುದಾರಿಕೆ ಪಾಲು ಶೇಕಡಾ 30.42ರಷ್ಟಿತ್ತು. ಇದೆಲ್ಲ ವಹೀವಾಟುಗಳು ಷೇರು ಮಾರಾಟ ಇತರ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಕಂಪನಿಯಿಂದ ಘೋಷಿಸಿದಂತೆ ಅದಾನಿ ಗ್ರೂಪ್ ಹೊರ ಬರಲಿದೆ ಎಂದು ತನ್ನ ನಿರ್ಧಾರವನ್ನು ಪುನರಚ್ಚರಿಸಿದೆ.

ದಶಕಗಳ ಹಿಂದೆ ಅಂದರೆ 1999 ರಲ್ಲಿ ಶುರುವಾದ ವಿಲ್ಮಾರ್ ಕಂಪನಿ ಜೊತೆಗಿನ ಜಂಟಿ ಉದ್ಯಮದ ಪ್ರಯಾಣಕ್ಕೆ ಈ ನಿರ್ಧಾರದಿಂದ ಕೊನೆಗೊಳ್ಳುತ್ತಿದೆ. ವಿಲ್ಮಾರ್ ಶೇಕಡಾ 64ರಷ್ಟು ಪಾಲನ್ನು ಹೊಂದಿರುವ AWL ನಲ್ಲಿ ಬಹುಪಾಲು ಷೇರುದಾರ ಆಗಲಿದೆ. ಅದರಿಂದ ಎರಡು ಕಡೆಗಿನ ಮಾರಾಟದಿಂದ ಎಇಎಲ್ ಕಂಪನಿಯು ಒಟ್ಟು ₹15,729 ಕೋಟಿ ಪಡೆಯಲಿದೆ. ಇನ್ನೂ ವಿಲ್ಮಾರ್ ಖರೀದಿ ಆಗದ ಷೇರುಗಳು ಜನವರಿ OFS ನಿಂದ ₹4,855 ಕೋಟಿ ಮತ್ತು ಈ ಹಿಂದೆ ಮಾರಾಟ ಮಾಡಿದ ₹10,874 ಕೋಟಿಯನ್ನು ಉಳಿದ ಷೇರುಗಳನ್ನು ಶೇಕಡಾ 20ರಷ್ಟು ಮಿತಿಯಲ್ಲಿ ಹೂಡಿಕೆಗೆ ಕೊಡಲು ತಿರ್ಮಾನಿಸಲಾಗಿದೆ.

ಅದಾನಿ ಸಂಸ್ಥೆ ಹಾಗೂ ವಿಲ್ಮಾರ್ ಕಂಪನಿಗಳು ಷೇರು ಒಪ್ಪಂದಕ್ಕಾಗಿ 1999, 2014, 2017 ಮತ್ತು 2021 ರಲ್ಲಿ ಸಹಿ ಮಾಡಿದ್ದುವು, ಆ ಪಾರಂಪರಿಕ ಷೇರು ಒಪ್ಪಂದಗಳು ಇಂದಿನಗೆ ಮುಕ್ತಾಯಗೊಳ್ಳಲಿವೆ. ಈ ಒಪ್ಪಂದಗಳು ಹಲವು ನಿರ್ಣಾಯಕ ಪಾತ್ರಗಳು, ಆಡಳಿತ ಪ್ರಾತಿನಿಧ್ಯ ಮತ್ತು ನಿಯಂತ್ರಣಕ್ಕೆ ಪೂರಕವಾಗಿದ್ದವು ಎನ್ನಲಾಗಿದೆ.

ಅಗ್ರಿ ಬ್ಯುಸಿನೆಸ್ ಲಿಮಿಟೆಡ್ ಮುಂದಿನ ನಡೆ

ವಿಲ್ಮಾರ್ ಕಂಪನಿ ಸದ್ಯ ದೃಢವಾಗಿದೆ. ಅಗ್ರಿ ಬ್ಯುಸಿನೆಸ್ ಕಪನಿ (AWL) ಒಂದೇ ನಾಯಕತ್ವದಲ್ಲಿ ಭವಿಷ್ಯದ ಬೆಳವಣಿಗೆ ಕುರಿತು ಪಟ್ಟಿ ಮಡಿದಾಗ, ಕಂಪನಿಯು ಮರುಜೋಡಣೆಗೆ ಒಳಗಾಗಬಹುದೆಂಬ ಸಾಧ್ಯತೆಗಳು ಇವೆ. ಮಾಲೀಕತ್ವದ ಬಲವರ್ಧನೆಯು ಕಾರ್ಯಾಚರಣೆಯ ಸ್ಪಷ್ಟತೆಯನ್ನು ನೀಡಬಹುದು. ದೇಶ ಕೃಷಿ ಮತ್ತು ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು (FMCG) ಮಾರುಕಟ್ಟೆಗಳಿಗೆ ವಿಲ್ಮಾರ್‌ನ ಬಹುಕಾಲದ ಬದ್ಧತೆ ಸ್ಥಾಪಿಸಲು ಮುಂದಾಗಬಹುದೆಂದು ನಿರೀಕ್ಷಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+