Haryana Election 2024 ಎಎಪಿಗೆ ಪೆಟ್ಟು ಕೊಟ್ಟ ನಾಯಕನ ಬಿಜೆಪಿ ಸೇರ್ಪಡೆ

ನವದೆಹಲಿ, ಸೆಪ್ಟಂಬರ್ 29: ದೇಶದಲ್ಲಿ ನಡೆಯುತ್ತಿರುವ ವಿವಿಧ ಚುನಾವಣೆಗಳಲ್ಲಿ ಹರಿಯಾಣ ಹೆಚ್ಚಿನ ಗಮನ ಸೆಳೆಯುತ್ತಿದೆ. ಇದೀಗ ಹರಿಯಾಣ ರಾಜಕೀಯವು ಅಭ್ಯರ್ಥಿಗಳ ಪಕ್ಷಾಂತರ ವಿಚಾರವಾಗಿ ಸದ್ದು ಮಾಡುತ್ತಿದೆ. ಹೌದು, ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೆ ಎಎಪಿ ನಾಯಕರೊಬ್ಬರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಎಎಪಿಯು ಹಿನ್ನಡೆ ಅನುಭವಿಸಬೇಕಾಗಿದೆ.

ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೇ ಹರಿಯಾಣದಲ್ಲಿ ಸ್ವತಂತ್ರವಾಗಿ ಚುನಾವಣೆ ಸಂಬಂಧ ಪ್ರಚಾರದಲ್ಲಿ ತೊಡಗಿದ್ದ ಆಮ್ ಆದ್ಮಿ ಪಕ್ಷ (ಎಎಪಿ) ಭಾರೀ ಮುಖಭಂಗ ಉಂಟಾಗಿದೆ. ಏಕಂದರೆ ಎಎಪಿ ನಾಯಕ ಫರಿದಾಬಾದ್ ಕ್ಷೇತ್ರದ ಪ್ರವೇಶ್ ಮೆಹ್ತಾ ಅವರು ಶನಿವಾರ ರಾಜ್ಯ ಆಡಳಿತಾರೂಢ ಪಕ್ಷ ಬಿಜೆಪಿಗೆ ಅಪಾರ ಕಾರ್ಯಕರ್ತರ ಸಮೇತ ಬಿಜೆಪಿಗೆ ಸೇರಿದರು.

AAP Shocked in Haryana Faridabad AAP Candidate Parvesh Mehta Joins BJP Ahead Assembly Election

ಬಿಜೆಪಿ ಕೇಂದ್ರ ಸಚಿವ ಮತ್ತು ಫರಿದಾಬಾದ್ ಸಂಸದ ಕೃಷ್ಣ ಪಾಲ್ ಗುರ್ಜರ್ ಸೇರಿದಂತೆ ಹರಿಯಾಣದ ಬಿಜೆಪಿ ಹಿರಿಯ ನಾಯಕ ವಿಪುಲ್ ಗೋಯಲ್ ಹಾಗೂ ಕೇಸರಿ ಪಡೆಯ ಸ್ಥಳೀಯ ಮುಖಂಡರು ಪ್ರವೇಶ್ ಹಾಗೂ ಅವರ ಸಾವಿರಾರು ಬೆಂಬಲಿಗರನ್ನು ಸ್ವಾಗತಿಸಿ ಸೇರ್ಪಡೆ ಮಾಡಿಕೊಂಡರು.

ಸ್ವತಂತ್ರವಾಗಿ ಕಣಕ್ಕಿಳಿಸಿದ್ದ ಎಎಪಿ

ಕಾಂಗ್ರೆಸ್‌ ಜೊತೆಗೆ ಈ ಬಾರಿ ಎಎಪಿ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಹರಿಯಾಣದ ಒಟ್ಟು 90 ಕ್ಷತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಫರಿದಾಬಾದ್ ಕ್ಷೇತ್ರದ ಟಿಕೆಟ್ ಅನ್ನು ಪ್ರವೇಶ್ ಅವರಿಗೆ ನೀಡಿದ್ದ ಎಎಪಿಗೆ ಹಿನ್ನಡೆ ಆಗಿದೆ. ಈ ಪ್ರವೇಶ್ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿರುವುದ ಪಕ್ಷಕ್ಕೆ ರಾಜಕೀಯ ಹೊಡೆತ ಉಂಟು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಸೇರ್ಪಡೆ ಕುರಿತು ವಿಪುಲ್ ಗೋಯಲ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಮೇತ ಪ್ರವೇಶ್ ಅವರು ಇಂದು ಕೇಸರಿ ಪಡೆ ಪ್ರವೇಶಿಸಿದ್ದಾರೆ. ಅವರನ್ನು ನಮ್ಮ ನಾಯಕರು ಸ್ವಾಗತಿಸಿದ್ದಾರೆ ಎಂದು ಖಚಿತಪಡಿಸಿದರು.

ಪ್ರವೇಶ್ ಅವರು ಬಿಜೆಪಿ ಕುಟುಂಬದ ಸದಸ್ಯರಾಗಿದ್ದಕ್ಕೆ ಅಭಿನಂದನೆ. ಅವರ ಸಮ್ಮುಖದಲ್ಲಿ ನಾನವು ಈ ಫರಿದಾಬಾದ್ ಕ್ಷೇತ್ರದಲ್ಲಿ ಐತಿಹಾಸಿಕ ವಿಜಯ ಸಾಧಿಸುತ್ತೇವೆ. ದಾಖಲೆ ಬರೆಯುವುದು ಮಾತ್ರವಲ್ಲದೇ, ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಮೂಲಕ ಹರಿಯಾಣದಲ್ಲಿ ಬಿಜೆಪಿ ಮೂರನೇ ಭಾರಿಗೆ ಸರ್ಕಾರ ರಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರವೇಶ್ ಮೆಹ್ತಾ ಯಾರು? ಬಿಜೆಪಿ ಜತೆ ಸಂಬಂಧ ಇತ್ತಾ?

ಎಎಪಿಯಲ್ಲಿ ಟಿಕೆಟ್ ಪಡೆದು ಇದೀಗ ಬಿಜೆಪಿ ಸೇರಿರುವ ನಾಯಕ ಪ್ರವೇಶ್ ಮೆಹ್ತಾ ಅವರಿಗೆ ಬಿಜೆಪಿಯ ಹಿನ್ನೆಲೆ ಇದೆ. ಏಕೆಂದರೆ ಅವರು ಸುಮಾರು ಎರಡು ದಶಕಗಳ ಕಾಲ ಬಿಜೆಪಿಯಲ್ಲಿದ್ದವರು. ಸರಿಯಾಗಿ 10 ವರ್ಷಗಳ ಹಿಂದೆ (2014) ವಿಧಾನಸಭೆಗೆ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಅವರು ಪಕ್ಷ ತೊರೆದಿದ್ದರು. ತದನಂತರ ಅವರು ಐಎನ್‌ಎಲ್‌ಡಿಗೆ ಸೇರಿದರು. ಅಲ್ಲಿ ರಾಜಕೀಯ ಗೆಲವು ಸಿಗದ ಬಳಿಕ ಅವರು ಕಳೆದ ಮೂರುವರ್ಷಗಳಿಂದ ಎಎಪಿಯ ನಾಯಕರಾಗಿದ್ದರು. ಇದೀಗ ಮತ್ತೆ ಗೂಡಿಗೆ ಮರಳಿದ್ದಾರೆ

ಸದ್ಯ ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೇ ಈ ಬಾರಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಎಎಪಿಯನ್ನು ರಾಜಕೀಯವಾಗಿ ಎದರಿಸಲು ಪ್ಲಾನ್ ಮಾಡಿಕೊಂಡಿದೆ. ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ತಲುಪಲು ಕಾಂಗ್ರೆಸ್ ಅಥವಾ ಬಿಜೆಪಿಯು ಚುನಾವಣೆ ಬಳಿಕ ಎಎಪಿಯನ್ನು ಮತ್ತೆ ಅಲುಗಾಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹರಿಯಾಣದ ಎಲ್ಲ 90 ಸೀಟುಗಳಿಗೆ ಇದೇ ಅಕ್ಟೋಬರ್ 05 ರಂದು ಮತದಾನ ನಡೆದು, ಅ.8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+