ಹಾಲು ತರಲು ಹೋದ 15ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹಾಲಿನ ವ್ಯಾಪಾರಿ
ಗುರುಗ್ರಾಮ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 15 ವರ್ಷದ ಬಾಲಕಿಯನ್ನು ಅಪಹರಿಸಿ, ಥಳಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಶುಕ್ರವಾರ ನಡೆದಿದ್ದು ಇಬ್ಬರು ವ್ಯಕ್ತಿಗಳಿಗಾಗಿ ಶೋಧ ನಡೆದಿದೆ.
ಅಪ್ರಾಪ್ತ ಬಾಲಕಿಯನ್ನು ಆಕೆಯ ಕುಟುಂಬಸ್ಥರು ಹಾಲು ಖರೀದಿಸಲು ಕಳುಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಡೈರಿಗೆ ಹೋಗುವ ದಾರಿಯಲ್ಲಿ ಮಾರುತಿ ಕುಂಜ್ ಬಳಿ ಹಾಲು ಮಾರಾಟಗಾರ ಬಾಲಕಿಯನ್ನು ತಡೆದಿದ್ದಾನೆ. ಅವನು ಅವಳನ್ನು ಬಲವಂತವಾಗಿ ತನ್ನ ಬೈಕ್‌ನಲ್ಲಿ ಕೂರಿಸಿ ಭೋಂಡ್ಸಿ ಗ್ರಾಮದ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಬಳಿಕ ಬಾಲಕಿ ಮೇಲೆ ಸ್ನೆಹಿತನೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾನೆ.

ಸಂತ್ರಸ್ತೆ ವಿರೋಧಿಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಘೋರ ಕೃತ್ಯ ಎಸಗಿದ ನಂತರ, ಇಬ್ಬರೂ ವ್ಯಕ್ತಿಗಳು ತಮ್ಮ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಏಕಾಂತ ಪ್ರದೇಶದಲ್ಲಿ ಬಾಲಕಿಯನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾರೆ.
ಹುಡುಗಿ ಮನೆಗೆ ವಾಪಾಸ್ ಬಾರದ ಕಾರಣ ಹಲವಾರು ಗಂಟೆಗಳ ನಂತರ, ಆಕೆಯ ಕುಟುಂಬವು ಹುಡುಕಾಟವನ್ನು ಪ್ರಾರಂಭಿಸಿದೆ. ಬಾಲಕಿ ತಮ್ಮ ಕಾಲೋನಿಯ ಬೀದಿ ಮೂಲೆಯಲ್ಲಿ ಇರುವುದನ್ನು ಕುಟುಂಬ ಕಂಡಿದೆ. ಅವಳು ಆತಂಕದಿಂದ ಕಾಣಿಸಿಕೊಂಡಿದ್ದಕ್ಕೆ ಕುಟುಂಬಕ್ಕೆ ಅನುಮಾನ ಬಂದಿದೆ. ಅವಳ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ಕಂಡ ಕುಟುಂಬ ಪೊಲೀಸ್ ದೂರು ನೀಡಿದೆ. ಘಟನೆಯ ಬಗ್ಗೆ ತಿಳಿದ ಬಾಲಕಿಯ ತಾಯಿ ಶುಕ್ರವಾರ ಭೋಂಡ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದ ಬಳಿಕ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಆರೋಪಿಗಳಾದ ಜಸ್ಬೀರ್ ಮತ್ತು ವಿನೋದ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಸೆಕ್ಷನ್ 6 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಕೂಡಲೇ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿ ವೈದ್ಯಕೀಯ ವೃತ್ತಿಪರರು ಆಕೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆರೋಪಿಗಳು ಸದ್ಯ ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಬ್ಬರನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ವಿಷಯದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ವಿಜಯನಗರದಲ್ಲಿ ಬಾಲಕಿ ಮೇಲೆ ಅತ್ಯಾಚಾರ
ವಿಜಯನಗರ ಜಿಲ್ಲೆಯ ಗಂಟ್ಯಡ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 16 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಗರ್ಭ ಧರಿಸಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯೊಬ್ಬನಿಗೆ ವಿಜಯನಗರದ ವಿಶೇಷ ಪೋಕ್ಸೊ ನ್ಯಾಯಾಲಯ ಎಪ್ರಿಲ್ 22ರಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ಸಂತ್ರಸ್ತೆ 2020 ಮತ್ತು 2021ರಲ್ಲಿ ಕರು ಚಿನ್ನ ರಾವ್ ಅವರಿಂದ ಟ್ಯೂಷನ್ ತೆಗೆದುಕೊಂಡಿದ್ದರು. ಚಿನ್ನಾರಾವ್ ಆಕೆಯನ್ನು ಅನುಚಿತವಾಗಿ ಮುಟ್ಟುತ್ತಿದ್ದ. ಬಳಿಕ ವಿಶೇಷ ತರಗತಿಗಳ ನೆಪದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದು, ಅತ್ಯಾಚಾರ ನಡೆದಿರುವ ಬಗ್ಗೆ ಯಾರಿಗಾದರೂ ಹೇಳಿದರೆ ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.












Click it and Unblock the Notifications