ಆಂಧ್ರಪ್ರದೇಶದ ತಿರುಪತಿಯಲ್ಲಿ ಹಳಿತಪ್ಪಿದ ಪದ್ಮಾವತಿ ಎಕ್ಸ್‌ಪ್ರೆಸ್, ಪ್ರಾಣಹಾನಿಯಿಲ್ಲ

ಪಾಟ್ನಾ, ಜುಲೈ. 19: ತಿರುಪತಿ ಮತ್ತು ಸಿಕಂದರಾಬಾದ್ ನಡುವಿನ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿನ ಕೋಚ್ ಆಂಧ್ರಪ್ರದೇಶದ ತಿರುಪತಿಯಲ್ಲಿ ಬುಧವಾರ ಹಳಿತಪ್ಪಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

A coach of Padmavati Express Derails In Andhra Pradeshs Tirupati

ಬುಧವಾರ ಸಂಜೆ ಘಟನೆ ನಡೆದಿದ್ದು, ಈ ವೇಲೆ ತಿರುಪತಿ ರೈಲು ನಿಲ್ದಾಣದಲ್ಲಿ ಪದ್ಮಾವತಿ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಪ್ರಯಾಣಿಕರು ಇರಲಿಲ್ಲ. ಬೋಗಿಗಳನ್ನು ರೈಲಿಗೆ ಜೋಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ರೈಲ್ವೇ ಸಿಬ್ಬಂದಿ ಬೋಗಿಗಳನ್ನು ಹಳಿಗಳಿಗೆ ಮರಳಿ ತರಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ ತಿರುಪತಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ 6 ರಲ್ಲಿ ಶಂಟಿಂಗ್ ಪ್ರಕ್ರಿಯೆಯಲ್ಲಿ ಹಳಿ ತಪ್ಪಿದೆ. ಈ ಘಟನೆಯಿಂದಾಗಿ ನಿಲ್ದಾಣದಿಂದ ಹೊರಡುವ ಹಲವಾರು ರೈಲುಗಳ ವಿಳಂಬವಾಗಿದೆ ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+