Get Updates
Get notified of breaking news, exclusive insights, and must-see stories!

ನಿಲ್ಲಿಸಿದ್ದ ಕಾರಿನಲ್ಲಿ ಸಿಕ್ಕ 52 ಕೆ.ಜಿ ಚಿನ್ನ, ₹11 ಕೋಟಿ ಹಣದ ಹಿಂದಿದೆ ಕರಾಳ ಸತ್ಯ

ಮಧ್ಯಪ್ರದೇಶದ ಭೋಪಾಲ್‌ನ ಹೊರವಲಯದಲ್ಲಿ ಇತ್ತೀಚೆಗೆ ಅನಾಥವಾಗಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ ಮತ್ತು ಬರೋಬ್ಬರಿ 11 ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು, ಅಷ್ಟೊಂದು ಹಣ, ಚಿನ್ನವನ್ನು ಕಾರಿನಲ್ಲಿ ಯಾಕೆ, ಯಾರು ಬಿಟ್ಟು ಹೋದರು, ಎನ್ನುವ ಪ್ರಶ್ನೆ ಸಹಜವಾಗಿತ್ತು. ಈ ಪ್ರಕರಣವನ್ನು ಕೆದಕುತ್ತಾ ಹೋದಂತೆ ಅನೇಕ ಕರಾಳ ಸಂಗತಿಗಳು ಬಯಲಾಗಿವೆ.

ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ (ಐಟಿ), ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಲೋಕಾಯುಕ್ತ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು ಎಲ್ಲರ ತನಿಖೆಗಳು ಇದೀಗ ಮಧ್ಯಪ್ರದೇಶ ಸಾರಿಗೆ ಇಲಾಖೆಯಲ್ಲಿ ಮಾಜಿ ಕಾನ್‌ಸ್ಟೆಬಲ್ ಆಗಿದ್ದ ಸೌರಭ್ ಶರ್ಮಾರತ್ತ ಬೊಟ್ಟು ಮಾಡುತ್ತಿವೆ.

52 kg gold rs 11 crore cash found madhya pradesh case explained

ಎನ್‌ಡಿಟಿವಿ ವರದಿ ಪ್ರಕಾರ, ಸೌರಭ್ ಶರ್ಮಾ ಮಹಾ ಭ್ರಷ್ಟಾಚಾರಿ ಡಿಸೆಂಬರ್ 2024 ರಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದ ಸಂದರ್ಭದಲ್ಲಿ ಸೌರಭ್ ಶರ್ಮಾ ಬಳಿ ನಗದು, ಆಭರಣಗಳು ಮತ್ತು ಆಸ್ತಿ ದಾಖಲೆಗಳು ಸೇರಿದಂತೆ ಸುಮಾರು ₹8 ಕೋಟಿ ಮೌಲ್ಯದ ಆಸ್ತಿ ಇರುವುದು ಪತ್ತೆಯಾಗಿತ್ತು. ಬಳಿಕ ಭೋಪಾಲ್ ಬಳಿಯ ಮೆಂಡೋರಿ ಕಾಡಿನಲ್ಲಿ ಅನಾಥವಾಗಿ ನಿಂತಿದ್ದ ಟೊಯೋಟಾ ಕಾರಿನಲ್ಲಿ 52 ಕೆ.ಜಿ ಚಿನ್ನ ಮತ್ತು 11 ಕೋಟಿ ರೂಪಾಯಿ ಹಣ ಸಿಕ್ಕಿತ್ತು.

ಈ ಪ್ರಕರಣದ ಜಾಡು ಹಿಡಿದ ಅಧಿಕಾರಿಗಳು ಇದೀಗ ಇಡೀ ಮಧ್ಯಪ್ರದೇಶದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳ ವ್ಯಾಪಕ ಭ್ರಷ್ಟಾಚಾರ ಜಾಲವನ್ನು ಪತ್ತೆಹಚ್ಚಿದ್ದಾರೆ.

ಸೌರಭ್ ಶರ್ಮಾರಿಂದ ವಶಪಡಿಸಿಕೊಂಡಿರುವ ಆಸ್ತಿ ಮೌಲ್ಯದಲ್ಲಿ ನ್ಯಾಯಾಲಯದ ದಾಖಲೆಗಳು ಲೋಕಾಯುಕ್ತ ವಶಪಡಿಸಿಕೊಂಡ ಆಸ್ತಿಗಳ ವರದಿಯಲ್ಲಿ ವ್ಯತ್ಯಾಸಗಳಿರುವುದು ಕಂಡು ಬಂದಿದೆ. ಆರಂಭದಲ್ಲಿ 7.98 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿತ್ತು, ಆದರೆ ಡಿಎಸ್‌ಪಿ ಹಂತದ ಅಧಿಕಾರಿಯೊಬ್ಬರು ಆಭರಣ ಮತ್ತು ಬೆಳ್ಳಿಯೊಂದಿಗೆ ₹55 ಲಕ್ಷ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ತನಿಖೆಯಲ್ಲಿ ನಿರ್ಲಕ್ಷ್ಯವೋ ಅಥವಾ ಬೇಕಂತಲೇ ಮಾಡಿರುವ ತಪ್ಪು ವರದಿಯೋ ಎನ್ನುವ ಪ್ರಶ್ನೆಗೆ ಕಾರಣವಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅನೇಕ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇದೀಗ ತನಿಖೆ ನಡೆಸಲು ನಿರ್ಧರಿಸಿದೆ.

ಕಾರಿನ ಮಾಲೀಕ ಯಾರು?

ಹಲವು ಸಂಸ್ಥೆಗಳು ತನಿಖೆ ನಡೆಸುತ್ತಿದ್ದು, ಕಾಡಿನಲ್ಲಿ ಅನಾಥವಾಗಿ ಸಿಕ್ಕಿರುವ ಕಾರಿನಲ್ಲಿದ್ದ ಚಿನ್ನ ಮತ್ತು ಹಣವನ್ನು ಪಡೆಯಲು ಈವರೆಗೂ ಯಾರೂ ಕೂಡ ಮುಂದೆ ಬಂದಿಲ್ಲ. ಆದರೆ ಪತ್ತೆಯಾಗಿರುವ ಕಾರು ಸೌರಭ್ ಶರ್ಮಾ ಆಪ್ತನಾದ ಚೇತನ್ ಸಿಂಗ್ ಗೌರ್ ಎನ್ನುವವರ ಹೆಸರಿನಲ್ಲಿ ನೊಂದಾಯಿಸಲಾಗಿದೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಶರ್ಮಾ ಆರೋಪವನ್ನು ನಿರಾಕರಿಸಿದ್ದಾರೆ. ಚಾಲಕನಿಗೆ ವಾಹನವನ್ನು ಕೊಟ್ಟಿದ್ದೆ ಎಂದು ಹೇಳಿದ್ದಾರೆ.

ಲೋಕಾಯುಕ್ತ ದಾಳಿ ನಡೆದ ರಾತ್ರಿ ಶರ್ಮಾ ಅವರ ಮನೆಯ ಬಳಿಕ ಕಾರು ಇರುವುದನ್ನು ಸಿಸಿಟಿವಿ ದೃಶ್ಯಗಳು ದೃಢಪಡಿಸಿವೆ. ಆದರೆ ಲೋಕಾಯುಕ್ತರು ಈ ವಾಹನವನ್ನು ತಡೆಯಲು ವಿಫಲವಾದರು, ಲೋಕಾಯುಕ್ತ ದಾಳಿ ವೇಳೆಯೇ ಕಾರು ಮನೆಯಿಂದ ಹೊರಹೋಗಿದೆ ಎನ್ನಲಾಗಿದೆ.

ತನಿಖೆ ಈಗ ಮಧ್ಯಪ್ರದೇಶವನ್ನು ಮೀರಿ ವ್ಯಾಪಿಸಿದೆ. ಅಕ್ರಮ ಚಿನ್ನದ ಕಳ್ಳಸಾಗಾಣೆ ಜಾಲದ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ದುಬೈ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರೇಲಿಯಾ ಜೊತೆಗೈ ಶರ್ಮಾರ ಹಣಕಾಸಿನ ವ್ಯವಹಾರಗಳನ್ನು ಹೊಂದಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. 52 ಜಿಲ್ಲೆಗಳ ಸಾರಿಗೆ ಅಧಿಕಾರಿಗಳು ಒಟ್ಟು 100 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಪತ್ರ ಬರೆದಿದ್ದು, ಇಡಿ ಮತ್ತು ಐಟಿ ಇಲಾಖೆ ವಿಶೇಷವಾಗಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+