ಗುರ್ಗಾಂವ್: ಚರಂಡಿಯಲ್ಲಿ ಬಿದ್ದು ಮೂವರ ದುರಂತ ಅಂತ್ಯ
ಗುರ್ಗಾಂವ್, ಸೆಪೆಂಬರ್ 30: ಹರ್ಯಾಣದ ಗುರ್ಗಾಂವ್ ನಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರಲ್ಲಿ ಮೂವರು ಸಾವಿಗೀಡಾದ ಘಟನೆ ಇಂದು(ಸೆ.30) ನಡೆದಿದೆ. ಇನ್ನೋರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆದು ಮೂಲಗಳು ತಿಳಿಸಿವೆ.
ಇಲ್ಲಿನ ಜೆ ಎನ್ ಇಲೆಕ್ಟ್ರಾನಿಕ್ ಲಿಮಿಟೆಡ್ ನಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ವಿಷಯುಕ್ತ ಗಾಳಿ ಸೇವಿಸಿದ ಪರಿಣಾಮ ಮೂವರು ಸಾವಿಗೀಡಾಗಿದ್ದಾರೆ.

ಸಾವಿಗೀಡಾದವರನ್ನು ರಿಂಕು, ರಾಜಕುಮಾರ್, ನಿನ್ನ ಎಂದು ಗುರುತಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಬಿನಿಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊದಲು ಚರಂಡಿಗೆ ಬಿದ್ದಿದ್ದ ಬಿನಿಶ್ ನನ್ನು ರಕ್ಷಿಸಲು ಹೋದ ಮೂವರೂ ದುರಂತ ಅಂತ್ಯ ಕಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications