Air India: 141 ಜನರ ಜೀವ 3 ಗಂಟೆ ಕೈಯಲ್ಲಿ, ನರಳಾಟ - ಕಿರುಚಾಟದ ಭಯಾನಕ ಅನುಭವ!
ಭಾರತವು ಇಂದು ಬಹುದೊಡ್ಡ ವಿಮಾನ ದುರಂತದಿಂದ ಪಾರಾಗಿದೆ. ಭಾರತದ 141 ಜನರು ಜೀವವವನ್ನು ಬರೋಬ್ಬರಿ ಮೂರು ತಾಸು ಕೈಯಲ್ಲಿ ಹಿಡಿದುಕೊಂಡೇ ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾರೆ. ಆ ಮೂರು ಗಂಟೆಗಳ ಭಯಾನಕ ಅನುಭವಗಳನ್ನು ವಿಮಾನದಲ್ಲಿದ್ದ ಪ್ರಯಾಣಿಕರು ಹಂಚಿಕೊಂಡಿದ್ದಾರೆ. ಇತಿಹಾಸದಲ್ಲೇ ಕಂಡು ಕೇಳರಿಯದ ದುರಂತಕ್ಕೆ ಇದು ಭಾರತ ಸಾಕ್ಷಿಯಾಗಬೇಕಿತ್ತು. ಆದರೆ, ಆ ಭಾರೀ ಅನಾಹುತ ತಪ್ಪಿದೆ. ಮೂರು ಗಂಟೆಗಳ ನರಕಯಾತೆಯ ಅನುಭವ ಕೇಳಿದರೆ..
ಭಾರತದಿಂದ ಶಾರ್ಜಾಕ್ಕೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಏಕಾಏಕಿ ಭಾರೀ ಎಚ್ಚರಿಕೆ ಬಂತು. ಈ ಎಚ್ಚರಿಕೆಯ ಸಂದೇಶವೇ ಹಲವರ ಬೆವರು ಇಳಿಸಿತ್ತು. ಭಾರೀ ಅವಘಡ ಸಂಭವಿಸಬಹುದು. ಇದೇ ನಮ್ಮ ಕೊನೆಯ ಪಯಣ ನಾವು ಉಳಿಯುವುದೇ ಇಲ್ಲ ಎಂದೇ ಆ 141 ಜನ ಭಾವಿಸಿದ್ದರು. ಆ ರೀತಿ ಇತ್ತು ಆ ಭಯಾನಕ ಅನುಭವ. ಈ 141 ಜನರಿಗೂ ಈಗ ಎರಡನೇ ಜನ್ಮದಂತೆಯೇ ಭಾಸವಾಗುತ್ತಿದೆ. ವಿಮಾನದಲ್ಲಿ ಹತ್ತಿದವರಲ್ಲಿ ಇದೇ ಮೊದಲ ಬಾರಿ ವಿಮಾನವನ್ನು ಹತ್ತಿದವರೂ ಇದ್ದರು. ಅವರಿಗಂತೂ ಇದು ಅತ್ಯಂತ ಭಯಾನಕವಾದ ಅನುಭವವೇ ಆಗಿತ್ತು ಎಂದು ಹೇಳಲಾಗುತ್ತಿದೆ.

ಮೂರು ತಾಸು ನರಕವಾದ ವಿಮಾಣ: ಭಾರತದಿಂದ ಶಾರ್ಜಾಕ್ಕೆಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮೊದಲ ಸಂಭ್ರಮ ಮನೆ ಮಾಡಿತ್ತು. ಆದರೆ, ಕೆಲವೇ ನಿಮಿಷಯಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ವಿಮಾನದಲ್ಲಿ ತುರ್ತು ಅಲರಾಮ್ ಬಟನ್ ಪ್ರೆಸ್ ಆಗುತ್ತಿದ್ದಂತೆಯೇ ಪ್ರಯಾಣಿಕರು ಕಂಗಾಲಾಗಿ ಜೋರು ಜೋರಾಗಿ ಕಿರುಚಾಡಲು ಪ್ರಾರಂಭಿಸಿದರು. ವಿಮಾನದಲ್ಲಿದ್ದ ಸಣ್ಣ ಮಕ್ಕಳು ಜೋರಾಗಿ ಅಳಲು ಪ್ರಾರಂಭಿಸಿದರೆ, ದೊಡ್ಡವರು ಆತಂಕದಿಂದ ಕಂಗಾಲಾದರು. ವಿಮಾನದಲ್ಲಿದ್ದ 141 ಜನರದ್ದು ಸಹ ತ್ರಿಶಂಕು ಸ್ಥಿತಿ. ಅಲ್ಲಿಂದ ಕೆಳಗೆ ಇಳಿಯಲು ಸಾಧ್ಯವಿಲ್ಲ. ಆ ಮೂರು ಗಂಟೆಗಳ ಕಾಲ ಅಕ್ಷರಶಃ ನರಕವನ್ನೇ ಅನುಭವಿಸಿದ್ದಾರೆ.
ವಿಮಾನದಲ್ಲಿ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸುವ ಉದ್ದೇಶದಿಂದ ಪೈಲೆಟ್ ಬರೋಬ್ಬರಿ ಮೂರು ತಾಸು ವಿಮಾನವನ್ನು ಆಕಾಶದಲ್ಲೇ ಗಿರಕಿ ಹೊಡೆಸಿದ್ದಾರೆ. ಈ ಮುಂಜಾಗ್ರತಾ ಕ್ರಮದಿಂದ ಬಹುದೊಡ್ಡ ದುರಂತ ತಪ್ಪಿದೆ. ಆದರೆ, ಈ ಪಯಣವನ್ನು ಖಂಡಿತವಾಗಿಯೂ ಜೀವಮಾನದಲ್ಲಿ ಮರೆಯೊಲ್ಲ ಅಂತ ಪ್ರಯಾಣಿಕರು ಹೇಳುತ್ತಿದ್ದಾರೆ.
ನರಕ ಸದೃಶ್ಯವಾದ ವಿಮಾನ: ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಜನ ಅಕ್ಷರಶಃ ಭಯಭೀತರಾದರು. ನಾವು ಇನ್ನು ಉಳಿಯುವುದೇ ಇಲ್ಲ. ಇದೇ ನಮ್ಮ ಕೊನೆಯ ಪಯಣ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ವಿಮಾನದಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಮೇಲೆ ಈ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿ ಪೈಲೆಟ್ ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಏರ್ ಇಂಡಿಯಾ ಪ್ಲೈಟ್ ಸಮಸ್ಯೆ
ಏರ್ ಇಂಡಿಯಾದ ವಿಮಾನ IX613 ಶುಕ್ರವಾರ 141 ಜನ ಪ್ರಯಾಣಿಕರನ್ನು ಹೊತ್ತು ಸಂಜೆ ವೇಳೆ 5:45ಕ್ಕೆ ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಿಂದ ತನ್ನ ಟೇಕಾಫ್ ಪ್ರಾರಂಭ ಮಾಡಿತ್ತು. ಆದರೆ, ವಿಮಾನ ಹಾರಾಟವಾಗಿ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ತಾಂತ್ರಿಕ ದೋಷದಿಂದ ವಿಮಾನದ ಸಿಬ್ಬಂದಿ ತುರ್ತು ಎಮರ್ಜನ್ಸಿ ಘೋಷಿಸಿದ್ದಾರೆ. ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಅಲರ್ಟ್ ಆದರು.
ಮೂರು ಗಂಟೆಗಳಿಗೂ ಹೆಚ್ಚು ಕಾಲ ಆಕಾಶದಲ್ಲೇ ವಿಮಾನ ಗಿರಗಿರ ಎಂದು ಗಿರಕಿ ಹಾಕಿದೆ. ಆ ಮೂರು ತಾಸುಗಳನ್ನು ವಿಮಾನದಲ್ಲಿ 141 ಜನ ಜೀವವನ್ನು ಕೈಯಲ್ಲೇ ಹಿಡಿದಿದ್ದಾರೆ. ಈ ಬೆಳವಣಿಗೆಗಳ ನಂತರ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸೇಫ್ ಲ್ಯಾಂಡಿಂಗ್ ಆಗಿದೆ. ಅಷ್ಟು ಜನ ಎರಡನೇ ಜನ್ಮ ಪಡೆದಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications