Specials Trains: ಕರ್ನಾಟಕದಿಂದ ಓಡಲಿವೆ ಬೇಸಿಗೆ ವಿಶೇಷ ರೈಲುಗಳು: ಎಲ್ಲಿಗೆ? ವೇಳಾಪಟ್ಟಿ, ವಿವರ

ಹುಬ್ಬಳ್ಳಿ, ಮೇ 25: ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಈ ಮಾರ್ಗದಲ್ಲಿ ಹೆಚ್ಚುವರಿ ರೈಲು ಟ್ರಿಪ್ ಹೊಡೆಯಲು ಪೂರ್ವ ಮಧ್ಯ ರೈಲ್ವೆಯು ಸೂಚಿಸಿದೆ. ಈ ಮೂಲಕ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲಾಗುವುದು ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ಹಾಗೂ ಮುಜಾಫರ್ಪುರ ನಿಲ್ದಾಣಗಳ ಮಧ್ಯೆ ಎರಡು ಹೆಚ್ಚುವರಿ ಟ್ರಿಪ್ ಗಳನ್ನು ಓಡಿಸಲು ಪೂರ್ವ ಮಧ್ಯ ರೈಲ್ವೆಯು ಸೂಚನೆ ನೀಡಿದೆ ಎಂದರು. ಹಾಗಾದರೆ ಯಾವ ರೈಲು ಯಾವ ದಿನದಂದು ಹೆಚ್ಚುವರಿ ಟ್ರಿಪ್ ಹೊಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.

South Western Railways Run Sepcial Summer Trains From Bengaluru Karnataka Check Schedule timings

ಮುಜಾಫರ್‌ಪುರ-ಯಶವಂತಪುರ-ಮುಜಾಫರ್‌ಪುರ ಬೇಸಿಗೆ ವಿಶೇಷ ರೈಲು

* ಮುಜಾಫರ್ಪುರ-ಯಶವಂತಪುರ-ಮುಜಾಫರ್‌ಪುರ ಬೇಸಿಗೆ ವಿಶೇಷ ರೈಲು (ಸಂಖ್ಯೆ 05271) ಇಂದು ಸಹ ಪ್ರಯಾಣ ಬೆಳೆಸಿದೆ. ಮುಂದೆ ಮೇ 31ರಂದು 15:30 ಗಂಟೆಗೆ ಮುಜಾಫರ್‌ಪುರದಿಂದ ಹೊರಟು ಭಾನುವಾರ 19:00 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ.

* ಯಶವಂತಪುರದಿಂದ ರೈಲು (ಸಂಖ್ಯೆ 05272) ಮೇ 27 ಮತ್ತು ಜೂನ್ 3 ರಂದು ಸೋಮವಾರ ಬೆಳಗ್ಗೆ 07:30 ಗಂಟೆಗೆ ಪ್ರಯಾಣ ಆರಂಭಿಸಿ ಬುಧವಾರ ಮಧ್ಯಾಹ್ನ 12:00 ಗಂಟೆಗೆ ಮುಜಾಫರ್‌ಪುರ ನಿಲ್ದಾಣ ತಲುಪಲಿದೆ.

ರೈಲು ನಿಲುಗಡೆ ಮಾಹಿತಿ

ಈ ವಿಶೇಷ ರೈಲು ಮಾರ್ಗದುದ್ದಕ್ಕೂ ಹಾಜಿಪುರ , ಪಾಟಲಿಪುತ್ರ, ಅರಾ, ಬಕ್ಸಾರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್ರಾಜ್ ಚಿಯೋಕಿ, ಮಾಣಿಕ್ಪುರ, ಸತ್ನಾ, ಕಟ್ನಿ, ಜಬಲ್ಪುರ್, ನರಸಿಂಗಪುರ, ರಾಮಗುಂಡಂ, ಕಾಜಿಪೇಟ್, ಜಂಗಾಂವ್, ಕಾಚಿಗುಡ, ಶಾದ್ನಗರ್, ಜಡ್ ಚರ್ಲಾ, ಮಹಬೂಬ್ ನಗರ್, ಗದ್ವಾಲ್, ಪಿಪರಿಯಾ, ಇಟಾರ್ಸಿ, ನಾಗ್ಪುರ, ಬಲ್ಹಾರ್ಷಾ, ಸಿರ್ಪುರ್ ಕಾಖಜನಗರ್, ಗುತ್ತಿ, ಅನಂತಪುರ & ಧರ್ಮಾವರಂ, ಕರ್ನೂಲ್ ಸಿಟಿ, ಡೋನ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

South Western Railways Run Sepcial Summer Trains From Bengaluru Karnataka Check Schedule timings

ಎಸ್ಎಂವಿಟಿ ಬೆಂಗಳೂರು-ಭುವನೇಶ್ವರ ವಿಶೇಷ ರೈಲು

ಅದೇ ರೀತಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಬೇಸಿಗೆ ವೇಳೆ ಪ್ರಯಾಣಿಸುವ ಹೆಚ್ಚುವರಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್-ಭುವನೇಶ್ವರ ಮತ್ತು ಎಸ್ಎಂವಿಟಿ ಬೆಂಗಳೂರು-ಸಂಬಲ್‌ಪುರ ನಿಲ್ದಾಣಗಳ ಮಧ್ಯೆ ಒಂದು ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ನೈಋತ್ಯ ರೈಲ್ವೆಯು (SWR) ಓಡಿಸಲಿದೆ.

* ಭುವನೇಶ್ವರ ಮತ್ತು ಎಸ್ಎಂವಿಟಿ ಬೆಂಗಳೂರು ಮಧ್ಯೆ ಬೇಸಿವೆ ವಿಶೇಷ ರೈಲುಗಳ (ಸಂಖ್ಯೆ 06271/06272) ಪೈಕಿ ಸಂಖ್ಯೆ 06271 ಸಂಖ್ಯೆ ರೈಲು ಮೇ 31 ರಂದು ಮಧ್ಯರಾತ್ರಿ 00:10 ಗಂಟೆಗೆ ರಾಜಧಾನಿಯಿಂದ ಹೊರಟು ಮರುದಿನ ಬೆಳಗ್ಗೆ 04:00 ಗಂಟೆಗೆ ಭುವನೇಶ್ವರ ಮುಟ್ಟಲಿದೆ.

* ಮರಳಿ ಭೂವನೇಶ್ವರದಿಂದ ರೈಲು (ಸಂಖ್ಯೆ 06272) ಜೂನ್ 2ರಂದು ಪ್ರಯಾಣ ಆರಂಭಿಸಿ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಆಗಮಿಸಲಿದೆ ಎಂದು ಕನಮಡಿ ತಿಳಿಸಿದರು.

ರೈಲು ನಿಲ್ಲುವ ನಿಲ್ದಾಣಗಳು ವಿವರ

ಈ ಎರಡು ಮಾರ್ಗಗಳ ಮಧ್ಯೆ ಈ ವಿಶೇಷ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ ಮತ್ತು ಖುರ್ದಾ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.

ಬೆಂಗಳೂರು ಎಸ್ಎಂವಿಟಿ-ಸಂಬಲ್‌ಪುರ ವಿಶೇಷ ರೈಲು

* ಎಸ್ಎಂವಿಟಿ ಬೆಂಗಳೂರು-ಸಂಬಲ್‌ಪುರ-ಎಸ್ಎಂವಿಟಿ ಬೆಂಗಳೂರು ಮಾರ್ಗದಲ್ಲಿ ಸಮ್ಮರ್ ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ಹೆಚ್ಚುವರಿ ಟ್ರಿಪ್ ಹೊಡೆಯಲಿದೆ. ಎಸ್ಎಂವಿಟಿ ಬೆಂಗಳೂರಿನಿಂದ ರೈಲು (ಸಂಖ್ಯೆ 06279) ಜೂನ್ 7ರಂದು ಮಧ್ಯರಾತ್ರಿ 00:10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 05:00 ಗಂಟೆಗೆ ಸಂಬಲ್ಪುರಗೆ ತಲುಪಲಿದೆ.

* ಇನ್ನು ಸಂಬಲ್‌ಪುರದಿಂದ ಹೊರಡುವ ವಿಶೇಷ ರೈಲು (ಸಂಖ್ಯೆ 06280) ಜೂನ್ 8ರಂದು ಬೆಳಗ್ಗೆ 11:35 ಗಂಟೆಗೆ ಪ್ರಯಾಣ ಆರಂಭಿಸಿದೆ. ಮರುದಿನ 19:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಬರಲಿದೆ.

ರೈಲು ನಿಲುಗಡೆ ಎಲ್ಲೆಲ್ಲಿ?

ಈ ಎರಡು ರೈಲು ನಿಲ್ದಾಣಗಳ ಮಧ್ಯೆ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ , ರಾಜಮಂಡ್ರಿ, ದುವ್ವಾಡಾ, ಕೊತ್ತವಲಸ, ವಿಜಯನಗರಂ, ಬೊಬ್ಬಿಲಿ, ಪಾರ್ವತಿಪುರಂ, ರಾಯಗಡ, ಮುನಿಗುಡ, ಕೇಸಿಂಗಾ, ಟಿಟ್ಲಾಘರ್, ಬಾಲಂಗಿರ್ ಮತ್ತು ಬಾರ್ಘರ್ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ಸಾರ್ವಜನಿಕರು ಈ ವಿಶೇಷ ರೈಲು ಟ್ರಿಪ್‌ಗಳ ಸೌಲಭ್ಯ ಸದುಪೋಗ ಪಡೆಯಬೇಕು. ಅದಕ್ಕಾಗಿ ನೀವು ಬುಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+