ಹುಬ್ಬಳ್ಳಿಯಲ್ಲಿ ಪೂಜಾರಿಯ ಬರ್ಬರ ಹತ್ಯೆ
ಹುಬ್ಬಳ್ಳಿ, ಜುಲೈ, 21: ಈಶ್ವರನಗರದ ಶ್ರೀ ವೈಷ್ಣೋದೇವಿ ದೇವಸ್ಥಾನದ ಪೂಜಾರಿಯಾಗಿದ್ದ ದೇವೇಂದ್ರಪ್ಪಜ್ಜ ಹೊನ್ನಾಳಿ ಕುಸುಗಲ್ (60) ಎಂಬುವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ದೇವೇಂದ್ರಪ್ಪಜ್ಜ ಕುಸುಗಲ್ ಅವರನ್ನು ದೇವಸ್ಥಾನದ ಮುಂಭಾಗದಲ್ಲೇ ಹೊಡೆದು ಆರೋಪಿಗಳು ಪರಾರಿಯಾಗಿದ್ದು, ಕೂಡಲೇ ಸ್ಥಳೀಯರು ದೇವಪ್ಪಜ್ಜ ಅವರನ್ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪುಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೊಲೆ ನಡೆದ ಸ್ಥಳಕ್ಕೆ ಡಿಸಿಪಿಗಳಾದ ರವೀಶ್ ಹಾಗೂ ಮಹಾಲಿಂಗಪ್ಪ ನಂದಗಾವಿ ಭೇಟಿ ಪರಿಶೀಲನೆ ನಡೆಸಿದ್ದು, ಇನ್ನು ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಪೂಜಾರಿ ದೇವೇಂದ್ರಪ್ಪಜ್ಜ ಕುಸುಗಲ್ ಅವರು ಇಂದು (ಜುಲೈ 21) ನಡೆದ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದ ನಂತರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಕೊಲೆಯಾದ ದೇವೇಂದ್ರಪ್ಪಜ್ಜ ಅವರ ಮನೆ ಹುಬ್ಬಳ್ಳಿಯ ವಿದ್ಯಾನಗರದ ಲೋಕಪ್ಪನಹಕ್ಕಲದ ಬಳಿಯಿದೆ. ಸದ್ಯ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಘಟನೆಗೆ ಕಾರಣ ಏನೆಂಬ ಮಾಹಿತಿ ಇನ್ನೂ ತಿಳಿದುಬರಬೇಕಿದೆ.












Click it and Unblock the Notifications