NWKRTC: ಬಸ್‌ಗಳಲ್ಲಿ ನಗದು ರಹಿತ ಡಿಜಿಟಲ್ ವ್ಯವಸ್ಥೆ: ಮಾರ್ಚ್ 3ರಿಂದ ಎಲ್ಲ ಘಟಕಗಳಲ್ಲಿ ವಹೀವಾಟು ಪಾಕ್ಷಿಕ
ಹುಬ್ಬಳ್ಳಿ, ಫೆಬ್ರವರಿ 29: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯ ನಿಗಮಗಳ ಬಸ್‌ನಲ್ಲಿ ಸಹ ಡಿಜಿಟಲ್ ವ್ಯವಸ್ಥೆ ಪರಿಚಯಿಸಲಾಗುತ್ತದೆ. ಅಂದರೆ ಪ್ರಯಾಣಿಕರು ಟಿಕೆಟ್ ಗಾಗಿ ನಗದು ಹಣ ಜತೆಗೆ ಡಿಜಿಟಲ್ ಪಾವತಿ ವ್ಯವಸ್ಥೆ ಸಹ ಜಾರಿಗೆ ತರುವುದು ಆಗಿದೆ.
ಈ ಸಂಬಂಧ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಬಸ್ಸುಗಳಲ್ಲಿ ನಗದು ರಹಿತ UPI ವಹಿವಾಟುಗಳ ಮೂಲಕ ಟಿಕೆಟ್ ವಿತರಣೆಯನ್ನು ಪ್ರೋತ್ಸಾಹಿಸಲು ಮಾರ್ಚ್ 3 ರಿಂದ UPI ವಹಿವಾಟು ಪಾಕ್ಷಿಕವನ್ನು ಸಂಸ್ಥೆಯ ಎಲ್ಲ ವಿಭಾಗ, ಘಟಕಗಳಲ್ಲಿ ಆಚರಿಸಲಿದೆ.

ನಗರದು ರಹಿತ ಸೇವೆ ಉತ್ತೇಜನ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ಸಾರ್ವಜನಿಕ ಪ್ರಯಾಣಿಕರ ಸಂಚಾರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೇವೆ ಒದಗಿಸುವುದರ ಜೊತೆಗೆ ನಗದು ರಹಿತ ವ್ಯವಹಾರ ಉತ್ತೇಜಿಸಲಾಗುವುದು. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) ಟಿಕೆಟ್ ವಿತರಣೆಗೆ UPI ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ-ಗ್ರಾಮಾಂತರ ವಿಭಾಗದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು.
ಚಿಲ್ಲರೆ ಸಮಸ್ಯೆಗೆ ಪರಿಹಾರ: ವ್ಯಾಪಕ ಸ್ಪಂದನೆ
ಚಿಲ್ಲರೆ ಸಮಸ್ಯೆ ಪರಿಹಾರ, ನಗದು ರಹಿತ ಪ್ರಯಾಣ ಹಾಗೂ ಸಮಯದ ಉಳಿತಾಯ ಮುಂತಾದ ಪ್ರಯೋಜನಗಳಿಂದಾಗಿ ಸಾರ್ವಜನಿಕರಿಂದ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಗದಗದಲ್ಲಿ ಜರುಗಿದ ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಂಸ್ಥೆಯ ಬಸ್ಸುಗಳಲ್ಲಿ ನಗದು ರಹಿತ ಯುಪಿಐ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ವ್ಯವಸ್ಥೆಯನ್ನು ಎಲ್ಲ ಘಟಕಗಳಲ್ಲಿ ಅಳವಡಿಸುವ ಕಾರ್ಯವು ಫೆಬ್ರವರಿ 16 ರಂದು ಮುಕ್ತಾಯಗೊಂಡಿರುತ್ತದೆ. ಸಂಸ್ಥೆಯ 50 ಘಟಕಗಳ ಸಾರಿಗೆಗಳಲ್ಲಿ ಯುಪಿಐ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ಚಾಲನಾ ಸಿಬ್ಬಂದಿಗಳ ಮಧ್ಯೆ ಚಿಲ್ಲರೆ ಸಮಸ್ಯೆ ಉಂಟಾಗುವುದನ್ನು ತಡೆಯಬಹುದಲ್ಲದೇ ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡಿದಂತಾಗುತ್ತದೆ.

ಡಿಜಿಟಲ್ ಪಾವತಿ-ಆದಾಯ ವಿವರ
ಪ್ರಸ್ತುತ ಸಂಸ್ಥೆಯಲ್ಲಿ ಪ್ರತಿದಿನ ಅಂದಾಜು 15 ಸಾವಿರ ವಹಿವಾಟುಗಳಿಂದ ಒಟ್ಟು ಸುಮಾರು ರೂ.14 ಲಕ್ಷ ಆದಾಯ ಸಂಗ್ರಹವಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 2.59 ಲಕ್ಷ ವಹಿವಾಟುಗಳಿಂದ ಒಟ್ಟು ರೂ.3.79 ಕೋಟಿ ಸಂಗ್ರಹವಾಗಿರುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್ ಅವರು ತಿಳಿಸಿದ್ದಾರೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ಈ ಡಿಜಿಟಲ್ ಪಾವತಿ ಸೇವೆ ಜಾರಿಗೆ ಬರಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಸದ್ಯ ವಾಯವ್ಯ ಕರ್ನಾಟಕ ಬಸ್‌ಗಳಲ್ಲಿ ಈ ಯುಪಿಐ ಆಧಾರಿತ ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಜಾರಿಗೆ ಬರುತ್ತಿದೆ. ಇದು ವಿಧಾನವು ಕೆಕೆಆರ್‌ಟಿಸಿ ವ್ಯವಸ್ಥೆಯಲ್ಲೂ ಜಾರಿಗೆ ಬಂದಿದೆ.












Click it and Unblock the Notifications