ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ: ಮಾಜಿ ಸಚಿವ ದೇವೇಗೌಡ ಆರೋಪ

ಹುಬ್ಬಳ್ಳಿ, ಅಕ್ಟೋಬರ್‌, 12: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲ ಆಗಿದೆ. ಅಲ್ಲದೆ ತಮ್ಮ ಹಿತಾಸಕ್ತಿಗೆ ರಾಜ್ಯವನ್ನು ಬಲಿ ಕೊಟ್ಟಿದೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೊಬೆ ಕುರಿಸುವ ಕೆಲಸ ಮಾಡಲಾಗುತ್ತಿದೆ. ವಿದ್ಯುತ್ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಎಷ್ಟು ಹಣ ಇಟ್ಟಿದ್ದೀರಿ. 5 ಗ್ಯಾರಂಟಿ ಅಂತಾ ಹೊರಟಿದ್ದೀರಿ. ಈ ಗ್ಯಾರಂಟಿಗಳ ಮೇಲೆ 29 ಪಕ್ಷ ಕಟ್ಟಿಕೊಂಡು ಲೋಕಸಭಾ ಚುನಾವಣೆಗೆ ಹೊರಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

g-t-devegowda

ಅನ್ನಭಾಗ್ಯ ಯೋಜನೆಯಲ್ಲಿ ಒಂದು ಕಾಳು ಕೊಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ.ಜಿ. ಕೊಡುತ್ತಿದ್ದಾರೆ ಎಂದರು‌. ಇನ್ನು ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರವೇ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದೆ. ಈ ವಿಷಯದಲ್ಲಿ ತಮಿಳುನಾಡು, ಕಾವೇರಿ ಪ್ರಾಧಿಕಾರ, ಸುಪ್ರೀಂಕೋರ್ಟ್ ನೀರು ಬಿಡು ಅಂತಾ ಹೇಳಲಿಲ್ಲ. ಇವರೇ ಒಳೊಳಗೆ ಸ್ಟಾಲಿನ್ ಜೊತೆಗೆ ಕೊಡಿಕೊಂಡು ನೀರು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಮುಗಿದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಜಲಸ‌ಂಪನ್ಮೂಲ ಸಚಿವ ಶೇಖಾವತ್ ಅವರನ್ನು ಭೇಟಿ ಆಗುತ್ತಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಇಬ್ಬರೇ ಶೇಖಾವತ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಮತ್ತೇ ತಮಿಳುನಾಡಿಗೆ 5 ಟಿಎಂಸಿ ನೀರು ಬಿಟ್ಟರು. ಈಗ ಅವರ ಮೇಲೆ ಇವರ ಮೇಲೆ ಹಾಕುತ್ತಾರೆ. ಇದನ್ನು ಬಿಟ್ಟು ಯಾಕೆ ಸಂಕಷ್ಟ ಸೂತ್ರವನ್ನು ಕಂಡುಕೊಳ್ಳಲಿಲ್ಲ. ಕೃಷ್ಣ, ಆಲಮಟ್ಟಿ ಸೇರಿದಂತೆ ಇನ್ನುಳಿದಂತೆ ಜಲ ವಿವಾದ ಹೇಗೆ ಬಗೆಹರಿಸಿದರು ಗೊತ್ತಲ್ಲ. ಅದರಂತೆ ಮಾಡಬೇಕಿತ್ತು ಎಂದರು‌‌.

ಕಾವೇರಿ ಹಾಗೂ ಬರದ ವಿಚಾರದಲ್ಲಿ ಸುಳ್ಳು ಹೇಳುತ್ತಾ ಇದೆ ಇದೆ ರಾಜ್ಯ ಸರ್ಕಾರ. ಯಾವುದೇ ಬರ ಕಾಮಗಾರಿ ಆಗಿಲ್ಲಈಗ ಹೇಳುತ್ತಿದ್ದಾರೆ. 40 ಲಕ್ಷ ಕೋಟಿ ಬೆಳೆ ಹಾಗೂ 48,000 ಕೋಟಿ ಬೆಳೆ ಹಾನಿಯಾಗಿದೆ ಅಂತಾರೆ. ಇದುವರೆಗೆ ಒಂದು ರೂಪಾಯಿ ಸಹ ಕೊಟ್ಟಿಲ್ಲ. ಯಾವುದೇ ಬರ ಕಾಮಗಾರಿ ಮಾಡಿಲ್ಲ. ರೈತರು ಹಾಗೂ ಜಾನುವಾರುಗಳ ಸ್ಥಿತಿ ಏನಾಗಬಹುವು ಎಂದು ರಾಜ್ಯದ ಸರ್ಕಾರದ ವಿರುದ್ಧ ಗುಡುಗಿದರು.

ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲ. ನಾವು ದಿನಕ್ಕೆ 7 ಗಂಟೆಗಳ ಕಾಲ ಸತತವಾಗಿ ವಿದ್ಯುತ್ ಸರಬರಾಜು ಮಾಡಿದ್ದೆವು. ಈಗಿನ ಸರಕಾರ ಮೂರು ಅಲ್ಲ ಒಂದು ತಾಸು ಮಾಡಲೇ ಇಲ್ಲ ಎಂದು ಆರೋಪಿಸಿದರು. ಈ ವೇಳೆ ಹುಬ್ಬಳ್ಳಿ ಧಾರವಾಡ ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಮರದ, ಜಿಲ್ಲಾ ಅಧ್ಯಕ್ಷ ಬಿ.ವಿ. ಗಂಗಾಧರಮಠ, ಪ್ರಕಾಶ ಅಂಗಡಿ, ನವೀನ್ ಮಡಿವಾಳರ ಸೇರಿದಂತೆ ಮುಂತಾದವರು ಇದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+