Tourism: ಸರ್ಕಾರದಿಂದ 'ಕರ್ನಾಟಕ ಇಂಟರ್ ನ್ಯಾಶನಲ್ ಟ್ರಾವೆಲ್ ಎಕ್ಸಪೋ 2025'
ಹುಬ್ಬಳ್ಳಿ, ಫೆಬ್ರವರಿ 25: ಕರ್ನಾಟಕ ರಾಜ್ಯವು ಸದಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿ ಸುಮಾರು 25,000 ಕ್ಕಿಂತಲೂ ಅದಿಕ ಪ್ರವಾಸಿ ತಾಣಗಳ ಇರುವ ಮಾಹಿತಿ ಇದೆ. ಈ ಪೈಕಿ ಕೇವಲ 800 ಪ್ರವಾಸಿ ತಾಣಗಳನ್ನು ರಕ್ಷಿಸುತ್ತಿವೆ. ರಾಜ್ಯದ ಈ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿದೆ. ಇದನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ.
ಕರ್ನಾಟಕ ಸರ್ಕಾರವು ಕರ್ನಾಟಕ ಇಂಟರ್ ನ್ಯಾಶನಲ್ ಟ್ರಾವೆಲ್ ಎಕ್ಸಪೋ ಕಾರ್ಯಕ್ರಮವನ್ನು ಫೆಬ್ರವರಿ ಫೆಬ್ರವರಿ 26, 27 ಮತ್ತು 28ರಂದು ನಡೆಸಲಾಗುತ್ತದೆ. ಫೆಬ್ರವರಿ 26ರಂದು ಸಂಜೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.

ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಪ್ರವಾಸಿ ತಾಣಗಳ ಬಗ್ಗೆ ಜಗತ್ತಿಗೆ ತಿಳಿಸಲು, ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ವಿಶೇಷ ನಡೆಸಲಾಗುತ್ತಿದೆ.
ಒಟ್ಟು ಮೂರು ದಿನಗಳ ಈ ಕಾರ್ಯಕ್ರಮ ಬೆಂಗಳೂರಿನಿಂದ ತುಮಕೂರಿಗೆ ತೆರಳುವ ಮಾರ್ಗ ಮಧ್ಯ ಇರುವ 'ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ' (BIEC)ಯಲ್ಲಿ ಮೈದಾನದಲ್ಲಿ ಜರುಗಲಿದೆ. ಸಾವಿರಾರು ಜನರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.

ಈ ಮೂಲಕ ಪ್ರವಾಸೋದ್ಯಮದ ಮೂಲಕ ವಾಣಿಜ್ಯ, ವ್ಯಾಪಾರಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ಕೇಂದ್ರ ಪ್ರವಾಸ ಇಲಾಖೆಯ ಸಹಕಾರ ಸಹ ಕಾರ್ಯಕ್ರಮಕ್ಕೆ ಇದೆ. ಅಷ್ಟೇ ಅಲ್ಲದೇ ಹೋಟೆಲ್ ಉದ್ಯಮಿಗಳು, ಲಾಡ್ಜ್, ವಸತಿ, ಹೋಮ್ ಸ್ಟೇ, ಟ್ರಾವೆಲ್ ಉದ್ಯಮಿಗಳು ಇದಕ್ಕೆ ಕೈ ಜೋಡಿಸಿದ್ದಾರೆ. ಪ್ರಯಾಣ ಪ್ರೇಮಿಗಳು, ಪ್ರವಾಸಿಗರು ಸೇರಿದಂತೆ ವಿವಿಧ ವಲಯದವರು ಈ ಎಕ್ಸಪೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಾರ್ಷಿಕ 1.25 ಕೋಟಿ ಪ್ರವಾಸಿಗರ ಆಗಮನ
ಪ್ರತಿವರ್ಷ ರಾಜ್ಯಕ್ಕೆ 1 ಕೋಟಿ 25 ಲಕ್ಷಕ್ಕೂ ಅಧಿಕ ಪ್ರವಾಸಿಗಳು ಆಗಮಿಸಲಿದ್ದಾರೆ. ರಾಜ್ಯದಲ್ಲಿ ಅಸಂಖ್ಯಾತ ಪ್ರವಾಸಿ ತಾಣಗಳಿವೆ. 25 ಸಾವಿರಕ್ಕೂ ಹೆಚ್ಚು ಅರಕ್ಷಿತ ಸ್ಮಾರಕಗಳಿವೆ. ಇದರಲ್ಲಿ 800ಕ್ಕೂ ಹೆಚ್ಚು ಸ್ಮಾರಕಗಳ ರಕ್ಷಣೆ ಮಾಡಲಾಗಿದೆ. ಇವುಗಳನ್ನು ಬೆಳಕಿಗೆ ತರುವ ಕೆಲಸ ಮಾಡಲಾಗುವುದು. ಈ ಮೂಲಕ ಮುಂದಿನ ಪೀಳಿಗೆಗೆ ಇವುಗಳ ಮಹತ್ವ ತಿಳಿಸಲಾಗುವುದು.
ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ದತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕಾರ ಸೇರಿದಂತೆ ಮುಂತಾದವು ಪ್ರದರ್ಶನಗೊಳಲಿವೆ. ಪ್ರವಾಸೋದ್ಯಮ ಸಮಗ್ರ ಬೆಳೆವಣಿಗೆ ಇದರ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.












Click it and Unblock the Notifications