Jagadish Shettar: ಕರ್ನಾಟಕದಲ್ಲಿ ಈಗ ಚುನಾವಣೆ ನಡೆದ್ರೆ ಬಿಜೆಪಿಗೆ ಎಷ್ಟು ಸೀಟು ಬರಲಿವೆ? ಜಗದೀಶ್ ಶೆಟ್ಟರ್ ನೀಡಿದ ಅಂಕಿಅಂಶ
ಹುಬ್ಬಳ್ಳಿ ನವೆಂಬರ್ 30: ಬಿಜೆಪಿಯಲ್ಲಿ ಎಲ್ಲವೂ ಹದಗೆಟ್ಟು ಹೋಗಿದೆ. ಮುಂಬರುವ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸ್ಥಾನಗಳಿಂದ ಅವರು ಹೀನಾಯ ಸೋಲು ಕಾಣಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, 'ಈ ಹಿಂದೆ 2018 ರಲ್ಲಿ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸಭೆ ಚುನಾವಣಾ ನಡೆತು, ಆವಾಗ ಎಷ್ಟೇ ಗುದ್ದಾಡಿದರು ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ. ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರೋದಿಲ್ಲ' ಎಂದು ತಿಳಿಸಿದ್ದಾರೆ.

'ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರ ಅಲ್ಲಾ ಯಾರು ಅಧ್ಯಕ್ಷ ಆದರೂ ಅದನ್ನು ಸರಿ ಮಾಡಲು ಆಗುವುದಿಲ್ಲ. ಇನ್ನು ಐದು ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ಫಲಿತಾಂಶ ಬರುತ್ತೆ' ಎಂದು ಖಡಕ್ ಆಗಿ ಹೇಳಿದ್ದಾರೆ.
'ಮಧ್ಯಪ್ರದೇಶ, ಛತ್ತೀಸ್‌ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ತೆಲಂಗಾಣದ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳಿವೆ. ರಾಜಸ್ಥಾನದಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಆದರೆ ವಿಜಯ ಕಾಂಗ್ರೆಸ್‌ಗೇ ಬರುತ್ತದೆ. ಜನರ ಭಾವನೆ ಯಾವ ರೀತಿ ಇದೆ ಎನ್ನುವುದನ್ನು ಈ ಚುನಾವಣಾ ಫಲಿತಾಂಶ ತಿಳಿಸುತ್ತದೆ' ಎಂದು ಜಗದೀಶ್ ಶೆಟ್ಟರ್ ಹರಿಹಾಯ್ದಿದ್ದಾರೆ.
ಜೊತೆಗೆ 'ಯಾವುದೇ ರಾಜಕೀಯ ಪಕ್ಷಗಳು ಕೊನೆಯ ಹಂತದವರಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಬಾರದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು. ಇದರಿಂದಾಗಿ ಅಭ್ಯರ್ಥಿಗಳು ಅತೀ ಹೆಚ್ಚು ಜನರನ್ನು ತಲುಪಬಹುದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳ್ಳೆಯದು' ಎಂದು ಕಿವಿಮಾತು ಹೇಳಿದರು.

'ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೇಲಿನ ಪ್ರಕರಣ ವಾಪಾಸ್ ಪಡೆದ ಕುರಿತು ಮಾತನಾಡಿದ ಅವರು, 'ಕಾನೂನಿನಲ್ಲಿ ಪ್ರಕರಣ ವಾಪಸು ಪಡೆಯಲು ಅವಕಾಶಯಿದೆ. ಈ ಹಿಂದಿನ ಸರ್ಕಾರ ಹರಿಬರಿಯಲ್ಲಿ ಸಿಬಿಐ ತನಿಖೆ ಪ್ರಕರಣ ನೀಡಿತ್ತು. ಅದನ್ನು ಇವತ್ತು ವಾಪಸು ಪಡೆಯಲಾಗಿದ್ದು ಕಾನೂನಿನಲ್ಲಿ ಪ್ರಕರಣ ವಾಪಸು ಪಡೆಯಲು ಅವಕಾಶಯಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ. ಈ ಹಿಂದಿನ ಸರ್ಕಾರ ಸರಿಯಾಗಿ ಕಾನೂನಾತ್ಮಕವಾಗಿ ಪ್ರಕರಣ ನೀಡಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಕುಟುಕಿದರು.
'ಡಿಕೆ ಶಿವಕುಮಾರ್ ವಿಚಾರದಲ್ಲಿ ಕಾನೂನು ಬದ್ಧತೆಯಿದೆ. ಇದಕ್ಕೆ ಬಿಜೆಪಿ ಬೆರಳು ಮಾಡಬಾರದು. ಇಂದು ಎಲ್ಲವೂ ರಾಜಕೀಯವಾಗಿದೆ. ಸಿಬಿಐ ಐಟಿ, ಇಡಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಈ ರೀತಿಯ ಸಂಸ್ಥೆಗಳ ಬಗ್ಗೆ ಜನರಿಗೆ ಹೆದರಿಕೆ ಇತ್ತು. ಆದರೆ ಈಗ ಸಿಬಿಐ ಅಂದ್ರೂ ಹೆದರಿಕೆ ಇಲ್ಲ. ಐಟಿ ಅಂದ್ರೂ ಹೆದರಿಕೆ ಇಲ್ಲ. ಇದೆಲ್ಲಾ ನಾಟಕೀಯ ಅಂತ ಜನ ಆಲೋಚನೆ ಮಾಡುತ್ತಿದ್ದಾರೆ' ಎಂದು ದೂರಿದರು.
'ಇಷ್ಟು ದಿನ ಐಟಿ ಮತ್ತು ಈಡಿ ದಾಳಿ ಮಾಹಿತಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ. ದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ. ಹುಬ್ಬಳ್ಳಿ ಧಾರವಾಡದಲ್ಲಿ ಯಾರು ಪ್ರಬಲವಾಗಿ ರಾಜಕೀಯ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಅಂತಹವರ ಮೇಲೆ ಐಟಿ ದಾಳಿಯಾಗಿದೆ. ನನ್ನ ಆಪ್ತರ ಮೇಲೆ, ಬೆಂಬಲಿಗರಿಗೆ ಐಟಿ ದಾಳಿ ಬೆದರಿಕೆ ಹಾಕಿ. ನಮ್ಮ ಮನೆ ಹತ್ತಿರ ಬಾರದಂತೆ ತಡೆಯಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಎಲ್ಲಾ ಚುನಾವಣೆಯಲ್ಲಿ ಕಾಯಂ ಟಾರ್ಗೆಟ್ ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ. ನನ್ನ ಮೇಲೆ ಐಟಿ ದಾಳಿ ನೆಡಸಲಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications