ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಅಗಿದ್ದಾರೆ-ಸಿ.ಎಂ. ಇಬ್ರಾಹಿಂ
ಹುಬ್ಬಳ್ಳಿ ಅಕ್ಟೋಬರ್ 26: ಬಿಜೆಪಿ, ಕಾಂಗ್ರೆಸ್‌ನವರು ಬಸ್ ಸ್ಟಾಂಡ್ ಬಸವೆಯರ ತರಹ ಆಗಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ನವರೆಗೆ ಮಾನ ಮರ್ಯಾದೆ,ಜೈಲ್, ಬೇಲು ಇಲ್ಲದಂತಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸ್ಥಾನ ಇಲ್ಲ ಮಾನ ಇದೆ ಆದರೆ ಬಿಜೆಪಿಯಲ್ಲಿ 12 ಜನರ ವಿಡಿಯೋ ಸಲುವಾಗಿ ಬೇಲ್ ತೆಗೆದುಕೊಂಡು ಕುಳಿತಿದ್ದಾರೆ. ಅದರಲ್ಲಿ ಏನು ಇದೆ ಅಂತ ನಾನು ನ್ಯಾಯಧೀಶರಿಗೆ ಹೇಳಬೇಕು ಎಂದುಕೊಂಡಿದ್ದೇನೆ ಎಂದರು.

ಕರ್ನಾಟಕದಲ್ಲಿ ಬರಿ ಇಂತಹದ್ದೇ ನಡೆಯುತ್ತಿದೆ..
ಇನ್ನು ಹಲವಾರು ನಾಯಕರು ಹಾಗೂ ಶಾಸಕರ ಸಿಡಿ ಬಿಡುಗಡೆಯಾಗದಂತೆ ಕೋರ್ಟ್ ನಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಬರಿ ಇಂತಹದ್ದೇ ನಡೆಯುತ್ತಿದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ವಿದ್ಯಾರಣ್ಯ ಪುರ ಶ್ರೀಗಳ ನಾಡು ಇದು. ಬಸವಾದಿ ಶರಣರು, ಕನಕದಾಸರು, ಸೂಫಿ ಸಂತರು ಕಟ್ಟಿದ ನಾಡಿದು. ಇಂತಹ ನಾಡಿನಲ್ಲಿ ಏನೆಲ್ಲಾ ನಡೆದಿದೆ. ಇನ್ನೂ ಏನೇನು ನೋಡಬೇಕು ಕೇಳಬೇಕು ಎಂದು ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.

1995 ಕಾಲದ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಬರುತ್ತದೆ
ಅಹಿಂದ್ ಸಂಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾವು ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಜೊತೆಗೆ ಹೋಗುತ್ತಿದ್ದೇವೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಕಟ್ಟಿದ ಸಂಘ ಇದು. ಎಲ್ಲ ಸಮಾಜದವರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. 1995 ಕಾಲದ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಬರುತ್ತದೆ. ಬಸವ ಕೃಪದಲ್ಲಿ ಬೆಳೆದರಿಗೆ ಕೇಶವಕೃಪ ಸರಿ ಇರಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ ಬಸವ ಕೃಪಕ್ಕೆ ಬರುತ್ತಾರೆ ಎಂದರು.

ಜಂಗರಮರ ಜೊತೆಗೆ ಜಗಳವಾಡಬೇಡಿ
ಇನ್ನು ವೀರೇಂದ್ರ ಪಾಟೀಲ್ ಅವರನ್ನು ಎಂದು ಕಾಂಗ್ರೆಸ್ ತೆಗೆದು ಹಾಕಿತು. ಅಂದು ಬಿದ್ದಿರುವ ಜಂಗಮರ ಶಾಪ ಇಂದು ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ಯಾರ ಜೊತೆಯಾದರೂ ಆದರು ಜಗಳವಾಡಿ ಆದರೆ ಜಂಗರಮರ ಜೊತೆಗೆ ಜಗಳವಾಡಬೇಡಿ. ಲಿಂಗ ಕಟ್ಟಿರಿತಾರೆ ಅದನ್ನ ತೆಗೆದು ಬಿಸಾಕಿದರೆ ಕಲಾಸ್ ಆಗುತ್ತಾರೆ ಮುಗಿತು ಅಂತಾನೆ ಲೆಕ್ಕ ಎಂದು ಜೆಡಿಎಸ್ ರಾಜ್ಯಾಧ್ಜಕ್ಷ ಸಿಎಂ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿಎಂ ಇಬ್ರಾಹಿಂ ವ್ಯಂಗ್ಯ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಕರ್ನಾಟಕದ ಮೇಲೆ ಪರಿಣಾಮ ಬೀರುವ ಕುರಿತು ಸಿಎಂ ಇಬ್ರಾಹಿಂ ಮಾತನಾಡಿದ್ದು, ಕರ್ನಾಟಕಕ್ಕೆ ಅಧ್ಯಕ್ಷರಾಗಿದ್ದಾಗ ಪಾರ್ಟಿ ಅಧಿಕಾರಕ್ಕೆ ಬರಲಿಲ್ಲ. 24 ಗಂಟೆಗಳ ಕಾಲ ಕರ್ನಾಟಕದಲ್ಲಿ ಇದ್ದೇ ಏನು ಮಾಡಲು ಆಗಲಿಲ್ಲ. ಇನ್ನು ಎರಡು ಗಂಟೆಗಳಲ್ಲಿ ಕರ್ನಾಟಕಕ್ಕೆ ಏನು ಮಾಡುತ್ತಾರೆ. ಅವರಿಂದ ಏನು ಆಗಲ್ಲ ಎಂದು ಸಿ.ಎಂ. ಇಬ್ರಾಹಿಂ ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಲೇವಡಿ ಮಾಡಿದ್ದಾರೆ.












Click it and Unblock the Notifications