HESCOM: ವಿಪರೀತ ಗಾಳಿ ಮಳೆಗೆ 5,404 ವಿದ್ಯುತ್ ಕಂಬಳಿಗೆ ಹಾನಿ, ಹೆಸ್ಕಾಂಗೆ ಕೋಟ್ಯಾಂತರ ರೂ. ನಷ್ಟ.!

ಹುಬ್ಬಳ್ಳಿ, ಜುಲೈ 25: ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಎರಡು ವಾರಗಳಿಂದಲೂ ಸುರಿಯುತ್ತಿರುವ ನಿರಂತರ ಮಳೆಯಿಂದ ಮನೆಯಿಂದ ಹೊರ ಹೋಗದ ಸ್ಥಿತಿ ಇದೆ. ಗಾಳಿ ಮಳೆಗೆ ಕೆಲವೆಡೆ ಗುಡ್ಡ ಕುಸಿದಿದೆ. ಗಿಡ ಮರಗಳು ಧರೆಗುರುಳಿವೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)ಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಹೌದು, ಹುಬ್ಬಳ್ಳಿ-ಧಾರವಾಡದ ಅವಳಿನಗರದಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಇದರಿಂದಾಗಿ ಹೆಸ್ಕಾಂನ ಅಂದಾಜು 9.82 ಕೋಟಿ ರೂ. ನಷ್ಟವುಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

HESCOM See Loss Rs 9 82 Crore Due to Heavy Rain 5 404 Electricity poles Damaged

ವಿಪರೀತ ಮಳೆಗೆ ಇದುವರೆಗೆ 5,404 ವಿದ್ಯುತ್‌ ಕಂಬಗಳು, 536 ವಿದ್ಯುತ್ ಪರಿವರ್ತಕಗಳು, 184.43 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಹಾನಿ ಆಗಿವೆ. ಬಿಡುವು ನೀಡದೇ ಸುರಿಯುತ್ತಿರುವ ಮಳೆಯ ನಡುವೆಯೇ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳು ಹಾಗೂ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿ ಮಾಡುತ್ತಿದ್ದಾರೆ.

5,402 ವಿದ್ಯುತ್ ಕಂಬಗಳಿಗೆ ಹಾನಿ

ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ದಾಂಡೇಲಿ, ಅಂಕೋಲಾ, ಕಾರವಾರ, ಕುಮಟಾ ಹೊನ್ನಾವರ ಹಾಗೂ ಭಟ್ಕಳ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಒಟ್ಟು 5,402 ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಅವುಗಳ ಪೈಕಿ 5,215 ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡಲಾಗಿದೆ.

HESCOM See Loss Rs 9 82 Crore Due to Heavy Rain 5 404 Electricity poles Damaged

ಉಳಿದಂತೆ 187 ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ ನಡೆಯುತ್ತಿದೆ. 536 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದು, ಅವುಗಳ ಪೈಕಿ 531 ಟಿ.ಸಿ.ಗಳ ದುರಸ್ತಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಕೇವಲ 5 ಟಿ.ಸಿಗಳ ದುರಸ್ತಿ ಕಾರ್ಯ ಮಾತ್ರ ಬಾಕಿಯಿದೆ. ಅದೇ ರೀತಿ ಹಾನಿಯಾದ 184.43 ಕಿ.ಮೀ. ಉದ್ದದ ವಿದ್ಯುತ್‌ ತಂತಿಯಲ್ಲಿ 176.69 ಕಿ.ಮೀ. ಉದ್ದದ ವಿದ್ಯುತ್ ತಂತಿಯನ್ನು ದುರಸ್ತಿ ಮಾಡಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಹೆಸ್ಕಾಂ ನಿರಂತರ ಶ್ರಮ ವಹಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೂನ್ 1 ರಿಂದ ಜುಲೈ 22ರವರೆಗೆ ಅಧಿಕ ನಷ್ಟ ಕಂಡ ಹೆಸ್ಕಾಂ

ಜೂನ್ 1 ರಿಂದ ಜುಲೈ 22 ವರೆಗಿನ ಅವಧಿಯಲ್ಲಿ ಸುರಿದ ಭಾರೀ ಮಳೆಯಿಂದ ಹೆಸ್ಕಾಂಗೆ ಹೆಚ್ಚು ನಷ್ಟವುಂಟಾಗಿದೆ. ಈ ಅವಧಿಯಲ್ಲಿ ಒಟ್ಟು 1,957 ವಿದ್ಯುತ್ ಕಂಬಗಳು, 120 ವಿದ್ಯುತ್ ಪರಿವರ್ತಕಗಳು ಹಾಗೂ 91.76 ಕಿ.ಮೀ ಉದ್ದದ ವಿದ್ಯುತ್ ತಂತಿ ಹಾನಿಯಾಗಿದ್ದು, ಇದರಿಂದ ಅಂದಾಜು 3.49 ಕೋಟಿ ರೂ. ಹಾನಿಯಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.

ತಾಲೂಕುವಾರು ನಷ್ಟದ ಮಾಹಿತಿ

ತಾಲೂಕಾವಾರು ನಷ್ಟದ ಮಾಹಿತಿ ನೋಡುವುದಾದರೆ, ಶಿರಸಿಯಲ್ಲಿ 148.53 ಲಕ್ಷ ರೂ., ಸಿದ್ದಾಪುರ 88.90 ಲಕ್ಷ ರೂ., ಯಲ್ಲಾಪುರ 141.80 ಲಕ್ಷ ರೂ., ಮುಂಡಗೋಡದಲ್ಲಿ 72.31 ಲಕ್ಷ ರೂ., ಹಳಿಯಾಳ 28.30 ಲಕ್ಷ ರೂ., ಜೋಯಿಡಾ 49.52 ಲಕ್ಷ ರೂ., ದಾಂಡೇಲಿ 4.64 ಲಕ್ಷ ರೂ., ಅಂಕೋಲಾ 88.54 ಲಕ್ಷ ರೂ., ಕಾರವಾರ 38.96 ಲಕ್ಷ ರೂ., ಕುಮಟಾ 121.48 ಲಕ್ಷ ರೂ., ಹೊನ್ನಾವರ 157.28 ಲಕ್ಷ ರೂ., ಭಟ್ಕಳ 42.25 ಲಕ್ಷ ರೂ. ನಷ್ಟವಾಗಿದೆ. ಇದೆಲ್ಲ ಸೇರಿ ಒಟ್ಟು ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 9.82 ಕೋಟಿ ರೂ. ಆಗಿದೆ ಎಂದು ಹೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+